Bigg Boss Kannada ಫಿನಾಲೆ: ಸುದೀಪ್ ಲುಕ್ ರಿವೀಲ್

Public TV
2 Min Read
Bigg Boss 1 4

ಬಿಗ್ ಬಾಸ್ (Bigg Boss Kannada) ಫಿನಾಲೆಗೆ (Finale) ಸುದೀಪ್ (Sudeep) ಅವರು ಹೇಗೆ ಕಾಣಲಿದ್ದಾರೆ, ಯಾವ ರೀತಿಯ ಕಾಸ್ಟ್ಯೂಮ್ ಧರಿಸಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಕೊನೆಗೂ ಅದು ರಿವೀಲ್ ಆಗಿದೆ. ಬಿಳಿ ಮಿಶ್ರಿತ ಕಾಸ್ಟ್ಯೂಮ್ ಅನ್ನು ಕಿಚ್ಚ ಧರಿಸಿದ್ದು, ಆ ಶರ್ಟ್ ಮೇಲೆ ಬಾದ್ ಶಹಾ ಎಂದು ಬರೆಯಲಾಗಿದೆ. ಕಿಚ್ಚ ಲುಕ್ ಕಂಡ ಅಭಿಮಾನಿಗಳು ಖಂಡಿತಾ ಖುಷಿ ಪಟ್ಟಿರುತ್ತಾರೆ.

Bigg Boss 3 5

ಬಿಗ್ ಬಾಸ್ ಫಿನಾಲೆ ವೇದಿಕೆ ರಂಗು ರಂಗಾಗಿದೆ. ನೂರು ಚಿಲ್ರೆ ದಿನಗಳನ್ನು ಪೂರೈಸಿ ಕೊನೆಗೂ ಬಿಗ್ ಬಾಸ್ ಫಿನಾಲೆಗೆ ಬಂದು ತಲುಪಿದೆ. ಇಂದು ಸಂಜೆಯಿಂದ ಫಿನಾಲೆ ಸಂಚಿಕೆಯನ್ನು ಪ್ರಸಾರ ಮಾಡಲು ವಾಹಿನಿಯು ಸಿದ್ಧ ಮಾಡಿಕೊಂಡಿದೆ. ಸಂಜೆ 7.30ರಿಂದ ಫಿನಾಲೆ ಸಂಚಿಕೆಯನ್ನು ವೀಕ್ಷಿಸಬಹುದಾಗಿದೆ. ಫಿನಾಲೆ ಕಾರಣದಿಂದಾಗಿ ತಮ್ಮದೇ ಆದ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ ಬಿಗ್ ಬಾಸ್ ಟೀಮ್. ಈಗಾಗಲೇ ನಾಮಿನೇಟ್ ಆಗಿರುವ ಸ್ಪರ್ಧಿಗಳನ್ನು ವೇದಿಕೆಗೆ ಕರೆಯಿಸಿಕೊಂಡು ಭರ್ಜರಿ ಸ್ಟೆಪ್ ಹಾಕಿಸಿದೆ.

Bigg Boss 2 5

ಶೂಟಿಂಗ್ ಸ್ಥಳದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಚಿತ್ರೀಕರಣದ ಯಾವುದೇ ವಿಷಯಗಳು ಬಹಿರಂಗವಾಗ ಬಾರದು ಎನ್ನುವ ಕಾರಣಕ್ಕಾಗಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾಮಾನ್ಯ ಪ್ರೇಕ್ಷಕರಿಗೆ ಇಂದು ಪ್ರವೇಶವಿಲ್ಲ. ಅವರೇ ಆಯ್ಕೆ ಮಾಡಿರುವ ಕೆಲವೇ ಕೆಲವೇ ಪ್ರೇಕ್ಷಕರು ಇಂದು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಅದರಲ್ಲೂ ಮೊಬೈಲ್ ನಿಷೇಧ ಮಾಡಲಾಗಿದೆ.

Bigg Boss 1 3

ಈಗಾಗಲೇ ನಾಮಿನೇಟ್ ಆಗಿರುವ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೈಕಲ್, ತನಿಷಾ ಕುಪ್ಪಂಡ ಸೇರಿದಂತೆ ಬಹುತೇಕರು ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆಯಿಂದಲೇ ಚಿತ್ರೀಕರಣದ ಕೆಲಸವನ್ನೂ ಮುಗಿಸಿದ್ದಾರೆ. ಇವತ್ತು ಮತ್ತು ನಾಳೆ ಎರಡು ದಿನಗಳ ಕಾಲ ಫಿನಾಲೆ ಶೂಟಿಂಗ್ ನಡೆಯಲಿದ್ದು. ಜೊತೆಗೆ ಇವತ್ತು ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ, ಕಾರ್ತಿಕ್, ತುಕಾಲಿ ಸಂತು, ವರ್ತೂರು ಸಂತು ಹಾಗೂ ವಿನಯ್ ಸದ್ಯ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಸಂಗೀತಾ, ವಿನಯ್ ಹಾಗೂ ಡ್ರೋನ್ ಪ್ರತಾಪ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಬಿಗ್ ಬಾಸ್ ಗೆಲುವಿಗಾಗಿ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಶ್ರಮ ವಹಿಸುತ್ತಿದ್ದಾರೆ. ಅಂತಿಮವಾಗಿ ಬಿಗ್ ಬಾಸ್ ಪಟ್ಟ ಯಾರ ಪಾಲಾಗಲಿದೆ ಎನ್ನುವುದು ನಾಳೆ ಗೊತ್ತಾಗಲಿದೆ.

Share This Article