ಈ ಬಾರಿ ಚಾರ್ಲಿ ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಮಾಡಲಿದೆ ಎಂದು ವಾಹಿನಿ ಹೇಳಿಕೊಂಡಿತ್ತು. ಚಾರ್ಲಿ(Charli) ದೊಡ್ಮನೆಗೆ ಬಂದೇ ಬರುತ್ತಾನೆ ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದರು. ಆದರೆ, ಇಂದು ಗ್ರ್ಯಾಂಡ್ ಓಪನಿಂಗ್ ಸಮಯದಲ್ಲಿ ಚಾರ್ಲಿ ಕಾಣಿಸಿಕೊಳ್ಳಲೇ ಇಲ್ಲ. ಹಾಗಾಗಿ ಸಹಜವಾಗಿ ಚಾರ್ಲಿ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಚಾರ್ಲಿ ಎಲ್ಲಿ ಎಂದು ಬಿಗ್ ಬಾಸ್ ಅನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.
Advertisement
ಚಾರ್ಲಿಯನ್ನು ಬಿಗ್ ಬಾಸ್ ಮನೆಗೆ ಕರೆದುಕೊಂಡು ಬರುವುದೇ ಇಲ್ಲವಾ? ಅಥವಾ ಸ್ಪೆಷಲ್ ಟಾಸ್ಕ್ ಮೂಲಕ ಮನೆ ಒಳಗೆ ಪ್ರವೇಶ ಮಾಡುತ್ತದಾ ಗೊತ್ತಿಲ್ಲ. ಆದರೆ, ಸ್ಪರ್ಧಿಗಳ ಜೊತೆಯಂತೂ ಚಾರ್ಲಿ ಬರಲಿಲ್ಲ. ಸುದೀಪ್ ಅವರ ಮುಂದೆ ನಿಲ್ಲಲಿಲ್ಲ. ಹಾಗಾಗಿ ಚಾರ್ಲಿ ಬರುತ್ತದೆಯೋ ಇಲ್ಲವೋ ಎನ್ನುವ ಅನುಮಾನ ಕೂಡ ಮೂಡಿದೆ.
Advertisement
Advertisement
ವೇಟಿಂಗ್ ಲಿಸ್ಟ್ ಪರೀಕ್ಷೆ
Advertisement
ಕಡಿಮೆ ಮತಗಳನ್ನು ಪಡೆಯುವ ಮೂಲಕ ಡ್ರೋನ್ ಪ್ರತಾಪ್, ನಟಿ ತನಿಷಾ ಕುಪ್ಪಂಡ, ನಟಿ ಸಂಗೀತಾ ಶೃಂಗೇರಿ, ರೈತ ವರ್ತುರ್ ಸಂತೋಶ್, ನಟ ಕಾರ್ತಿಕ್ ಮಹೇಶ್ ಮತ್ತು ಬುಲೆಟ್ ಪ್ರಕಾಶ್ ಪುತ್ರ ರಕ್ಷರ್ ವೇಟಿಂಗ್ ಲಿಸ್ಟ್ ನಲ್ಲಿ ಇದ್ದರು. ಇವರಿಗೆ ಬಿಗ್ ಬಾಸ್ (Bigg Boss Karnataka)ವಿಶೇಷ ಟಾಸ್ಕ್ ಕೊಡುವ ಮೂಲಕ ದೊಡ್ಮನೆ ಒಳಗೆ ಕಳುಹಿಸುತ್ತಾರೆ ಎಂದು ನಂಬಲಾಗಿತ್ತು. ಆದರೆ, ವಿಶೇಷ ಟ್ವಿಸ್ಟ್ ಕೊಟ್ಟರು ಸುದೀಪ್.
ಹೋಲ್ಡ್ ನಲ್ಲಿ ಇರಿಸಿರುವ ಈ ಆರು ಸ್ಪರ್ಧೆಗಳನ್ನು ಮನೆಗೆ ಒಳಗೆ ಕಳುಹಿಸುವುದಾಗಿ ಹೇಳಿದ ಸುದೀಪ್, ಅವರಿಗೆ ಒಂದು ವಾರಗಳ ಕಾಲ ಕಾಲಾವಕಾಶ ನೀಡಿದ್ದಾರೆ. ಈ ಒಂದು ವಾರದಲ್ಲಿ ಬಿಗ್ ಬಾಸ್ ಆದೇಶ ನೋಡಿಕೊಂಡು ಅವರು ಮನೆಯಲ್ಲಿ ಇರುತ್ತಾರಾ ಅಥವಾ ಇಲ್ಲವಾ ಎನ್ನುವುದನ್ನು ನಿರ್ಧರಿಸಲಾಗುವುದು ಎಂದಿದ್ದಾರೆ ಸುದೀಪ್.
ಈ ಬಾರಿ ಒಟ್ಟು 19 ಸ್ಪರ್ಧಿಗಳು ವೇದಿಕೆಯ ಮೇಲೆ ಬಂದಿದ್ದರು. ಅದರಲ್ಲಿ ಇಬ್ಬರು ಮತವನ್ನು ಪಡೆಯಲಾಗದೇ ತಮ್ಮ ಮನೆಗೆ ವಾಪಸ್ಸಾದರು. 11 ಸ್ಪರ್ಧಿಗಳು ವೋಟು ಪಡೆದುಕೊಂಡು ಮನೆ ಒಳಗೆ ಪ್ರವೇಶ ಮಾಡಿದರು. ಉಳಿದ ಆರು ಜನರು ಕಡಿಮೆ ಮತಗಳನ್ನು ಪಡೆದು ವೇಟಿಂಗ್ ಲಿಸ್ಟ್ ನಲ್ಲಿದ್ದಾರೆ.
Web Stories