ಕಡಿಮೆ ಮತಗಳನ್ನು ಪಡೆಯುವ ಮೂಲಕ ಡ್ರೋನ್ ಪ್ರತಾಪ್, ನಟಿ ತನಿಷಾ ಕುಪ್ಪಂಡ, ನಟಿ ಸಂಗೀತಾ ಶೃಂಗೇರಿ, ರೈತ ವರ್ತುರ್ ಸಂತೋಶ್, ನಟ ಕಾರ್ತಿಕ್ ಮಹೇಶ್ ಮತ್ತು ಬುಲೆಟ್ ಪ್ರಕಾಶ್ ಪುತ್ರ ರಕ್ಷರ್ ವೇಟಿಂಗ್ ಲಿಸ್ಟ್ ನಲ್ಲಿ ಇದ್ದರು. ಇವರಿಗೆ ಬಿಗ್ ಬಾಸ್ (Bigg Boss Karnataka)ವಿಶೇಷ ಟಾಸ್ಕ್ ಕೊಡುವ ಮೂಲಕ ದೊಡ್ಮನೆ ಒಳಗೆ ಕಳುಹಿಸುತ್ತಾರೆ ಎಂದು ನಂಬಲಾಗಿತ್ತು. ಆದರೆ, ವಿಶೇಷ ಟ್ವಿಸ್ಟ್ ಕೊಟ್ಟರು ಸುದೀಪ್.
Advertisement
ಹೋಲ್ಡ್ ನಲ್ಲಿ ಇರಿಸಿರುವ ಈ ಆರು ಸ್ಪರ್ಧಿಗಳನ್ನು ಮನೆ ಒಳಗೆ ಕಳುಹಿಸುವುದಾಗಿ ಹೇಳಿದ ಸುದೀಪ್, ಅವರಿಗೆ ಒಂದು ವಾರಗಳ ಕಾಲ ಕಾಲಾವಕಾಶ ನೀಡಿದ್ದಾರೆ. ಈ ಒಂದು ವಾರದಲ್ಲಿ ಬಿಗ್ ಬಾಸ್ ಆದೇಶ ನೋಡಿಕೊಂಡು ಅವರು ಮನೆಯಲ್ಲಿ ಇರುತ್ತಾರಾ ಅಥವಾ ಇಲ್ಲವಾ ಎನ್ನುವುದನ್ನು ನಿರ್ಧರಿಸಲಾಗುವುದು ಎಂದಿದ್ದಾರೆ ಸುದೀಪ್.
Advertisement
Advertisement
ಈ ಬಾರಿ ಒಟ್ಟು 19 ಸ್ಪರ್ಧಿಗಳು ವೇದಿಕೆಯ ಮೇಲೆ ಬಂದಿದ್ದರು. ಅದರಲ್ಲಿ ಇಬ್ಬರು ಮತವನ್ನು ಪಡೆಯಲಾಗದೇ ತಮ್ಮ ಮನೆಗೆ ವಾಪಸ್ಸಾದರು. 11 ಸ್ಪರ್ಧಿಗಳು ವೋಟು ಪಡೆದುಕೊಂಡು ಮನೆ ಒಳಗೆ ಪ್ರವೇಶ ಮಾಡಿದರು. ಉಳಿದ ಆರು ಜನರು ಕಡಿಮೆ ಮತಗಳನ್ನು ಪಡೆದು ವೇಟಿಂಗ್ ಲಿಸ್ಟ್ ನಲ್ಲಿದ್ದಾರೆ.
Advertisement
ದೊಡ್ಮನೆಗೆ ಹೋಗಲು ವಿಫಲ
ದೇಹದಾರ್ಢ್ಯ ಎಂಬುದು ಪುರುಷರಿಗೆ ಮೀಸಲಾಗಿದ್ದಲ್ಲ ಎಂಬುದಕ್ಕೆ ಪುರಾವೆಯಂತಿರುವ ಚಿತ್ರಾಲ್ (Chitral), ಅದಕ್ಕೂ ಮೊದಲು ನಟಿಯಾಗಿಯೂ ಕಿರುತೆರೆ, ಹಿರಿತೆರೆಯಲ್ಲಿ ಗುರ್ತಿಸಿಕೊಂಡವರು. ದಪ್ಪ ಇದ್ದೀಯಾ ಎನ್ನುವ ಕಾರಣಕ್ಕೆ ಅವಕಾಶಗಳನ್ನು ತಪ್ಪಿಸಿಕೊಳ್ಳತೊಡಗಿದಾಗ ಜಿಮ್ಗೆ ಎಡತಾಕಿದ ಚಿತ್ರಾಗೆ ವರ್ಕೌಟ್ ಎನ್ನುವುದು ಅಡಿಕ್ಟ್ ಆಗಿಬಿಟ್ಟಿತು. ಬಾಡಿಬಿಲ್ಡಿಂಗ್ ಅನ್ನು ಹವ್ಯಾಸಿಕೊಂಡು ಸ್ಪರ್ಧೆಗಳಲ್ಲಿಯೂ ಪಾಲ್ಗೊಳ್ಳತೊಡಗಿದರು.
ನಟನೆಯಿಂದ ದೇಹದಾರ್ಢ್ಯ ಕ್ಷೇತ್ರಕ್ಕೆ ಬಂದು ಮಿಂಚುತ್ತಿರುವ ಚಿತ್ರಾ ಅವರಿಗೆ ಜನರು 38% ವೋಟ್ ನೀಡಿದ್ದಾರೆ. ಹೀಗಾಗಿ ಬಿಗ್ಬಾಸ್ (Bigg Boss Kannada) ಮನೆಯೊಳಗೆ ಹೋಗುವ ಅವಕಾಶದಿಂದ ಅವರು ವಂಚಿತರಾಗಿದ್ದಾರೆ. ಹಾಗಾಗಿ ಅವರು ಮನೆ ಒಳಗೆ ಹೋಗಲು ವಿಫಲರಾದರು.
Web Stories