ಸೋನು ಸದ್ಯಕ್ಕೆ ರಾಕಿ (Rakesh Adiga) ಬಗ್ಗೆ ಇರುವ ಪೊಸೆಸಿವ್‍ನೆಸ್ ಅನ್ನು ಕಳೆಯುವುದಕ್ಕೆ ಯತ್ನಿಸುತ್ತಿದ್ದಾಳೆ. ಇಂದು ಬೆಳ್ಳಂ ಬೆಳ್ಳಗ್ಗೆಯೇ ಕುಳಿತು ರಾಕಿ ಬಗ್ಗೆ ಸೋಮಣ್ಣ (Somanna Machimada) ಹತ್ತಿರ ಮಾತನಾಡುತ್ತಿದ್ದಳು. ಬೇಬಿ ಥರ ಚೇಂಜ್ ಇರೋನು ಅಂದ್ರೆ ಅದು ನನ್ನ ಮೂರ್ಖತನ. ಅವನು ನನಗೆ ಆ ಸಲಿಗೆ ಕೊಟ್ಟು, ನನಗೆ ಕೇರ್ ಮಾಡಿದ್ದಾನೆ ಅಂದ್ರೆ ಅದು ನನಗೆ ಒಳ್ಳೆಯದ್ದೆ. ನಂಗೆ ಯಾವ ಥರದ್ದು ಫೀಲಿಂಗ್ಸ್ ಇಲ್ಲ ಸೋಮಣ್ಣ. ನಂಗೆ ಅವನ ಮೇಲೆ ಅಯ್ಯೋ ಎನಿಸಿದೆ. ಅಯ್ಯೋ ಎನಿಸಿದಾಗಲೇ ಒಬ್ಬ ಮನುಷ್ಯ ಇನ್ನೊಬ್ಬನಿಗೆ ಕೇರ್ ಮಾಡುವುದಕ್ಕೆ ಸಾಧ್ಯ. ಸದ್ಯಕ್ಕೆ ನನಗೆ ಏನು ಕೊರತೆಯಾಗಿದೆ ಅಂದ್ರೆ. ಅವನ ಕ್ಯಾರೆಕ್ಟರ್ ಇರುವುದೇ ಹಾಗೆ ಅಲ್ವಾ. ಅವನು ನನ್ನ ಜೊತೆ ಇರುವ ತರ ಬೇರೆ ಹುಡುಗಿಯರ ಬಳಿ ಇದ್ದರೆ ನನಗ್ಯಾಕೆ ಪೊಸೆಸಿವ್‍ನೆಸ್ ಆಗ್ತಿದೆ. ಲವ್ ಅಲ್ಲ ಮಣ್ಣು ಅಲ್ಲ ಮಸಿ ಅಲ್ಲ ಎಂದಿದ್ದಾರೆ.
ನನ್ನ ಫ್ಯೂಚರೇ ಬೇರೆ, ಅವನ ಕನಸೇ ಬೇರೆ. ಆದರೆ ಅವನು ಎಲ್ಲಾ ಹುಡುಗಿಯರ ಜೊತೆ ಇದ್ದಾಗ ನಂಗ್ಯಾಕೆ ಪೊಸೆಸಿವ್‍ನೆಸ್ ಬರುತ್ತಿದೆ ಗೊತ್ತಾಗುತ್ತಿಲ್ಲ. ಅವನು ಮೊದಲಿನಿಂದಲೂ ಎಲ್ಲಾ ಹುಡುಗಿಯರ ಜೊತೆಗೂ ಒಂದೇ ರೀತಿಯಲ್ಲಿ ಇದ್ದಿದ್ದರೆ ನಂಗೆ ಈ ರೀತಿಯೆಲ್ಲಾ ಅನ್ನಿಸುತ್ತಾ ಇರಲಿಲ್ಲ. ಆದರೆ ಅವನು ಮಾತಲ್ಲಿ ಹೇಳುತ್ತಿದ್ದಾನೆ. ಎರಡು ದಿನದಿಂದ ನಡವಳಿಕೆ ಚೇಂಜ್ ಆಗುತ್ತಿದೆ. ನೀನು ಪೊಸೆಸಿವ್ ಆಗಬೇಡ. ನಾನು ಎಲ್ಲರ ಜೊತೆಗೂ ಹೀಗೆ ಇರೋದು ಅಂತಿದ್ದಾನಲ್ಲ. ಹಂಗೆಲ್ಲಾ ಎಲ್ಲಿದ್ದ. ಮೊದಲಿನಿಂದ ನನ್ನ ಜೊತೆಗೆ ಮಾತ್ರ ಅಲ್ವಾ ಇದ್ದದ್ದು ಎಂದಿದ್ದಾಳೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?
ಇದನ್ನೆಲ್ಲಾ ಕೇಳಿಸಿಕೊಂಡ ಗುರೂಜಿ, ಹಂಗೆಲ್ಲಾ ಏನಿಲ್ಲಾ ಕಣವ್ವ ನೀನೇ ಲೇಟ್ ಆಗಿ ಹೋಗಿ ನಂದೆ ಬಸ್ಸು ಅಂತ ಇದ್ದೀಯಾ. ಬಸ್ ಮುಂಚೆನೆ ಓಡಿದೆ, ಪಿಕಪ್ ಮಾಡಿದೆ, ಡ್ರಾಪ್ ಮಾಡಿದೆ ಎಲ್ಲಾ ಕಥೆ ಗೊತ್ತಿದ್ದರು, ನಂದೇ ಬಸ್ ನಂದೆ ಬಸ್ ಅಂದ್ರೆ. ಊರಿಗೆ ಗೊತ್ತು ಆ ಬಸ್ ಬೇರೆ ಹತ್ತಿದೆ ಅಂತ. ಟಿಕೆಟ್ ತಗೊಂಡ್ವಾ ಮನೆಗೋದ್ವಾ, ಇಳಿದ್ವಾ ಅಂತ ಅನ್ನೋದು ಬಿಡೋದು ಬಿಟ್ಟು ನಂದೆ ಬಸ್ ಅಂತಾ ಇದ್ರೆ ಅಂತ ಗುರೂಜಿ ಅಷ್ಟೆಲ್ಲಾ ಹೇಳಿದರೂ ಅದನ್ನು ಕೇಳುವುದಕ್ಕೆ ಸೋನು ರೆಡಿ ಇಲ್ಲ. ನಿನ್ನೆಯಿಂದ ನಾನು ಹ್ಯಾಪಿಯಾಗಿದ್ದೀನಿ. ಬಿಕಾಸ್ ನಿಮ್ಮತ್ರ ಎಲ್ಲಾ ಟೈಪಾಸ್ ಮಾಡುತ್ತಾ ಇದ್ದೀನಿ ಎಂದಿದ್ದಾಳೆ. ಜೊತೆಗೆ ನನಗೆ ಉರಿಸಬೇಕು ಅಂತ ಯಾರಾದರೂ ಮಾಡಿದರೆ ನಾನು ಉರಿದುಕೊಳ್ಳಲ್ಲ. ನಾಣು ಹೊರಗಡೆ ಬಂದು ಬಿಟ್ಟಿದ್ದೀನಿ. ಇದನ್ನೂ ಓದಿ: ಸಿದ್ಧಾರ್ಥ್ ಜೊತೆ ಡ್ಯುಯೆಟ್ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್
ಅದಾದ ಮೇಲೆ ರಾಕಿಗೆ ಉರಿಸುವುದಕ್ಕೆ ಸೋನು (Sonu Srinivas Gowda) ಶುರು ಮಾಡಿದಳು. ಸೋನುಗೆ ಉರಿಸಲು ರಾಕಿ ಮತ್ತು ಜಯಶ್ರೀ ಶುರು ಮಾಡಿದರು. ಇದರ ಪರಿಣಾಮ ರೂಪೇಶ್ ಬಳಿ ಒಂದು ಮೊಟ್ಟೆ ತೆಗೆದುಕೊಂಡು, ತನ್ನ ಬಳಿಯಿದ್ದ ಒಂದು ಮೊಟ್ಟೆ ಹಾಕಿದ ಸೋನು (Jayashree Aradhya) ಸೂಪರ್ ಆಗಿ ಎಗ್ ರೈಸ್ (Egg Rice) ಮಾಡಿದಳು. ಜಯಶ್ರೀ ಒಂದೇ ಒಂದು ತುತ್ತು ಕೊಡು ಎಂದರೂ ಕೊಡಲಿಲ್ಲ. ಆದರೆ ರೂಪೇಶ್ (Roopesh Shetty) ಮೂರು ಸ್ಪೂನ್ ಕೊಟ್ಟಿದ್ದಾನೆ. ಎಗ್ ರೈಸ್ ತಿನ್ನುವಾಗ ಡೈನಿಂಗ್ ಟೇಬಲ್ ಮೇಲೆ ನಾನಾ ಫನ್‍ಗಳು ನಡೆದಿವೆ. ಸೋನು, ರೂಪೇಶ್‍ಗೆ ಎಗ್ ರೈಸ್ ತುತ್ತು ಕೊಟ್ಟಿದ್ದಾಳೆ. ಆಗ ಎದುರಿಗಿದ್ದ ರಾಕಿ, ಕಿಸ್ ಕೊಡೇ ಜಯಶ್ರೀ, ನೀನೆ ಕೊಡ್ತಿಯಾ ಅಥವಾ ನಾನು ಕೊಡ್ಲಾ ಅಂತ ಹೇಳಿ ರಾಕಿನೆ ಕಿಸ್ ಕೊಟ್ಟಿದ್ದಾನೆ. ಈ ಕಡೆ ರೂಪಿಗೆ ಭಯ. ಸೋನು ಎಲ್ಲಿ ನನಗೆ ಕಿಸ್ ಕೊಟ್ಟು ಬಿಡುತ್ತಾಳೋ ಅಂತ. ಮುಖ ಮುಖ ನೋಡಿ ಗಾಬರಿಯಲ್ಲಿಯೇ ಎಗ್ ರೈಸ್ ತಿಂದಿದ್ದಾನೆ.