‘ಬಿಗ್‌ಬಾಸ್ (Bigg Boss Kannada) ಮನೆಯೊಳಗಿನ ಹೆಣ್ಣುಮಕ್ಕಳಿಗೆ ಅಣ್ಣ ಆಗುವ ಬದಲಿಗೆ ವಾರಪೂರ್ತಿ ಪಾತ್ರೆ ತೊಳಿತೀನಿ’ ಎಂದು ತಮಾಷೆಯಾಗಿ ಹೇಳಿದ್ದ ತುಕಾಲಿ ಸಂತೋಷ್ (Tukali Santu) ಅವರ ಮಾತನ್ನು ಸುದೀಪ್ ನಿಜವಾಗಿಸಿಬಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ನಂತರ ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು? ಪಾತ್ರೆಗಳನ್ನು ಅವರೊಬ್ಬರೇ ತೊಳೆದ್ರಾ? ಅಥವಾ ಸೋತುಹೋದ್ರಾ? ಇಂತಹ ಪ್ರಶ್ನೆಗಳು ನೋಡುಗರಲ್ಲಿ ಮೂಡಿವೆ.
ಮನೆಯೊಳಗಿದ್ದಾಗ ತುಕಾಲಿ ಸಂತೋಷ್‌ಗೆ ಎದುರಾದ ಈ ಪರಿಸ್ಥಿತಿಯ ಬಗ್ಗೆ ನಮ್ರತಾ, ಸ್ನೇಹಿತ್ ಅವರು ತುಕಾಲಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಆಗ ಹೆಣ್ಣುಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಅಣ್ಣನಾಗುವ ಮಾತು ಬಂದಿದೆ. ಅದಕ್ಕೆ ಸಂತೋಷ್ ರೊಚ್ಚಿಗೆದ್ದು ನೇರವಾಗಿ ಬಿಗ್‌ಬಾಸ್‌ಗೇ ಸವಾಲು ಹಾಕಿದ್ದಾರೆ.
ಮೊದ ಮೊದಲು ಪಾತ್ರೆಗಳ ರಾಶಿ ನೋಡಿದಾಗ, ’ಅಯ್ಯೋ ಈ ಹುಡುಗಿಯರ ಸಹವಾಸವೂ ಬೇಡ. ಈ ಪಾತ್ರೆ ತೊಳೆಯುವುದೂ ಬೇಡ’ ಅನ್ನಿಸಿಬಿಟ್ಟಿತ್ತಂತೆ. ಆದರೆ ಎರಡು ಮೂರು ಸಲ ತೊಳೆದು ರೂಢಿ ಆದಮೇಲೆ ಅವರಿಗೆ ಮತ್ತೆ ಛಲ ಉಕ್ಕಿದೆ. ನಾನು ಎಂದಿಗೂ ಈ ಮನೆಯೊಳಗಿನ ಹೆಣ್ಮಕ್ಳಿಗೆ ಅಣ್ಣನಾಗಲಾರೆ ಎಂದು ಅವರು ನಿರ್ಧರಿಸಿಬಿಟ್ಟಿದ್ದಾರೆ.
ಸ್ವಿಮ್ಮಿಂಗ್ ಫೂಲ್ ಬಳಿ ನಿಂತಿದ್ದಾಗ ನಮ್ರತಾ (Namrata Gowda), ‘ಅಣ್ಣನಾಗಬೇಕಾಗತ್ತೆ ಎಂಬ ಕಾರಣಕ್ಕೆ ಇರೋ ಬರೋ ಪಾತ್ರೆಯೆಲ್ಲ ತೊಳಿತಿದ್ದೀರಲ್ಲಾ ನೀವು’ ಎಂದು ತುಕಾಲಿ ಅವರ ಕಾಲೆಳೆದಿದ್ದಾರೆ. ಸ್ನೇಹಿತ್, ‘ರಾಖಿ ತರಿಸಿಕೊಡ್ತೀನಿ ಬನ್ನಿ’ ಎಂದು ತಮಾಷೆ ಮಾಡಿದ್ದಾರೆ.
ನೇರವಾಗಿ ಕ್ಯಾಮೆರಾ ಎದುರಿಗೆ ಬಂದು ನಿಂತ ತುಕಾಲಿ ಅವರು, ‘ನಾನ್ಯಾಕೆ ರಾಖಿ ಕಟ್ಟಿಸ್ಕೋಬೇಕು? ಇನ್ನೂ ಬೇಕಾದ್ರೆ ಬಿಗ್‌ಬಾಸ್ ಮನೆಯೊಳಗೆ ಇರೋವರೆಗೂ ಪಾತ್ರೆ ತೊಳಿತೀನಿ ಬೇಕಾದ್ರೆ. ಆದ್ರೆ ರಾಖಿ ಮಾತ್ರ ಕಟ್ಟಿಸ್ಕೊಳ್ಳಲ್ಲ. ನಾನು ಎಲ್ಲಿಯವರೆಗೂ ಬಿಗ್‌ಬಾಸ್ ಮನೆಯೊಳಗೆ ಇರ್ತಿನೋ ಅಲ್ಲಿಯವರೆಗೂ ಇರೋವರೆಗೂ ಬ್ಯಾಚುಲರ್‍ರೇ’ ಎಂದು ಶಪಥ ಮಾಡಿದ್ದಾರೆ.
ಅವರ ಶಪಥವನ್ನು ಕೇಳಿದ ಸ್ನೇಹಿತ್, ತುಕಾಲಿ ಅವರ ಹೆಂಡತಿಗೆ ಅಲ್ಲಿಂದಲೇ ‘ಚಿನ್ನಿ ಅವರೇ, ಈ ಎಲ್ಲ ಮಾತು ಕೇಳಿಸಿಕೊಂಡಮೇಲೆ ನೀವೇ ಏನಾದ್ರೂ ಮಾಡಬೇಕು. ಮೇನ್‌ಡೋರ್‍ನಿಂದ ಬಂದು ಏನಾದ್ರೂ ಮಾಡಿ’ ಎಂದು ವಿನಂತಿಸಿಕೊಂಡಿದ್ದಾರೆ. ಇಂತಹ ರಸವತ್ತಾದ ಅನೇಕ ದೃಶ್ಯಗಳನ್ನು Jiocinemaದ Unseen ಕಥೆಗಳಲ್ಲೂ ಕಾಣಬಹುದಾಗಿದೆ.
Web Stories