Bengaluru CityCinemaKarnatakaLatestMain PostSandalwood

ಬಿಗ್ ಬಾಸ್ ಸೀಸನ್ 9ರಲ್ಲಿ ದಿವ್ಯಾ ಉರುಡುಗ- ಅರವಿಂದ್

ಟಿಟಿಯಲ್ಲಿ ಬಿಗ್ ಬಾಸ್(Bigg boss) ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಓಟಿಟಿಯ ಮೊದಲ ಸೀಸನ್‌ನ ಟಾಪರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದರು. ಈಗ ಟಿವಿ ಬಿಗ್ ಬಾಸ್‌ಗೆ ಕೌಂಟ್ ಡೌನ್ ಶುರುವಾಗಿದೆ. ಹೊಸ ಸ್ಪರ್ಧಿಗಳ ಜತೆ ಹಳೆಯ ಸೀಸನ್ ಸ್ಪರ್ಧಿಗಳು ಕೂಡ ಭಾಗವಹಿಸುತ್ತಿರುವುದು ಸೀಸನ್ 9ರ ಮತ್ತೊಂದು ಹೈಲೈಟ್ ಆಗಿದೆ. ಈ ಹೊಸ ಸೀಸನ್‌ನಲ್ಲಿ ಬಿಗ್ ಬಾಸ್ ಜೋಡಿ ದಿವ್ಯಾ ಉರುಡುಗ (Divya Uruduga)n ಮತ್ತು ಅರವಿಂದ್ (Aravind) ಭಾಗವಹಿಸಲಿದ್ದಾರೆ ಎಂಬು ಸುದ್ದಿ ಹರಿದಾಡುತ್ತಿದೆ.

ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯಲ್ಲಿ ಇದೇ ಸೆ.24ಕ್ಕೆ ಬಿಗ್ ಬಾಸ್ ಟಿವಿ ಪರದೆಗೆ ಬರಲು ಕೌಂಟ್ ಡೌನ್ ಶುರುವಾಗಿದೆ. ಸೀಸನ್ 9 ಬಿಗ್ ಬಾಸ್(Bigg Boss) ಈ ಬಾರಿ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಇದೇ ಮೊದಲ ಬಾರಿಗೆ ಹೊಸ ಸ್ಪರ್ಧಿಗಳ ಜತೆ ಈಗಾಗಲೇ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡ ಹಳೆಯ ಸ್ಪರ್ಧಿಗಳು ಕೂಡ ಇರಲಿದ್ದಾರೆ. ಈ ಪೈಕಿ ಓಟಿಟಿಯ ರೂಪೇಶ್, ಸಾನ್ಯ, ರಾಕೇಶ್ ಅಡಿಗ, ಗುರೂಜಿ ಟಿವಿ ಬಿಗ್ ಬಾಸ್‌ನಲ್ಲಿ ಇರುವುದು ಈಗಾಗಲೇ ಅಧಿಕೃತ ಮಾಹಿತಿ ಸಿಕ್ಕಿದೆ. ಇನ್ನು 5 ಜನ ಸೀನಿಯರ್ ಸ್ಪರ್ಧಿಗಳು ಇರಲಿದ್ದಾರೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಭರ್ಜರಿ ತಯಾರಿ: ಹೇಗಿದೆ ಗೊತ್ತಾ ದೊಡ್ಮನೆ?

ಟಿವಿ ಬಿಗ್ ಬಾಸ್‌ನಲ್ಲಿ 18 ಸ್ಪರ್ಧಿಗಳು ಇರಲಿದ್ದಾರೆ. ಈ ಪೈಕಿ 8 ಹೊಸ ಸ್ಪರ್ಧಿಗಳಿದ್ದರೆ, 8 ಹಳೆಯ ಸ್ಪರ್ಧಿಗಳು ಇರಲಿದ್ದಾರೆ. ಈ ಪೈಕಿ ಓಟಿಟಿಯ 4 ಜನರ ಹೆಸರು ಈಗಾಗಲೇ ರಿವೀಲ್ ಆಗಿದ್ದು, ಇನ್ನು 5 ಜನರ ಸೂಪರ್ ಸೀನರ್ ಸ್ಪರ್ಧಿಗಳಿರಲಿದ್ದಾರೆ. ಹಾಗಾಗಿ ಹಳೆಯ ಸೀಸನ್ ದಿವ್ಯಾ ಉರುಡುಗ ಮತ್ತು ಅರವಿಂದ್ ಹೊಸ ಸೀಸನ್‌ಗೆ ಬರುವ ಕುರಿತು ಬಾರಿ ಚರ್ಚೆ ಆಗುತ್ತಿದೆ.

ಹಳೆಯ ಸೀಸನ್‌ನಲ್ಲಿ ಜೋಡಿಯಾಗಿ ದಿವ್ಯಾ(Divya)  ಮತ್ತು ಅರವಿಂದ್ (Aravind)  ಕಾಣಿಸಿಕೊಂಡಿದ್ದರು. ಸ್ಪರ್ಧಿಗಳಾಗಿ ಈ ಜೋಡಿ ಪ್ರೇಕ್ಷಕರನ್ನ ರಂಜಿಸಿದ್ದರು. ಹಾಗಾಗಿ ಈ ಹೊಸ ಸೀಸನ್‌ನಲ್ಲೂ ಕೂಡ ದಿವ್ಯಾ ಮತ್ತು ಅರವಿಂದ್ ಇರಬೇಕು ಎಂಬುದು ಪ್ರೇಕ್ಷಕರ ಒತ್ತಾಯ ಮತ್ತು ಅಭಿಪ್ರಾಯವಾಗಿದೆ. ಅಷ್ಟಕ್ಕೂ ಹೊಸ ಸೀಸನ್‌ನಲ್ಲಿ ಈ ಜೋಡಿ ಕಾಣಿಸಿಕೊಳ್ಳುತ್ತಾರಾ ಎಂಬುದು ಇನ್ನು ಎರಡೇ ದಿನಗಳಲ್ಲಿ ತಿಳಿಯಲಿದೆ.

Live Tv

Leave a Reply

Your email address will not be published.

Back to top button