Bengaluru CityCinemaKarnatakaLatestSandalwood

ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

ಬಿಗ್ ಬಾಸ್ ಓಟಿಟಿ(Bigg Boss Ott) ಮೂಲಕ ಮೋಡಿ ಮಾಡಿರುವ ಸ್ಪರ್ಧಿ ನಂದಿನಿ(Nandini) 5 ವಾರಕ್ಕೆ ಎಲಿಮಿನೇಷನ್ ಆಗಿ ಹೊರ ಬಂದಿದ್ದಾರೆ. ಹಿಂದಿ ರಿಯಾಲಿಟಿ ಶೋ ವಿನ್ನರ್ ನಂದಿನಿ ಬಿಗ್ ಬಾಸ್ ಮನೆಗೆ ಬರಲು ಭರ್ಜರಿ ಸಂಭಾವನೆಯನ್ನೇ ಪಡೆದಿದ್ದರಂತೆ.

ಬಿಗ್ ಬಾಸ್ ಓಟಿಟಿ ಮುಗಿಯಲು ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ಓಟಿಟಿ ವಿನ್ನರ್ ಯಾರಾಗಲಿದ್ದಾರೆ ಎಂಬುದರ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಹೀಗಿರುವಾಗ ಕಳೆದ ವಾರ ಮನೆಯಿಂದ ಹೊರ ಬಂದ ನಂದಿನಿ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ನಂದಿನಿ ಅವರ ಸಡನ್ ಎಲಿಮಿನೇಷನ್ ನೆಟ್ಟಿಗರ ಶಾಕ್ ಕೊಟ್ಟಿರುವ ಬೆನ್ನಲ್ಲೇ ಅವರ ಸಂಭಾವನೆ ವಿಷ್ಯ ಕೂಡ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಸಿದ್ಧಾರ್ಥ್‌ ಜೊತೆ ಡ್ಯುಯೆಟ್‌ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್

ದೊಡ್ಮನೆಯಲ್ಲಿ ಟಫ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದ ನಂದಿನಿ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ನಂದು ಮತ್ತು ಜಶ್ ಜೋಡಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಹೀಗಿರುವಾಗ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿಯಲು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ. ಹೀಗಿರುವಾಗ ಅವರ ಸಂಭಾವನೆ ವಿಷ್ಯ ಕೂಡ ಸಖತ್ ಚರ್ಚೆ ಆಗುತ್ತಿದೆ. ಒಂದು ವಾರಕ್ಕೆ 5 ಲಕ್ಷದಂತೆ, 5 ವಾರಕ್ಕೆ 25 ಲಕ್ಷ ರೂಪಾಯಿ ಸಂಭಾವನೆಯನ್ನ ನಂದಿನಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಮೂಲಗಳ ಪ್ರಕಾರ 25 ಲಕ್ಷ ರೂಪಾಯಿ ಸಿಕ್ಕಿದೆ ಎನ್ನಲಾಗುತ್ತಿದೆ.

ಇನ್ನೂ ನಂದಿನಿ ಮತ್ತಷ್ಟು ಪ್ರಾಜೆಕ್ಟ್‌ ಮತ್ತು ರಿಯಾಲಿಟಿ ಶೋಗಳ ಮೂಲಕ ಮೋಡಿ ಮಾಡಲಿ ಎಂಬುದೇ ಅಭಿಮಾನಿಗಳ ಆಶಯ.

Live Tv

Leave a Reply

Your email address will not be published.

Back to top button