ಪುಟ್ಟಗೌರಿ ಮದುವೆ, ನಾಗಿಣಿ 2 ಖ್ಯಾತಿಯ ನಟಿ ನಮ್ರತಾ (Namratha Gowda) ಬಿಗ್ ಬಾಸ್ ಮನೆಯಲ್ಲಿ ಡವ್ ಮಾಡ್ತಿದ್ದಾರಾ? ಅವರ ನಿಜ ವ್ಯಕ್ತಿತ್ವವನ್ನು ತೋರಿಸ್ತಾ ಇಲ್ಲವಾ? ಡ್ರಮಾ ಮಾಡ್ತಿದ್ದಾರಾ? ಖಾಸಗಿ ಬದುಕಿನ ಘಟನೆಗಳನ್ನು ಹಂಚಿಕೊಂಡು ಸಿಂಪತಿ ಗಿಟ್ಟಿಸಿಕೊಂಡಿದ್ದ ನಮ್ರತಾ ಇದೀಗ ನೋಡುಗರ ಟಾರ್ಗೆಟ್ ಆಗ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಮ್ರತಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ನಮ್ರತಾ ಆಟ ನೋಡಿ ಡವ್ ರಾಣಿ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
ಬಿಗ್ ಬಾಸ್ ಮನೆ (Bigg Boss ಒಳಗೆ ಎಂಟ್ರಿ ಕೊಟ್ಟ ಮೊದಲ ಕಂಟೆಸ್ಟೆಂಟ್ ನಮ್ರತಾ. ನಿಮ್ಮ ಎಂಟ್ರಿಯಿಂದ ನಿಮಗೂ ಒಳ್ಳೆದಾಗಲಿ, ಮನೆಗೆ ಒಳ್ಳೆದಾಗಲಿ ಎಂದು ಶುಭ ಹಾರೈಸಿ ಕಳುಹಿಸಿದ್ದರು ಸುದೀಪ್. ನಮ್ರತಾ ಈ ಸೀಸನ್ ನ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ನಂಬಲಾಗಿತ್ತು. ಮೊದಲ ವಾರ ಅದನ್ನು ಸಾಬೀತೂ ಪಡಿಸಿದರು. ಆದರೆ, ಅವರು ಮೊದಲಿನ ಹಾಗೆ ಉಳಿದುಕೊಂಡಿಲ್ಲ. ಇದನ್ನೂ ಓದಿ:ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ಸಣ್ಣ ಸಣ್ಣ ವಿಷಯಕ್ಕೂ ನಮ್ರತಾ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ತಾವೇ ಗ್ರೇಟ್ ಅಂತ ಅಂದುಕೊಂಡಿದ್ದಾರೆ. ಸುಖಾಸುಮ್ಮನೆ ಜಗಳಗಂಟಿ ಅನಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ತನಿಷಾ ವಿಚಾರದಲ್ಲಿ ರಂಪಾಟ ಮಾಡಿ, ನೋಡುಗರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಮಾತು ಹಿಡಿತದಲ್ಲಿ ಇಟ್ಟುಕೊಳ್ಳದೇ ಎಲ್ಲರನ್ನೂ ಬೇಜಾರು ಮಾಡಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಡವ್ ರಾಣಿ ಪಟ್ಟ ಸಿಕ್ಕಿದೆ.
ನಮ್ರತಾ ಒಳ್ಳೆಯ ನಟಿ, ಕಷ್ಟದಿಂದ ಮೇಲೆ ಬಂದವರು. ಸ್ಟ್ರಾಂಗ್ ಸ್ಪರ್ಧಿ, ಮೆಚ್ಚಿಸಿಕೊಳ್ಳಬೇಕಾದ ಎಲ್ಲ ಗುಣವೂ ಅವರಲ್ಲಿವೆ. ಆದರೆ, ಅವರು ಬದಲಾಗಲೇಬೇಕು. ಈಗಾಗಲೇ ಅವರಿಗೆ ಅಂಟಿರೋ ಆಪಾದನೆಯನ್ನು ತೊಳೆದುಕೊಳ್ಳಲೇಬೇಕು. ಅದಕ್ಕೆ ಇನ್ನೂ ಅವಕಾಶವಿದೆ. ಅದನ್ನು ಅರ್ಥಮಾಡಿಕೊಳ್ತಾರೆ ಅನ್ನೋ ನಂಬಿಕೆ ಎಲ್ಲರದ್ದು. ಅದನ್ನು ಮಾಡ್ತಾರಾ ಅಂತ ಕಾದು ನೋಡಬೇಕು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]