Bengaluru CityCinemaKarnatakaLatestMain PostSandalwood

ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಭರ್ಜರಿ ತಯಾರಿ: ಹೇಗಿದೆ ಗೊತ್ತಾ ದೊಡ್ಮನೆ?

ಬಿಗ್ ಬಾಸ್ ಓಟಿಟಿಗೆ(Bigg Boss Ott) ತೆರೆ ಬಿದ್ದಿದೆ. ಸೀಸನ್ 9ಕ್ಕೆ ಬಿಗ್ ಬಾಸ್‌ಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಓಟಿಟಿಯಲ್ಲಿ ಬಿಗ್ ಬಾಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ಗೆ(Bigg Boss Kannada) ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಓಟಿಟಿಯಲ್ಲಿದ್ದ ದೊಡ್ಮನೆಯೇ ಸೀಸನ್ 9ರಲ್ಲೂ ಇರಲಿದೆ. ಸದ್ಯ ಮನೆಯ ಹೊಸ ಫೋಟೋವನ್ನ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಶೇರ್ ಮಾಡಿದ್ದಾರೆ.

ಮೊದಲ ಬಾರಿಗೆ ಓಟಿಟಿಯಲ್ಲಿ ಬಿಗ್ ಬಾಸ್ ಶೋ ಮೂಡಿ ಬಂದಿತ್ತು. ಮೊದಲ ಸೀಸನ್‌ಗೆ ಅಭಿಮಾನಿಗಳ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಬಿಗ್ ಬಾಸ್ 9ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಓಟಿಟಿಯ ಸ್ಪರ್ಧಿಗಳು ರೂಪೇಶ್, ಸಾನ್ಯ, ರಾಕೇಶ್, ಗುರೂಜಿ ಈ ಸೀಸನ್‌ನಲ್ಲಿ ಭಾಗಿಯಾಗುತ್ತಿರುವುದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಇನ್ನುಳಿದ ಯಾರೆಲ್ಲಾ ಸ್ಪರ್ಧಿಗಳು ಈ ಸೀಸನ್‌ನಲ್ಲಿ ಭಾಗವಹಿಸಲಿದ್ದಾರೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲವಿದೆ. ಹೊಸಬರ ಜತೆ ಹಳೆಯ ಸ್ಪರ್ಧಿಗಳು ಸೀಸನ್ 9ರಲ್ಲಿ ಬರುತ್ತಿದ್ದು, ಬಿಗ್ ಬಾಸ್ ಮನೆಯ ಆಟ ಮತ್ತಷ್ಟು ಕ್ಲಿಷಕರವಾಗಲಿದೆ.

ವಾಹಿನಿಯ ಬಿಗ್‌ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ದೊಡ್ಮನೆ ಫೋಟೋ ಹಂಚಿಕೊಂಡಿದ್ದಾರೆ. ಮನೆಯನ್ನ ನೋಡುತ್ತಿರುವ ಫೋಟೋ ಸೇರ್ ಮಾಡಿ, ʻಬಹುತೇಕ ಸಿದ್ಧತೆ ನಡೆದಿದೆʼ ಎಂದು ಅಡಿಬರಹ ನೀಡಿದ್ದಾರೆ. ಈ ಫೋಟೋ ಸಖತ್‌ ವೈರಲ್‌ ಆಗುತ್ತಿದೆ. ಇದನ್ನೂ ಓದಿ:ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಖಾನ್ ಪತ್ನಿ

ಬಿಗ್‌ ಬಾಸ್‌ ಸೀಸನ್‌ 9 ಸೆ.24ರಿಂದ ಪ್ರತಿ ದಿನ ಟಿವಿ ಪರದೆಯಲ್ಲಿ ಮೂಡಿ ಬರಲಿದೆ. ಇನ್ನು ಟಿವಿ ಬಿಗ್‌ ಬಾಸ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Live Tv

Leave a Reply

Your email address will not be published.

Back to top button