ಬಿಗ್ ಬಾಸ್ ಸೀಸನ್ 9(Bigg Boss) ಈ ಹಿಂದಿನ ಎಲ್ಲಾ ಸೀಸನ್ಕ್ಕಿಂತ ಭಿನ್ನವಾಗಿದೆ. ಹೊಸಬರ ಜೊತೆ ಹಳೆಯ ಸ್ಪರ್ಧಿಗಳ ಜುಗಲ್ಬಂದಿ ಜೋರಾಗಿದೆ. ಹೀಗೆ ಸಾಕಷ್ಟು ವಿಷ್ಯವಾಗಿ ದೊಡ್ಮನೆ ಹೈಲೆಟ್ ಆಗುತ್ತಿದೆ. ಇದೀಗ ವೀಕೆಂಡ್ ಪಂಚಾಯಿತಿಯಲ್ಲಿ ಸ್ಕ್ರಿಪ್ಟ್ ಮಾಡಿಕೊಂಡು ಬಿಗ್ ಬಾಸ್ ಮನೆಯಲ್ಲಿ ಲವ್ ಮಾಡೋಕಾಗಲ್ಲ ಎಂಬ ಪ್ರಶ್ನೆಯನ್ನ ರೂಪೇಶ್ಗೆ ಸುದೀಪ್(Sudeep) ಕೇಳಿದ್ದಾರೆ. ಅದಕ್ಕೆ ಕಿಚ್ಚನ ಮಾತಿಗೆ ಕರಾವಳಿ ಕುವರ ನೇರವಾಗಿ ಉತ್ತರಿಸಿದ್ದಾರೆ.
Advertisement
ಪ್ರತಿ ಸೀಸನ್ನಲ್ಲೂ ದೊಡ್ಮನೆಯಲ್ಲಿ ಸ್ಪರ್ಧಿಯಾಗಿ ಹೋಗಿರೋರು ಬಳಿಕ ಜೋಡಿಯಾಗಿ ಹೈಲೆಟ್ ಆಗುತ್ತಾರೆ. ಅದರಂತೆ ಈ ಸೀಸನ್ನಲ್ಲೂ ಸಾನ್ಯ(Sanya) ಮತ್ತು ರೂಪೇಶ್ ಶೆಟ್ಟಿ (Roopesh Shetty) ಜೋಡಿಯಾಗಿ ಹೈಲೆಟ್ ಆಗಿದ್ದಾರೆ. ಇಬ್ಬರ ಸ್ನೇಹ ನೋಡಿದ್ರೆ ನೋಡುಗರಿಗೆ ಇವರ ಮಧ್ಯೆ ಎನೋ ಇದೆ ಎಂಬಂತೆ ಭಾಸವಾಗುತ್ತಿದೆ. ಇದೀಗ ಮೊದಲ ವಾರದ ವೀಕೆಂಡ್ ಪಂಚಾಯಿತಿಯಲ್ಲಿ ಸ್ಕ್ರಿಪ್ಟ್ ಮಾಡಿಕೊಂಡು ಲವ್ ಮಾಡಬಹುದಾ ಎಂದು ಯೆಸ್ ಆರ್ ನೋ ರೌಂಡ್ನಲ್ಲಿ ಸುದೀಪ್, ರೂಪೇಶ್ಗೆ ಕೇಳಿದ್ದಾರೆ.
Advertisement
Advertisement
ನನ್ನ ಪ್ರಕಾರ ಪ್ರೀತಿ ಅನ್ನೋದು ನಾಟಕ ಮಾಡಿಕೊಂಡು ಇರೋಕೆ ಆಗಲ್ಲ. ಪ್ರೀತಿ ಒಳಗಿಂದ ಬರಬೇಕು ಎಂದು ರೂಪೇಶ್ ಹೇಳಿದಾಗ ನಿಜವಾಗ್ಲೂ ನಾ ಎಂದು ಕಿಚ್ಚ ಪ್ರಶ್ನಿಸಿದ್ದಾರೆ. ಪಕ್ಕದಲ್ಲಿ ನಿಮ್ಮ ತಂಗಿನ ಕೇಳಿ ಎಂದಿದ್ದಾರೆ. ಕಾವ್ಯಶ್ರೀ ನನಗೆ ತಂಗಿನೇ ಎಂದು ರೂಪೇಶ್ ಉತ್ತರಿಸಿದ್ದಾರೆ. ಅಯ್ಯೋ ದೇವರೇ ನನಗೆ ತಂಗಿ ಬಗ್ಗೆ ಡೌಟ್ ಇಲ್ಲಾ, ನಾಟಕ ಮಾಡಿಕೊಂಡು ಇಲ್ಲಿ ಪ್ರೀತಿ ಮಾಡೋಕೆ ಆಗಲ್ಲ ಅಂತಾ ಅವರ ಮುಖ ನೋಡಿಕೊಂಡು ಹೇಳಿ ಎಂದು ಸುದೀಪ್ ಹೇಳಿದಕ್ಕೆ ಸಾನ್ಯಗೆ ಹೇಳಬೇಕಾ ಎಂದು ಕೇಳಿದ್ದಾರೆ. ಕುಂಬಳಕಾಯಿ ಕಳ್ಳ ಯಾರು ಅಂದ್ರೆ ರೂಪೇಶ್ ಅನ್ನುವ ಹಾಗಾಗಿತ್ತು ರೂಪೇಶ್ ಪರಿಸ್ಥಿತಿ. ಇದನ್ನೂ ಓದಿ:ಆರು ವರ್ಷಗಳ ಬಳಿಕ ಜೀ ಪಿಕ್ಚರ್ಸ್ ನಲ್ಲಿ ಸೂಪರ್ ಹಿಟ್ ‘ರಾಮಾ ರಾಮಾ ರೇ’ ಸಿನಿಮಾ
Advertisement
ಈ ಪ್ರೀತಿ ವಿಚಾರಕ್ಕೆ ನೀವು ನನ್ನ ಕರೆಯಬೇಡಿ ಎಂದು ರೂಪೇಶ್ ಹೇಳಿದಾಗ, ಬಿಗ್ ಬಾಸ್(Bigg Boss) ಓಪನ್ ಆದಾಗ ನಾನು ಹೇಳಿದ್ದೀನಾ ಪ್ರೀತಿ ಮಾಡಬೇಡಿ ಅಂತಾ, ನೀವೇ ಸ್ಟೇಜ್ ಮೇಲೆ ಹೇಳಿದ್ದು, ಪ್ರೀತಿ ಮಾಡಲ್ಲ ಅಂತಾ ಎಂದು ಮತ್ತೆ ರೂಪೇಶ್ಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಗ್ಯಾಪ್ನಲ್ಲಿ ಹಾಸಿಗೆ ತನಕ ಹೋಗಿ ಹ್ಯಾಪಿ ಬರ್ತ್ಡೇ ಅಂತಾ ಡೆಕೋರೇಷನ್ ಮಾಡಿದವರು ನೀವು ಎಂದು ಸಾನ್ಯ ವಿಷ್ಯವಾಗಿ ರೂಪೇಶ್ಗೆ ನೇರವಾಗಿ ಸುದೀಪ್ ಕಾಲೆಳೆದಿದ್ದಾರೆ. ಒಟ್ನಲ್ಲಿ ಕಿಚ್ಚನ ಪ್ರಶ್ನೆಗೆ ರೂಪೇಶ್ ಫುಲ್ ಡೌಟ್ನಲ್ಲಿಯೇ ಇದ್ದರು. ಇದು ಮನೆಯವರ ನಗುವಿಗೆ ಕಾರಣವಾಗಿತ್ತು. ಇನ್ನೂ ಮುಂದಿನ ದಿನಗಳಲ್ಲಿ ರೂಪೇಶ್ ಮತ್ತು ಸಾನ್ಯ ಕಹಾನಿ ಏನಾಗಬಹುದು ಎಂಬುದನ್ನ ಕಾದುನೋಡಬೇಕಿದೆ.