ಬಿಗ್ ಬಾಸ್ (Bigg Boss) Kannada OTT Aryavardhan Guruji And ಮನೆಯಲ್ಲಿ ಸೋನು (Sonu Srinivas Gowda) ಸಿಕ್ಕಾಪಟ್ಟೆ ಹಚ್ಚಿಕೊಂಡಿರುವುದು ಒನ್ ಅಂಡ್ ಓನ್ಲಿ ರಾಕೇಶ್‍ನನ್ನು (Rakesh Adiga) ಮಾತ್ರ. ಅದಕ್ಕೂ ಒಂದು ರೀಸನ್ ಇದೆ. ರಾಕೇಶ್ ಬೇರೆ ಯಾವ ಹುಡುಗಿಯರ ಜೊತೆ ಮಾತನಾಡುವುದಿಲ್ಲ, ಬೇರೆ ಯಾವ ಹುಡುಗಿಯರನ್ನು ಹಗ್ ಮಾಡುವುದಿಲ್ಲ ಎಂಬ ಕಾರಣಕ್ಕೆ ಸೋನು ಕೂಡ ಅದಕ್ಕೆ ಹೊರತಾಗಿಲ್ಲ. ತಾನು ಎಕ್ಸ್ಪೆಕ್ಟ್ ಮಾಡಿದ್ದಂತೆ ಅವಳು ನಡೆದುಕೊಂಡಿದ್ದಾಳೆ. ಅದು ಇವತ್ತು ರೂಪೇಶ್‍ಗೆ ಕೈ ತುತ್ತು ಕೊಟ್ಟಾಗಲೇ ಗೊತ್ತಾಯ್ತು. ಬಿಗ್ ಬಾಸ್ ಮನೆಯಲ್ಲಿ ನಾನು ಕೈ ತುತ್ತು ಕೊಡುತ್ತಿರುವ ಎರಡನೇ ಹುಡುಗ ನೀನು ಎಂದಿದ್ದಾಳೆ.
ಆದ್ರೆ ಸೋನು ಈ ರೀತಿ ಹಚ್ಚಿಕೊಳ್ಳುವುದು ರಾಕೇಶ್‍ಗೆ ಇಷ್ಟವಾಗುತ್ತಿಲ್ಲ. ಅವನು ಯೋಚನೆ ಮಾಡುವ ರೀತಿಯೂ ಸರಿಯಾಗಿದೆ. ಬಿಗ್ ಬಾಸ್ ಮನೆಯ ಜರ್ನಿ ಇರುವುದು ಇನ್ನು ಮೂರೇ ದಿನ. ನಾಲ್ಕನೇ ದಿನಕ್ಕೆ ಎಲ್ಲರೂ ಹೊರಗಿನ ಪ್ರಪಂಚದಲ್ಲಿರುತ್ತಾರೆ. ಅವಳ ಫೀಲಿಂಗ್ಸ್ ಜಾಸ್ತಿಯಾಗಿ ಅದರಿಂದ ಇಬ್ಬರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಲವೊಮ್ಮೆ ನೇರ ಮಾತಿನಿಂದ ಉತ್ತರ ಕೊಡುತ್ತಾನೆ. ಈ ಮಾತುಗಳು ಸೋನುಗೆ ಫೀಲಿಂಗ್ ಲೆಸ್ ಹುಡುಗ ಎನಿಸಿದೆ. ಇದನ್ನೂ ಓದಿ: ಸೋನು-ರಾಕೇಶ್ ನಡುವೆ ಜಯಶ್ರೀ ಆಟ!
ಸೋನು ತನಗೆ ಬೇಜಾರಾದಾಗ ಕನ್ನಡಿ ಮುಂದೆ ನಿಂತು ಮಾತನಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿದ್ದಾಳೆ. ಅವಳೇನಾದರೂ ತಪ್ಪು ಮಾಡಿದ್ದೀನಿ ಎನಿಸಿದರೆ ಆ ಕನ್ನಡಿಯಲ್ಲಿರುವ ಸೋನುಗೆ ಹೇಳಿ, ತಿದ್ದಿಕೊಳ್ಳುತ್ತಾಳೆ. ಈಗ ರಾಕಿ ವಿಚಾರದಲ್ಲಿಯೂ ಅದನ್ನೇ ಮಾಡುತ್ತಿದ್ದಾಳೆ. ಮಿರರ್ ಮುಂದೆ ಕುಳಿತು, ಬಿಡು ಸೋನು ನಿಂಗೆ ಯಾರ ಜೊತೆಗೂ ಫೀಲಿಂಗ್ಸ್ ಬರಲ್ಲ. ನೀನು ಆ ಥರದ ಹುಡುಗಿ. ನಿನಗೆ ಕಲ್ಲು ಮನಸ್ಸು, ನಂಗೆ ಗೊತ್ತು ನೀನು ಏನು ಅಂತ ಹಂಗೆ ಹಿಂಗೆ ಅಂತ ಹೇಳ್ತಿದ್ದೆ ತಾನೇ. ಈಗ ಹೆಂಗೆ ಫೀಲಿಂಗ್ಸ್ ಬಂತು ಹೇಳು. ನಿಂದು ತಪ್ಪು ಸೋನು. ಗುಡ್ ಗರ್ಲ್. ನಾಳೆಯಿಂದ ಕೇರ್ ಟೇಕ್ ಮಾಡಬಾರದು. ಅವರಾಗಿ ಅವರು ಮಾತನಾಡಿಸಿದರೆ ಮಾತ್ರ ಮಾತನಾಡಬೇಕು. ಇಲ್ಲಿ ಫೀಲಿಂಗ್ಸ್‌ಗೆ ವ್ಯಾಲ್ಯೂ ಇಲ್ಲ ಆಯ್ತಾ. ಆದರೂ ಏನೋ ಒಂಥರ ಫೀಲ್ ಆಗುತ್ತಾ ಇದೆ. ಕಣೇ. ಏನು ಫೀಲಿಂಗ್ ಆಗುತ್ತಾ ಇದೆ ಕಣೆ. ಅದೇ ನಂಗು ಗೊತ್ತಿಲ್ಲ ಕಣೇ. ಮಾಡುವುದೆಲ್ಲಾ ಮಾಡಿ ಈಗ ಏನು ಗೊತ್ತಿಲ್ಲ ಅಂದ್ರೆ. ನೀನು ಏನು ತಪ್ಪು ಮಾಡಿಲ್ಲ. ನೀನು ಜಸ್ಟ್ ಅವನಿಗೆ ಒಂದು ತಾಯಿ ಮಗು ಥರ ಟ್ರೀಟ್ ಮಾಡಿದ್ದೀಯಾ ಅಷ್ಟೇ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದೀಯಾ ತಾನೇ. ಇದನ್ನೂ ಓದಿ: ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ – ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ
ನೀನು ಮಗು ಥರ ನೋಡಿದ್ದು ಅದೆಲ್ಲಾ ಓಕೆ. ಆದರೆ ಯಾಕೆ ನಿಂಗೆ ಪೊಸೆಸಿವ್‌ನೆಸ್ ಆಗುತ್ತಿದೆ. ತಲೇನೆ ಕೆಡಿಸಿಕೊಳ್ಳುವುದಕ್ಕೆ ಹೋಗಬೇಡ. ಯಾರಿಗೋ ಕೇರ್ ಟೇಕ್ ಮಾಡುವುದಕ್ಕೆ ಹೋಗಿ, ನೀನ್ಯಾಕೆ ಮೂಡ್‍ಆಫ್ ಆಗ್ತೀಯಾ. ನಿನ್ನ ಹಿಂದೆ ಸಾವಿರ ಜನ ಹುಡುಗರು ಇದ್ದಾರೆ ಅಂತ ಸೋನು ಹೇಳಿದ್ದೆ ತಡ, ಆ ಕತ್ತಲಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ಗುರೂಜಿ (Aryavardhan Guruji) ಹೊಟ್ಟೆ ಉಣ್ಣಾಗಿಸುವಷ್ಟು ಕಾಮಿಡಿ ಮಾಡಿದ್ದಾರೆ. ಎಲ್ಲಿದ್ದಾರೆ ಸಾವಿರ ಜನ ಹುಡುಗರು. ಇಲ್ಲಿ ನಾನೊಬ್ಬನೆ ಇರುವುದು. ಹಲೋ ನಾನು ಒಬ್ಬನೆ ಇರುವುದು. ನಾನೇ ನಿಂಗೆ ಸಾವಿರ ಜನರಂತೆ ಕಾಣುತ್ತಿದ್ದೀನಾ ಸೋನು ಅಂತ ಪ್ರಶ್ನೆ ಮಾಡಿದರೂ ಸೋನು ಸುಮ್ಮನೆ ಹೋಗಿದ್ದಾಳೆ. ಆದರೆ ಸೋನು ಮನಸ್ಥಿತಿ ನಾರ್ಮಲ್ ಆಗಿ ಇದ್ದಿದ್ದರೆ ಗುರೂಜಿ ಕಥೆ ಆ ಕಷ್ಣ ಮುಗಿದೇ ಹೋಗಿ ಬಿಡುತ್ತಾ ಇತ್ತು. ಮೈಯಲ್ಲಿರುವ ಬೆವರನ್ನೇ ಇಳಿಸುವಷ್ಟು ಜೋರು ಧ್ವನಿಯಲ್ಲಿ ಸೋನು ಮಾತನಾಡುತ್ತಿದ್ದಳು.