ಕಿರುತೆರೆ ನಟಿಯಾಗಿ ಅಪಾರ ಅಭಿಮಾನಿಗಳ ಮನ ಗೆದ್ದಿರುವ ನಟಿ ಅಮೂಲ್ಯ ಗೌಡ(Amulya Gowda) ಇದೀಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸೀರಿಯಲ್ ಮೂಲಕ ಮೋಡಿ ಮಾಡಿದ್ದ ಬೆಡಗಿ ಅಮೂಲ್ಯ ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ ಒಳ್ಳೆಯ ಹುಡುಗ ಪ್ರಥಮ್ (Olle Huduga Pratham)ಮೇಲೆ ಕಿಡಿಕಾರಿದ್ದಾರೆ.
ಟಿವಿ ಲೋಕದಲ್ಲಿ ಮೋಡಿ ಮಾಡಿರುವ ಚೆಲುವೆ ಅಮೂಲ್ಯ, ಬಿಗ್ ಬಾಸ್ ಮನೆಗೆ(Bigg Boss House) ಎಂಟನೇ ಸ್ಪರ್ಧಿಯಾಗಿ ಬಂದಿದ್ದಾರೆ. ಈ ವೇಳೆ ಬಿಗ್ ಬಾಸ್ ಈ ಹಿಂದಿನ ಸೀಸನ್‌ನ ನೀವು ನೋಡಿದ್ದೀರಾ ಯಾವ ಸ್ಪರ್ಧಿ ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿದೆ ಎಂದು ಸುದೀಪ್( Kiccha Sudeep) ಕೇಳಿದ್ದಾರೆ. ನಿಜ ಹೇಳಬೇಕೆಂದ್ರೆ ನನಗೆ ಪ್ರಥಮ್ ಅವರ ಮೇಲೆ ಪ್ರತಿದಿನ ಕೋಪ ಬಂದಿದೆ. ಅವರು ನಡೆದುಕೊಳ್ಳುತ್ತಿದ್ದ ರೀತಿ ಇಷ್ಟವಾಗುತ್ತಿರಲಿಲ್ಲ, ಪ್ರಥಮ್ ಮೆಂಟಲಿ ಟಾರ್ಚರ್ ಮಾಡ್ತಿದ್ದರು ಎಂದು ಅಮೂಲ್ಯ ಮಾತನಾಡಿದ್ದಾರೆ. ಇದನ್ನೂ ಓದಿ:`ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್
ಅಮೂಲ್ಯ ಮಾತಿಗೆ ಸುದೀಪ್ ಕೂಡ ಪ್ರತಿಕ್ರಿಯಿಸಿ, ನಿಮಗೆ ಮನೆಯಲ್ಲಿ ಕೂತು ಅಷ್ಟು ಮೆಂಟಲಿ ಟಾರ್ಚರ್ ಆಗುತ್ತಿತ್ತು. ನಾನು ವೇದಿಕೆಯ ಮೇಲಿದ್ದೆ ಎಂದು ಸುದೀಪ್ ತಮಾಷೆ ಮಾಡಿದ್ದಾರೆ. ಹಾಗಾದ್ರೆ ಯಾವ ಸ್ಪರ್ಧಿನ ನೋಡಿ, ನಿಮಗೆ ತುಂಬಾ ಇಷ್ಟ ಆಗುತ್ತಿತ್ತು ಎಂದು ಕೇಳಿದಾಗ, ನನಗೆ ವೈಷ್ಣವಿ (Vaishnavi) ಮತ್ತು ದೀಪಿಕಾ ದಾಸ್ (Deepika Das) ಅವರು ಇಷ್ಟ ಎಂದು ಹೇಳಿದ್ದಾರೆ. ಅಂದ್ಹಾಗೆ, ದೊಡ್ಮನೆಗೆ ದೀಪಿಕಾ ದಾಸ್ ಕೂಡ ಎಂಟ್ರಿ ಕೊಟ್ಟಿದ್ದಾರೆ.
ಒಟ್ನಲ್ಲಿ ಮಾಜಿ ಸ್ಪರ್ಧಿ ಪ್ರಥಮ್ ಕ್ಲಾಸ್ ತೆಗೆದುಕೊಂಡು ನಟಿ ಅಮೂಲ್ಯ ದೊಡ್ಮನೆಗೆ ಕಾಲಿಟ್ಟಿದ್ದಾರೆ. 18 ಜನ ಸ್ಪರ್ಧಿಗಳ ಮಧ್ಯೆ ಅಮೂಲ್ಯ ಗೌಡ ಮೋಡಿ ಮಾಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.