ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಯಾವಾಗ ಎಂಬುದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ಅಕ್ಟೋಬರ್ 8ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಶುರುವಾಗಲಿದೆ. ವಾಹಿನಿಯ ‘ಅನುಬಂಧ 2023’ ಅವಾರ್ಡ್ಸ್ ಸಮಾರಂಭದಲ್ಲಿ ಬಿಗ್ ಬಾಸ್ ಯಾವಾಗ ಶುರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗಡೆ ಹೋಗಲಿದ್ದಾರೆ ಎಂಬ ಪ್ರಶ್ನೆ ಏಳೋದು ಸಹಜ. ಮೊದಲ ಬಾರಿಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮೊದಲ ಸ್ಪರ್ಧಿಯನ್ನು ಕಲರ್ಸ್ ವಾಹಿನಿ ರಿವೀಲ್ ಮಾಡಿದೆ.

ಬೆಸ್ಟ್ ರೇಟೆಡ್ ಚಲನಚಿತ್ರ – 777 ಚಾರ್ಲಿ. ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿರೋ ಚಾರ್ಲಿ!! ಅಭಿನಂದನೆಗಳು ಚಾರ್ಲಿ ಎಂದು ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಮೂಲಕ ಚಾರ್ಲಿ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಡುತ್ತಿದೆ. ಅಂದಹಾಗೆ, 777 ಚಾರ್ಲಿ (777 charlie) ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ಚಾರ್ಲಿ ಕೂಡ ಮನೋಜ್ಞವಾಗಿ ಅಭಿನಯಿಸುವ ಪ್ರೇಕ್ಷಕರ ಮನಗೆದ್ದಿತ್ತು. ಇದನ್ನೂ ಓದಿ:ಕಾವೇರಿಗಾಗಿ ಜೀವ ಕೊಡಲು ಸಿದ್ಧ: ನಟ ರಾಘವೇಂದ್ರ ರಾಜ್ ಕುಮಾರ್
ಬಿಗ್ ಬಾಸ್ ಆಟ ಮುಗಿಯುವವರೆಗೆ ಚಾರ್ಲಿ ಆ ಮನೆಯಲ್ಲಿ ಇರತ್ತಾ ಇಲ್ವಾ ಅನ್ನೋದ್ದರ ಬಗ್ಗೆ ಮಾಹಿತಿ ಇಲ್ಲ. ಆಗಾಗ ಅದು ದೊಡ್ಮನೆಯೊಳಗಡೆ ಎಂಟ್ರಿ ಕೊಡಬಹುದು. ಈ ಬಗ್ಗೆ ಬಿಗ್ ಬಾಸ್ (Bigg Boss Kannada) ತಂಡವೇ ಹೆಚ್ಚಿನ ಮಾಹಿತಿ ನೀಡಬೇಕಿದೆ.
ಈ ಬಾರಿ ಬಿಗ್ ಬಾಸ್ ಮನೆಗೆ ನಮ್ರತಾ ಗೌಡ(Namratha Gowda), ಗೀತಾ ಸೀರಿಯಲ್‌ನ ಭವ್ಯಾ ಗೌಡ(Bhavya Gowda), ಭೂಮಿಕಾ ಬಸವರಾಜ್, ವರ್ಷ ಕಾವೇರಿ, ವರುಣ್ ಆರಾಧ್ಯ, ಸುನೀಲ್ ರಾವ್, ರೂಪಾ ರಾಯಪ್ಪ, ಡಾ.ಬ್ರೋ ಸೇರಿದಂತೆ ಹಲವರ ಹೆಸರು ಸದ್ದು ಮಾಡ್ತಿದೆ. ದೊಡ್ಮನೆಗೆ ಕಾಲಿಡುವ ದಿನವೇ ಅಧಿಕೃತ ಮಾಹಿತಿ ಹೊರಬೀಳಲಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]



