ಇವತ್ತಿನ ಎಪಿಸೋಡ್ ಪೂರ್ತಿ ಗುರೂಜಿಯ ಸ್ವಾರ್ಥ, ಆ ಸ್ವಾರ್ಥದ ಹಿಂದಿನ ಉದ್ದೇಶ, ಅದರ ಜೊತೆಗೆ ಹೊತ್ತಿಕೊಂಡ ಬೆಂಕಿಯಿಂದಾನೇ ಅರ್ಧ ದಿನ ಕಳೆದು ಹೋಯ್ತು. ಗುರೂಜಿ ಹೇಳಿದ ಮಾತುಗಳಿಗೆ, ಸೋನು ಮತ್ತು ಜಯಶ್ರೀ ಕೊಟ್ಟ ವಿವರಣೆಗೆ ರೂಪೇಶ್ ಅಂಡ್ ರಾಕೇಶ್ ಬಿದ್ದು ಬಿದ್ದು ನಕ್ಕಿದ್ದಾರೆ. ಇಷ್ಟು ದಿನದ ಬಿಗ್ ಬಾಸ್ ಮನೆಯಲ್ಲಿ ಇಷ್ಟು ಒಳ್ಳೆಯ ಎಂಟರ್ಟೈನ್ಮೆಂಟ್ ಸಿಕ್ಕಿದ್ದು ಇಲ್ಲವೇ ಇಲ್ಲ ಎನಿಸುತ್ತದೆ.
ಜಯಶ್ರೀ, ಸೋನುಳನ್ನು ಆಯ್ಕೆ ಮಾಡಿದ್ದಕ್ಕೆ ಗುರೂಜಿ ಕೋಪ ಹೆಚ್ಚಾಗಿದೆ. ಅದನ್ನು ಸೋಫಾದ ಮೇಲೆ ಕುಳಿತಾಗಲೂ ಹೇಳಿದ್ದಾರೆ. ಜಯಶ್ರೀ ನೋಡುವ ತನಕ ನೋಡಿ ಇದ್ಯಾಕೋ ನಿಲ್ಲಲ್ಲ ಎಂದು ಗೊತ್ತಾದಾಗ ಅಡುಗೆ ಮನೆ ಕಡೆಗೆ ಬಂದಿದ್ದಾಳೆ. ಆಗ ಸೋಮಣ್ಣ ಮತ್ತು ಸಾನ್ಯಾಗೆ ಅಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ವಿವರಿಸಿದ್ದಾಳೆ. ಅದೇ ಸಮಯಕ್ಕೆ ಗುರೂಜಿ ಮತ್ತೆ ಅಲ್ಲಿಗೆ ಬಂದಿದ್ದಾರೆ. ಬದವರು ಮತ್ತೆ ಅದೇ ಆಯ್ಕೆಯ ವಿಚಾರ ತೆಗೆದಿದ್ದಾರೆ. ಜಯಶ್ರೀ ಅದಾಗ್ಯೂ ನಾನು ಈಗಾಗಲೇ ಎಲ್ಲವನ್ನು ವಿವರಿಸಿದ್ದೀನಿ ಎಂದೇ ಹೇಳಿದ್ದಾಳೆ. ಆದರೆ ಗುರೂಜಿ ಮಾತ್ರ ತನ್ನ ವಿವರಣೆಯನ್ನು ಮಾತ್ರ ನಿಲ್ಲಿಸಲೇ ಇಲ್ಲ. ಇದನ್ನೂ ಓದಿ: ಸೋನು ಆಯ್ಕೆ ಮಾಡಿದ್ದಕ್ಕೆ ಗುರೂಜಿಗೆ ಕೋಪ – ನನ್ನ ವೋಟಿಗೆ ನ್ಯಾಯ ಬೇಕೆಂದು ಮನೆ ತುಂಬಾ ರಾದ್ಧಾಂತ!
ನಿಂದೆಲ್ಲಾ ಓಕೆ, ನಾಲ್ಕು ಜನ ಒಳಗೆ ಇದ್ದಾಗ ನೀನು ಯೋಚಿಸಬೇಕು. ಇಲ್ಲಿಗೆ ಆಗೋಯ್ತು ಬಿಡು ಆದರೆ ಹೊರಗು ಸರಿಯಾಗಿ ಯೋಚನೆ ಮಾಡು ಎಂದು ಜಯಶ್ರೀಗೆ ಬುದ್ದಿ ಹೇಳಿದ್ದಾರೆ. ಅಲ್ಲಿಯೇ ಇದ್ದ ಸೋಮಣ್ಣ, ಆಯ್ತು ನೀವೂ ಇವತ್ತು ಎರಡು ಆಟ ಗೆದ್ದಿದ್ದೀರಿ ಅದನ್ನು ಸಂತೋಷ ಪಡಿ ಎಂದಿದ್ದಾರೆ. ಆಗ ಸುಮ್ಮನೆ ಕುಳಿತುಕೊಳ್ಳದ ಸೋನು, ಅವಳು ಅಂದುಕೊಂಡಿರಬಹುದು. ಈಗಾಗಲೇ ಎರಡು ಗೇಮ್ ಸೋತಿದ್ದೀನಿ ಮತ್ತೆ ಸೋಲುವುದು ಬೇಡ ಅಂತ ಆ ರೀತಿ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಒತ್ತಿ ಒತ್ತಿ ಹೇಳಿದ್ದಾಳೆ. ಈ ಮಧ್ಯೆ ಮತ್ತೆ ಮಾತನಾಡಿದ ಗುರೂಜಿ, ಅವರ ಬದಲು ನೀವೇ ವೋಟನ್ನು ಕೊಡಿ. ನಮ್ಮ ಮಧ್ಯೆ ಈ ರೀತಿ ಮಾತುಕತೆಯಾಗಿದೆ ಅಂತ ಕೇಳಬೇಕಿತ್ತು ಎಂದು ಸೋಮಣ್ಣನ ಬಳಿ ಹಂಚಿಕೊಳ್ಳುತ್ತಾ ಇದ್ದರು. ಇದನ್ನೂ ಓದಿ: ಆರ್ಯವರ್ಧನ್ ಮುಗ್ಧರಲ್ಲ ಅನ್ನೋದು ಮನೆಮಂದಿಗೆಲ್ಲ ಪ್ರೂವ್ ಆಯ್ತು!
ಆಗ ಮತ್ತೆ ಮಾತು ಶುರು ಮಾಡಿದ ಸೋನು, ನೀನು ಅವರ ವೋಟು ತೆತಗೆದುಕೊಂಡು ದೊಡ್ಡ ತಪ್ಪು ಮಾಡಿದೆ ಎಂದು ಜಯಶ್ರೀಗೆ ಹೇಳಿದ್ದಾಳೆ. ಜಯಶ್ರೀ, ಆಯ್ತು ಬಿಡೆ. ಅದನ್ನೇ ಎಳಿಬೇಡ ಎಂದು ಇತ್ತ ಗುರೂಜಿಗೂ ಬುದ್ದಿ ಹೇಳಿದ್ದಾಳೆ. ಆಯ್ತು ಒಂದು ಮಾತಿಗೆ ಇದನ್ನು ಬಿಡಿ ಗುರೂಜಿ ಎಂದಿದ್ದಾಳೆ. ಆಗ ಮತ್ತೆ ಗುರೂಜಿ ಎರಡು ಥರ ಮಾತನಾಡಬೇಡ ಎಂದಿದ್ದಾರೆ. ಆಗ ಮತ್ತೆ ರೊಚ್ಚಿಗೆದ್ದ ಸೋನು, ಎರಡು ಥರ ಯಾರು ಮಾತನಾಡುತ್ತಿಲ್ಲ ಇಲ್ಲಿ. ನೆಗೆಟಿವಿಟಿಯಿಂದಾನೇ ಅವಳು ಬಿಟ್ಟಿದ್ದಾಳೆ. ಎರಡು ಗೇಮ್ ಸೋತಿರೋದಕ್ಕೆ ಬಿಟ್ಟಿದ್ದಾಳೆ ಎಂದಾಗ ಜಯಶ್ರೀ ಆ ಥರ ಎಲ್ಲಾ ಹೇಳಬೇಡ ಸೋನು, ಈ ಮಾತನ್ನೆಲ್ಲಾ ನಾನು ತಗೋಳುವುದಿಲ್ಲ. ನೆಕ್ಸ್ಟ್ ನಾನು ಆಡಿರುವ ಆಟಗಳಿದ್ದವು. ಆಡದೆ ಇರುವವರನ್ನು ಕರೆದುಕೊಂಡು ನಾನು ಆಡುತ್ತಾ ಇದ್ದೆ. ಗೆದ್ದು ತೋರಿಸಬೇಕು ಅಂತ ನಾನು ನಿಂತುಕೊಳ್ಳಬಹುದಿತ್ತು. ನಾನು ಅದಾಗಲೇ ಆಡಿದ್ದೀನಿ. ಈಗಾಗಲೇ ಜನರಿಗೆ ನಾವೂ ಏನು ಅಂತ ಗೊತ್ತಾಗಿದೆ. ಈ ಕೊನೆವಾರವನ್ನು ಎಂಜಾಯ್ ಮಾಡಲಿ ಅಂತ ಬಿಟ್ಟುಕೊಟ್ಟಿದ್ದು ಅಂತ ಜಯಶ್ರೀ ಹೇಳಿದ್ದಾಳೆ. ಮತ್ತೆ ಅದೇ ಚರ್ಚೆ ಜೋರಾಗಿದೆ. ಈಗ ಇನ್ನು ಬಿಗ್ ಬಾಸ್ ಆದೇಶ ಬಂದಿಲ್ಲ ತಾನೇ ಬದಲಾಯಿಸಿ ಎಂದಿದ್ದಾಳೆ. ಆಗ ಸೋನು ಜಸ್ಟ್ ಆಯ್ತು ಅವರ ಬಾಯಿಯನ್ನು ಮುಚ್ಚಿಸು ಎಂದಿದ್ದಾಳೆ. ಅದಕ್ಕೆ ರೊಚ್ಚಿಗೆದ್ದ ಜಯಶ್ರೀ, ಜೋರು ಧ್ವನಿಯಲ್ಲಿ ನಾನು ಅವರ ಬಾಯಿ ಮುಚ್ಚಿಸುವುದಕ್ಕೆ ಬಿಗ್ ಬಾಸ್‍ಗೆ ಬಂದಿಲ್ಲ ಕಣೇ. ಅವರು ಮಾತನಾಡುವುದಕ್ಕೆ ಎಲ್ಲಾ ಅಧಿಕಾರವೂ ಇದೆ. ನಾನು ಏನು ಅಲ್ಲ. ಅವರ ಮಗಳ, ಬಂಧುವ, ಬಳಗವಾ ಬಾಯಿ ಮುಚ್ಚಿಸು ಮುಚ್ಚಿಸು ಅಂತ ಹೇಳುವುದಕ್ಕೆ. ನಾನೇ ಅಲ್ಲಿಂದ ಎದ್ದು ಬಂದೆ. ಈಗ ನೀನು ಅವರಿರುವ ಕಡೆ ಇರಬೇಡ ಎದ್ದು ಹೋಗು ಎಂದಿದ್ದಾಳೆ.