Bigg Boss Kannada : ಸ್ನೇಕ್ ಶ್ಯಾಮ್, ನಮ್ರತಾ ಗೌಡ, ಇಶಾನಿ ಕನ್ಫರ್ಮ್

Public TV
1 Min Read
Bigg Boss 4

ನಾಳೆ ಸಂಜೆಯಿಂದ ಬಿಗ್ ಬಾಸ್ ಆಟ ಶುರುವಾಗಲಿದೆ. ಅದಕ್ಕೂ ಮುನ್ನ ದೊಡ್ಮನೆಗೆ ಎಂಟ್ರಿ ಕೊಡುವವರ ಲಿಸ್ಟ್ ಹೊರ ಬೀಳುತ್ತಲೇ ಇದೆ. ಅಧಿಕೃತವಾದ ಯಾದಿ ಅದಾಗದಿದ್ದರೂ, ನಾನಾ ಮೂಲಗಳಿಂದ ಹೆಕ್ಕಿ ಹೆಸರುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಇದ್ದಾರೆ. ಈವರೆಗೂ ಒಂದಷ್ಟು ಹೆಸರುಗಳು ಕೇಳಿ ಬಂದಿದ್ದವು. ಆದರೆ, ಅವರಾರೂ ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಈಗ ಸಿಕ್ಕಿರುವ ಯಾದಿಯಲ್ಲಿ ಬಹುತೇಕರು ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

sukrutha nag

ಮೈಸೂರಿನ ಹೆಸರಾಂತ ಉರಗತಜ್ಞ ಸ್ನೇಕ್ ಶ್ಯಾಮ್ (Snake Shyam) ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರಂತೆ. 80 ಸಾವಿರಕ್ಕೂ ಅಧಿಕ ಹಾವುಗಳನ್ನು ಸಂರಕ್ಷಣೆ ಮಾಡಿರುವ ಸ್ನೇಕ್ ಶ್ಯಾಮ್, ಆ ಭಾಗದಲ್ಲಿ ಪ್ರಸಿದ್ಧರು. ಅದ್ಭುತವಾಗಿ ಮಾತನಾಡುತ್ತಾರೆ. ಅಲ್ಲದೇ, ರಾಜಕಾರಣದಲ್ಲೂ ಈ ಹಿಂದೆ ಸಕ್ರಿಯರಾಗಿದ್ದವರು.

02 BIGG BOSS

ನಾಗಿಣಿ ಧಾರಾವಾಹಿಯ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಮ್ರತಾ ಗೌಡ (Namrata Gowda) ಕೂಡ ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರಂತೆ. ಚಿಕ್ಕ ವಯಸ್ಸಿನಿಂದಲೇ ಧಾರಾವಾಹಿ ಪ್ರಪಂಚಕ್ಕೆ ಕಾಲಿಟ್ಟ ನಮ್ರತಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ನಾಗಿಣಿ 2 ಧಾರಾವಾಹಿಯ ಮೂಲಕ.

namratha gowda 11

ರಾಪರ್ ಆಗಿರುವಂತಹ ಇಶಾನಿ  (Ishani) ಕೂಡ ಬಿಗ್ ಬಾಸ್ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ನಿನ್ನೆಯಿಂದಲೇ ನಡೆದ ವಾಹಿನಿಯ ಹಲವಾರು ಕಾರ್ಯಕ್ರಮಗಳಲ್ಲಿ ಇಶಾನಿ ಭಾಗಿಯಾಗಿದ್ದಾರೆ. ಹಾಗಾಗಿ ಇಶಾನಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

 

ಇವರುಗಳ ಜೊತೆಗೆ ಮಜಾ ಭಾರತ ಮತ್ತು ಇತರ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡಿರುವ ಚಂದ್ರಪ್ರಭ ಕೂಡ ಬಿಗ್ ಬಾಸ್ ಮನೆಯಲ್ಲಿ ಇರುವುದು ಖಚಿತ ಎಂದು ಹೇಳಲಾಗುತ್ತಿದೆ. ಇವರ ಜೊತೆಗೆ ಸುಕ್ರತಾ ನಾಗ್ ಕೂಡ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ವರ್ತಮಾನ.

Web Stories

Share This Article