ಕಿಚ್ಚ ಸುದೀಪ್ (Actor Sudeep) ಹುಟ್ಟುಹಬ್ಬಕ್ಕೆ ಕೌಂಟ್‍ಡೌನ್ ಶುರುವಾಗಿದೆ. ಇದೇ ಸಪ್ಟೆಂಬರ್ 2 ರಂದು ಕಿಚ್ಚ 52ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹುಟ್ಟುಹಬ್ಬದ ಆಚರಣೆ ಕುರಿತಾಗಿ ಈಗಾಗ್ಲೇ ಅಭಿಮಾನಿಗಳಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಹುಟ್ಟುಹಬ್ಬದ ದಿನವೇ ಅಭಿಮಾನಿಗಳು ಕಾದಿರುವ ಸ್ಪೆಷನ್ ನ್ಯೂಸ್ ಕೊಡುವ ಸಾಧ್ಯತೆ ಇದೆ ಸುದೀಪ್. ಅಂದರೆ ಕನ್ನಡದ ಬಿಗ್‍ಬಾಸ್ ಸೀಸನ್ 12ರ ಪ್ರಸಾರದ ಡೇಟ್ ಅನೌನ್ಸ್ ಮಾಡಿ ಟೀಸರ್ ರಿಲೀಸ್ ಆಗುವ ಸಂಭವವಿದೆ. ಕಿಚ್ಚನ ಬಹುನಿರೀಕ್ಷಿತ ರಿಯಾಲಿಟಿ ಶೋ ಕನ್ನಡದ ಬಿಗ್‍ಬಾಸ್ ಶೋ, ಇದೇ ಬರುವ ಸಪ್ಟೆಂಬರ್ ಕೊನೆಯ ವಾರದಿಂದ ಪ್ರಸಾರವಾಗುವ ಸಾಧ್ಯತೆ ಇದೆ. ಹೀಗಾಗಿ ದಿನಾಂಕ ಘೋಷಣೆಯನ್ನ ಕಿಚ್ಚನ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಪ್ರ್ರೈಸ್ ಮಾಡಲು ತಂಡ ಸಿದ್ಧವಾಗಿದೆ ಅನ್ನುವ ಮಾಹಿತಿ ಇದೆ. ಇದನ್ನೂ ಓದಿ: ಕೊಹ್ಲಿಯಿಂದ ಫೋಟೋಗೆ ಲೈಕ್ ಗಿಟ್ಟಿಸಿಕೊಂಡ ಹಾಲ್ಗೆನ್ನೆ ಬ್ಯೂಟಿಯ ಫಸ್ಟ್ ರಿಯಾಕ್ಷನ್
ಬಿಗ್‍ಬಾಸ್‍ಗೆ (Bigg Boss Kannada) ವಿದಾಯ ಹೇಳಿದ್ದ ಕಿಚ್ಚ ಮತ್ತೆ ವಾಪಸ್ ಬಂದ್ರು. ಈ ಬಾರಿ ಒಂದಷ್ಟು ಬದಲಾವಣೆಗಳನ್ನ ಸೂಚಿಸಿದ್ದರು ಕಿಚ್ಚ. ಅದರ ಪ್ರಕಾರ ಈ ಸೀಸನ್ ಬಹು ನಿರೀಕ್ಷಿತ ಸೀಸನ್ ಆಗಿರಲಿದೆ. ಹೀಗಾಗಿ ಬಿಗ್‍ಬಾಸ್ ಬರುವ ದಿನಾಂಕ ಅಂದೇ ರಿವೀಲ್ ಆಗುವ ಸಾಧ್ಯತೆ ಇದೆ. ಹೊಸ ಸೀಸನ್‍ನಲ್ಲಿ ಕಿಚ್ಚನ ಪ್ರೋಮೋ ನೋಡಲು ಫ್ಯಾನ್ಸ್ ಕಾದಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಕಿಚ್ಚನ ಹುಟ್ಟುಹಬ್ಬದ ದಿನ ಕೆ47 ಚಿತ್ರದ ಟೈಟಲ್ ಟೀಸರ್ ರಿಲೀಸ್ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಈ ಸಲದ ಕಿಚ್ಚನ ಹುಟ್ಟುಹಬ್ಬಕ್ಕೆ ಫ್ಯಾನ್ಸ್‍ಗಂತೂ ಹಬ್ಬವೋ ಹಬ್ಬ. ಇದನ್ನೂ ಓದಿ: ರಾತ್ರಿನೇ ಸಿಗೋಣವಾ ಎಂದ ಕಿಚ್ಚ; ಅಭಿಮಾನಿಗಳಿಗೆ ಸುದೀಪ್ ಪತ್ರ