ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ರಾತ್ರಿ- ಹಗಲುಗಳಿಗೆ ಲೆಕ್ಕ ಈಡೋರು ಯಾರು? ಮಲಗಿದ್ದೆ ರಾತ್ರಿ, ಏಳೋದು ಹಗಲು ಅಂತಿರುತ್ತದೆ. ಅದರಲ್ಲೂ ಅವರ ಬೆಳಗನ್ನು ಹಾಡಿನ ಮೂಲಕ ಸುಂದರಗೊಳಿಸಲಾಗುತ್ತಿದೆ. ದಿನವೂ ಒಂದೊಂದು ಹಾಡು, ಒಂದೊಂದು ಗುಡ್ ಮಾರ್ನಿಂಗ್, ಕಣ್ಣು ಉಜ್ಜಿಕೊಳ್ಳುತ್ತಲೇ ದಿನವನ್ನು ಸ್ವಾಗತಿಸುವುದು ಸಂಪ್ರದಾಯ.
ಇಂದು ಕೂಡ ಬಿಗ್ ಬಾಸ್ ಮನೆಯಲ್ಲಿ ಅದೇ ನಡೆಯಿತು. ಹಾಡಿನ ಮೂಲಕವೇ ಮಲಗಿದ್ದವರನ್ನು ಎಚ್ಚರಗೊಳಿಸಲಾಯಿತು. ಬೆಳಗ್ಗೆ ಬೇಗ ಎದ್ದಿದ್ದ ನೀತು, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್ ಮತ್ತು ಡ್ರೋಣ್ ಪ್ರತಾಪ್ ಯೋಗ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ನೀತು ವನಜಾಕ್ಷಿ ಮತ್ತು ಸಂಗೀತಾ ಶೃಂಗೇರಿ ಯೋಗ ಕಂಡು ಡ್ರೋಣ್ ಪ್ರತಾಪ್ ಅಚ್ಚರಿಯಲ್ಲೇ ನಿಂತಿದ್ದರು.
ಯಾರು, ಯಾವ್ಯಾವುದೋ ಯೋಗ ಮಾಡ್ತಿದ್ದಾರೆ. ನನಗೆ ಅರ್ಥ ಆಗ್ತಿಲ್ಲ. ಯಾರನ್ನು ಫಾಲೋ ಮಾಡಬೇಕೋ ಗೊತ್ತಾಗ್ತಿಲ್ಲ ಅಂತ ಬೆರಗುಗಣ್ಣಿನಿಂದ ನೋಡುತ್ತಾ ಕುಳಿತಿದ್ದರು. ಒಂದೂ ಆಸನವನ್ನು ಟ್ರೈ ಮಾಡುವಂತಹ ಪ್ರಯತ್ನವನ್ನೂ ಡ್ರೋಣ್ ಪ್ರತಾಪ್ ಮಾಡಲಿಲ್ಲ. ಸುಮ್ಮನೆ ಲೇಜಿ ರೀತಿಯಲ್ಲಿ ಕುಳಿತುಕೊಂಡೇ ಇದ್ದರೆ.
ಇತ್ತ ಮೈಕಲ್ ಕಾಫಿ ಮಗ್ ಹಿಡಿದುಕೊಂಡು ಮನೆ ತುಂಬಾ ಓಡಾಡುತ್ತಿದ್ದರು ಮೈಕಲ್. ಬೇರೆಯವರಿಗೆ ಕಾಫಿ ಕುಡಿಯಲು ಹುರುದುಂಬಿಸುತ್ತಿದ್ದರು. ಕಾಫಿ ರೆಡಿ ಇದೆ, ಬಿಸಿ ನೀರು ರೆಡಿ ಇದೆ ಎಂತಲ್ಲ ಮಾಹಿತಿಯನ್ನು ರವಾಣಿಸುತ್ತಿದ್ದರು.
ನಮ್ರತಾ ಗೌಡ ಮತ್ತು ಭಾಗ್ಯಶ್ರೀ ನಡುವೆ ಬೆಡ್ ರೂಮ್ ನಲ್ಲಿ ಮಾತುಕತೆ ಜೋರಾಗಿತ್ತು. ಒಳ್ಳೆಯ ನಿದ್ದೆ ಮಾಡಿದ್ದಾಗ ಭಾಗ್ಯಶ್ರೀ ಹೇಳಿಕೊಂಡರೆ, ನಮ್ರತಾ (Namrata Gowda) ಕೂಡ ನಿದ್ದೆಯ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮಾತನಾಡಿಸಿದರು.
ಪಕ್ಕದಲ್ಲಿ ಕೂತವರಿಗೆ ಬಡೆದು ಮಾತನಾಡಿಸುವ ಕೆಟ್ಟ ಚಾಳಿ ಇದೆ ಎಂದು ಭಾಗ್ಯಶ್ರೀ ಹೇಳಿದರು. ಗೌರೀಶ್ ಅಕ್ಕಿ ಅವರಿಗೆ ಈ ವಿಷಯದಲ್ಲಿ ಭಾಗ್ಯಶ್ರೀ ಕ್ಷಮೆ ಕೇಳಿದರು. ತನಗೂ ಅಂಥದ್ದೇ ಕೆಟ್ಟ ಹವ್ಯಾಸ ಇರುವುದಾಗಿ ನಮ್ರತಾ ಮಾತನಾಡಿದರು.
ಒಂದು ರೀತಿಯಲ್ಲಿ ಎಲ್ಲರೂ ವಿಚಿತ್ರ ಮೂಡಿನಲ್ಲಿ ಎದ್ದು, ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ದಿನ ಅವರು ಹೇಗೆಲ್ಲ ಇರಲಿದ್ದಾರೆ ಎನ್ನುವುದನ್ನು JioCinema live ನೋಡಬಹುದಾಗಿದೆ.
Web Stories