ಕಿರುತೆರೆಯ ಮಂಗಳಗೌರಿ ಮದುವೆ, ಬಿಗ್ ಬಾಸ್ (Bigg Boss) ಮೂಲಕ ಮೋಡಿ ಮಾಡಿದ್ದ ಚೆಲುವೆ ಕಾವ್ಯಶ್ರೀ ಗೌಡ (Kavyashree Gowda) ಸಿನಿಮಾರಂಗಕ್ಕೆ ಬರಲು ಸಕಲ ತಯಾರಿ ಮಾಡ್ತಿದ್ದಾರೆ. ಸದ್ಯ ಅಳುಮುಂಜಿ ಮಂಗಳಗೌರಿ ಮಾಡರ್ನ್ ಲುಕ್ನಲ್ಲಿ ಮಿಂಚಿರುವ ಹೊಸ ಫೋಟೋಶೂಟ್ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ನಟಿ ಲಾವಣ್ಯ ಜೊತೆ ಹಸೆಮಣೆ ಏರಲು ರೆಡಿಯಾದ ವರುಣ್ ತೇಜ್
View this post on Instagram
ಮಂಗಳಗೌರಿಯಾಗಿ ಅಪಾರ ಅಭಿಮಾನಿಗಳ ಮನಗೆದ್ದ ನಟಿ ಕಾವ್ಯಶ್ರೀ, ತಮ್ಮ ಮುಗ್ಧ ನಟನೆಯ ಮೂಲಕ ಸೈ ಎನಿಸಿಕೊಂಡಿದ್ದರು. ಬಿಗ್ ಬಾಸ್ ಸೀಸನ್ 9ಕ್ಕೂ (Bigg Boss Kannada 9) ಕಾಲಿಟ್ಟು ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡರು.
View this post on Instagram
ಆರೆಂಜ್ ಕಲರ್ ಟಾಪ್, ವೈಟ್ ಮತ್ತು ನೀಲಿ ಮಿಕ್ಸ್ ಜೀನ್ಸ್ನಲ್ಲಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ಕರ್ಲಿ ಫ್ರಿ ಹೇರ್ಸ್ ಬಿಟ್ಟು ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ಸದಾ ಟ್ರಡಿಷನಲ್ ಲುಕ್ನಲ್ಲಿ ಕಾಣಿಸಿಕೊಳ್ತಿದ್ದ ನಟಿ ಈಗ ಮಾಡರ್ನ್ ಅವತಾರದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಂಗಳಗೌರಿಯ ನಯಾ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
View this post on Instagram
ದೊಡ್ಮನೆಯಿಂದ ಹೊರ ಬಂದ ಮೇಲೆ ಚಿತ್ರರಂಗದಲ್ಲಿ ಮಿಂಚಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಕಾವ್ಯಶ್ರೀ ರೆಡಿಯಿದ್ದಾರೆ. ಸಿನಿಮಾಗಾಗಿ ಕಥೆಗಳನ್ನ ನಟಿ ಕೇಳುತ್ತಿದ್ದಾರೆ. ಶೀಘ್ರದಲ್ಲಿಯೇ ಈ ಕುರಿತ ಅಪ್ಡೇಟ್ ಹೊರಬೀಳಲಿದೆ. ಕಿರುತೆರೆಯಲ್ಲಿ ಕಾವ್ಯಶ್ರೀ ಯಶಸ್ಸು ಗಿಟ್ಟಿಸಿಕೊಂಡ ಹಾಗೆ ಹಿರಿತೆರೆಯಲ್ಲೂ ಅದೃಷ್ಟ ಖುಲಾಯಿಸುತ್ತಾ ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k