ಕಳೆದ ಸಲದಂತೆ ಈ ಬಾರಿಯೂ ಅಕ್ಟೋಬರ್ ಮೂರನೇ ವಾರದಿಂದ ಬಿಗ್ ಬಾಸ್ ಕನ್ನಡ (Bigg Boss Kannada) ಶುರುವಾಗಲಿದೆ ಅನ್ನೋ ಮಾಹಿತಿ ಸಿಕ್ಕಿದೆ. ಅದಕ್ಕಾಗಿ ಸರ್ವ ರೀತಿಯಲ್ಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ಕಳೆದ ಬಾರಿ ಕಂಟೆಸ್ಟೆಂಟ್ (Contestant) ಕಾರಣದಿಂದಾಗಿ ಶೋ ಗೆದ್ದಿತ್ತು. ಈ ಬಾರಿಯೂ ಅದೇ ತಂತ್ರಕ್ಕೆ ಬಿಗ್ ಬಾಸ್ ಟೀಮ್ ಮೊರೆ ಹೋಗಲಿದೆಯಂತೆ.
ಸೋಷಿಯಲ್ ಮೀಡಿಯಾದಲ್ಲಿ ಮಿಂಚಿದೋರು, ವಿವಾದಕ್ಕೆ ಕಾರಣರಾಗಿದ್ದವರು ಮತ್ತು ಹೆಚ್ಚು ಮನರಂಜನೆ ನೀಡಬಲ್ಲ ಮುಖಗಳನ್ನು ಹುಡುಕುವ ಕೆಲಸವನ್ನು ಆರಂಭಿಸಲಾಗಿದೆ. ತುಕಾಲಿ ಸಂತು ಪತ್ನಿ ಮಾನಸ, ಗಿಚ್ಚಿಗಿಲಿಗಿಲಿಯ ರಾಘವೇಂದ್ರ. ರೀಲ್ಸ್ ರೇಷ್ಮಾ ಸೇರಿದಂತೆ ಹಲವರಿಗೆ ಈಗಾಗಳೇ ಆಫರ್ ಹೋಗಿದೆ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ.
ಎಂದಿನಂತೆ ಸುದೀಪ್ (Sudeep) ಈ ಬಾರಿಯೂ ಕಾರ್ಯಕ್ರಮವನ್ನು ನಡೆಸಲಿಕೊಡಲಿದ್ದಾರೆ. ತಮ್ಮ ಹೊಸ ಸಿನಿಮಾದ ಕಾಲ್ ಶೀಟ್ ಮಧ್ಯಯೂ ಬಿಗ್ ಬಾಸ್ ಗಾಗಿ ದರ್ಶನ್ ಟೈಮ್ ಹೊಂದಿಸಿಕೊಂಡಿದ್ದಾರಂತೆ. ಜೊತೆಗೆ ಸ್ವತಃ ಸುದೀಪ್ ಅವರೇ ಹಲವು ಹೊಸ ಐಡ್ಯಾಗಳನ್ನು ಬಿಗ್ ಬಾಸ್ ಟೀಮ್ ಗೆ ನೀಡಿದ್ದಾರಂತೆ. ಅವೆಲ್ಲವನ್ನೂ ಇಟ್ಟುಕೊಂಡು ಟೀಮ್ ತಮ್ಮ ಕೆಲಸ ಶುರು ಮಾಡಿದೆ.
ಬಿಗ್ ಬಾಸ್ ಹಳೆಮನೆಯಲ್ಲೇ ಹೊಸ ರೂಪ ಕೊಟ್ಟು ಶೂಟಿಂಗ್ ಮಾಡುವ ಪ್ಲ್ಯಾನ್ ವಾಹಿನಿಯದ್ದು. ಈಗಾಗಲೇ ಮನೆಯ ಕೆಲಸ ಕೂಡ ಶುರುವಾಗಿದೆಯಂತೆ. ಹೊಸ ವಿನ್ಯಾಸದಲ್ಲಿ ಮನೆ ತಯಾರಾಗಲಿದೆ. ಹಳೆಯ ನೆನಪುಗಳು ಯಾವವು ಬಾರದಂತೆ ಮನೆ ಸಿದ್ಧವಾಗಲಿ ಇರಲಿದೆ.