ಗೌರಿ ಗಣೇಶ ಹಬ್ಬ ಆಚರಿಸಿದ ಬೆನ್ನಲ್ಲೇ ಕಿಚ್ಚನ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಕಿಚ್ಚನ ಹುಟ್ಟುಹಬ್ಬ ಜತೆ ವಾರದ ಕತೆ ಶುರುವಾಗಿದೆ. ಬಿಗ್ ಬಾಸ್ ಮನೆಯಲ್ಲಿ ವಾರದ ಪಂಚಾಯಿತಿಯಲ್ಲಿ ಕಿಚ್ಚನ ಲುಕ್ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಬಿಗ್ ಬಾಸ್ ಮನೆಯ ರೂವಾರಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜನುಮ ದಿನ ಸೆಪ್ಟೆಂಬರ್ ೨, ಅಭಿಮಾನಿಗಳ ಪಾಲಿಗೆ ಸಂಭ್ರಮದ ದಿನವಾಗಿತ್ತು. ಬಿಗ್ ಬಾಸ್ ಮನೆ ಮಂದಿ ಕಿಚ್ಚನ ಹುಟ್ಟುಹಬ್ಬಕ್ಕಾಗಿಯೇ ಹಾಡನ್ನ ಹೇಳುವ ಮೂಲಕ ಶುಭಹಾರೈಸಿದ್ದರು. ಇದನ್ನೂ ಓದಿ:ರಶ್ಮಿಕಾ- ಅಮಿತಾಭ್ ಬಚ್ಚನ್ ನಟನೆಯ ʻಗುಡ್ ಬೈ’ ಫಸ್ಟ್ ಲುಕ್ ರಿವೀಲ್
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಬಿಗ್ ಬಾಸ್‌ನಲ್ಲಿ ಆಚರಿಸಲಾಯಿತು. ಈ ವಾರದ ಎಪಿಸೋಡ್‌ನಲ್ಲಿ ಆಲಿವ್ ಹಸಿರು ಕೋಟ್ ಬ್ಲ್ಯಾಕ್ ಪ್ಯಾಂಟ್‌ನಲ್ಲಿ ಸುದೀಪ್ ಮಿಂಚಿದ್ದಾರೆ. ಕಿಚ್ಚನ ಲುಕ್ ಸದ್ಯ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಈಗಾಗಲೇ ಅರ್ಜುನ್ ರಮೇಶ್, ಲೋಕೇಶ್, ಸ್ಪೂರ್ತಿ ಗೌಡ, ಕಿರಣ್ ಯೋಗೇಶ್ವರ್ ಮನೆಯಿಂದ ಹೊರ ನಡೆದಿದ್ದಾರೆ. ಇನ್ನು ಫಿನಾಲೆಗೆ ಎರಡು ವಾರಗಳಿದ್ದು, ಈ ವಾರ ಪ್ರಸಾರವಾಗಲಿರುವ ಎಪಿಸೋಡ್‌ನಲ್ಲಿ ದೊಡ್ಮ,ನೆಯಿಂದ ಯಾರು ಹೊರನಡೆಯಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.