Connect with us

ಚಂದನ್ ಶೆಟ್ಟಿಗೆ ಬಿಗ್‍ಬಾಸ್ ಸೀಸನ್ 5 ಕಿರೀಟ – ಕಾಮನ್‍ಮ್ಯಾನ್ ದಿವಾಕರ್ ರನ್ನರ್ ಅಪ್

ಚಂದನ್ ಶೆಟ್ಟಿಗೆ ಬಿಗ್‍ಬಾಸ್ ಸೀಸನ್ 5 ಕಿರೀಟ – ಕಾಮನ್‍ಮ್ಯಾನ್ ದಿವಾಕರ್ ರನ್ನರ್ ಅಪ್

ಬೆಂಗಳೂರು: ಬಹು ನಿರೀಕ್ಷಿತ ಬಿಗ್‍ಬಾಸ್ ಸೀಸನ್ ಐದರ ಆಟ ಮುಗಿದಿದೆ. ಎಲ್ಲರ ನಿರೀಕ್ಷೆಯಂತೆ ಹಾರೈಕೆಯಂತೆ ಭರ್ಜರಿ ಮನರಂಜನೆ ನೀಡ್ತಾ ಬಂದಿದ್ದ ಚಂದನ್ ಶೆಟ್ಟಿ ಗೆಲುವಿನ ಪತಾಕೆ ಹಾರಿಸಿದ್ದಾರೆ.

ಕನ್ನಡ ನಾಡಿನಲ್ಲಿ ‘ಮೂರೇ ಮೂರು ಪೆಗ್ಗು’ ಹಾಡಿನ ಮೂಲಕ ಫೀನಿಕ್ಸ್ ನಂತೆ ಎದ್ದು ಬಂದ ಅದೇ ಚಂದನ್ ಶೆಟ್ಟಿ ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ವಿನ್ ಆದ್ರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸ್ತೀನಿ ಎಂದು ನುಡಿದ್ದ ಚಂದನ್ ಶೆಟ್ಟಿಗೆ ಹೆತ್ತವರ ಆಶೀರ್ವಾದದಂತೆ 50 ಲಕ್ಷ ರೂಪಾಯಿ ದಕ್ಕಿದೆ.

ಫೈನಲ್ ವೇಳೆಗೆ ಚಂದನ್‍ಗೆ ಕಾಂಪಿಟೇಟರ್ ಆಗಿದ್ದ ಆಪ್ತ ಸ್ನೇಹಿತ ದಿವಾಕರ್ ಅವರಿಗೆ ರನ್ನರ್ ಅಪ್ ಪಟ್ಟ ದಕ್ಕಿತು. ನೂರೈದು ದಿನಗಳ ಕಾಲ ಭರ್ಜರಿ ಮನರಂಜನೆ ನೀಡಿದ್ದ ಕನ್ನಡ ರ್ಯಾಪರ್ ಚಂದನ್‍ಶೆಟ್ಟಿ ಗೆಲುವಿನ ಮಾಲೆಯನ್ನು ಧರಿಸಿದ್ದಾರೆ. ಒಟ್ಟಾಗಿ ಕೊನೆಯ ವಾರದಲ್ಲಿ ಚಂದನ್, ದಿವಾಕರ್, ಜೆಕೆ, ಶೃತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಮನೆಯಲ್ಲಿ ಉಳಿದುಕೊಂಡಿದ್ದರು. ಶನಿವಾರ ದೊಡ್ಡ ಮನೆಯಿಂದ ಶೃತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಹೊರ ಬಂದಿದ್ದರು. ಅಂತಿಮ ಘಟ್ಟದಲ್ಲಿ ಕಾಮನ್ ಮ್ಯಾನ್‍ಗೂ ಸೆಲಬ್ರಿಟಿಗೂ ನೇರಾ ನೇರ ಸ್ಪರ್ಧೆ ಏರ್ಪಟ್ಟಿತ್ತು.

Advertisement
Advertisement