ಬಿಗ್ ಬಾಸ್ (Bigg Boss Kannada) ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಇದೀಗ ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಈ ಸುಂದರಿಗೆ ಈಗ 1 ಮಿಲಿಯನ್ ಫಾಲೋವರ್ಸ್ ರೀಚ್ ಆಗಿದ್ದಾರೆ. ಇನ್ಸ್ಟಾಗ್ರಾಂ ಖಾತೆಗೆ 1 ಮಿಲಿಯನ್ ತಲುಪಿರುವ ಖುಷಿಯಲ್ಲಿ ನಟಿ ಮತ್ತೊಂದು ಬೋಲ್ಡ್ ಬಿಕಿನಿ ವಿಡಿಯೋ ಶೇರ್ ಮಾಡಿದ್ದಾರೆ.
Advertisement
ಸೋನು ಶ್ರೀನಿವಾಸ್ ಗೌಡ ಅವರು ದೊಡ್ಮನೆಗೆ ಕಾಲಿಡುವ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದವರು. ಸದಾ ಒಂದಲ್ಲಾ ಒಂದು ಪೋಸ್ಟ್, ವಿಡಿಯೋ ಮೂಲಕ ಸದ್ದು ಮಾಡ್ತಿದ್ದ ನಟಿ ಟ್ರೋಲ್ನಿಂದ ಕೂಡ ಫೇಮಸ್ ಆಗಿದ್ದರು. ಈಗ ಸೋನುಗೆ 1 ಮಿಲಿಯನ್ ಫಾಲೋವರ್ಸ್ ಸಂಖ್ಯೆ ತಲುಪಿದೆ. ಇದೇ ಸಂಭ್ರಮದಲ್ಲಿ ಸೋನು, ಬಿಕಿನಿ ವಿಡಿಯೋ ಶೇರ್ ಮಾಡಿದ್ದಾರೆ.
Advertisement
Advertisement
ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ (Troll) ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ. ಇದನ್ನೂ ಓದಿ:ಸರ್ಜರಿಗೆ ಮೊರೆ ಹೋಗಿದ್ರಾ ಬಸಣ್ಣಿ? ತುಟಿ ಮೇಲೆ ಕಣ್ಣಿಟ್ಟವರಿಗೆ ತಾನ್ಯಾ ಗರಂ
Advertisement
ಈ ಹಿಂದೆ ಇವರ ಕೆಲ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಜೊತೆಗೆ ಮೊನ್ನೆಯಷ್ಟೇ ಸೋನು ಹೊಸ ವೀಡಿಯೋವೊಂದನ್ನು ಶೇರ್ ಮಾಡಿದ್ದರು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡ ಎಂದು ಹಾಕಿ ಕುತೂಹಲ ಹೆಚ್ಚಿಸಿದ್ದರು.
ಕಂಪನಿಯೊಂದರ ಜಾಹೀರಾತಿಗೆ ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವೀಡಿಯೋ ಮಾಡಿದ್ದರು. ಹೆಣ್ಣುಮಕ್ಕಳು ಹೇಗೆ ಬ್ರಾ ಹಾಕಬೇಕು, ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಸೂಚಿಸಿದ್ದರು. ಜೊತೆಗೆ ಅದನ್ನು ಯಾವ ರೀತಿ ಹಾಕಬೇಕು ಎಂಬುವುದರ ಬಗ್ಗೆ ಕೂಡ ವೀಡಿಯೋ ಮೂಲಕ ತಿಳಿಸಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.
ಟಿಕ್ ಟಾಕ್ ರೀಲ್ಸ್ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ(Roopesh Shetty), ಸಾನ್ಯ ಅಯ್ಯರ್ (Saanya Iyer) ಜೊತೆ ಸೋನು ಮಿಂಚಿದ್ದರು. ದೊಡ್ಮನೆ ಆಟ ಮುಗಿದ ಮೇಲೆ ತಮ್ಮ ಯುಟ್ಯೂಬ್ನಲ್ಲಿ ಒಂದಲ್ಲಾ ಒಂದು ವಿಚಾರದೊಂದಿಗೆ ಚರ್ಚೆ ಮಾಡುತ್ತಾರೆ.