– ನನ್ನ ಬಾಲ್ಯ ನೆನಪಿಸಿದ್ದಕ್ಕೆ ಧನ್ಯವಾದ ಎಂದ ಕಿಚ್ಚ
ಬೆಂಗಳೂರು: ಬಿಗ್ ಬಾಸ್ (Bigg Boss) ಫಿನಾಲೆ ವೇದಿಕೆಯಲ್ಲಿ ಬಾಲಕ ಯುವನ್ (Yuvan) ಡ್ಯಾನ್ಸ್ ಪ್ರದರ್ಶನ ನೋಡಿ ಕಿಚ್ಚ ಸುದೀಪ್ (Sudeep) ಸೇರಿ ಇಡೀ ಪ್ರೇಕ್ಷಕರು ಕಣ್ಣೀರಿಟ್ಟಿದ್ದರು.
ಸುದೀಪ್ ಹಾಗೂ ಅವರ ತಾಯಿಯ ನಡುವಿನ ಸಂಬಂಧದ ಕುರಿತು ಯುವನ್ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದ್ದ. ಇದನ್ನು ನೋಡಿ ಭಾವುಕರಾದ ಸುದೀಪ್, ಡ್ಯಾನ್ಸ್ ಹಾಗೂ ಥೀಮ್ ಮೆಚ್ಚಿ ಬಾಲಕನಿಗೆ ಕೈಯಲ್ಲಿದ್ದ ಬ್ರೇಸ್ಲೇಟ್ ಉಡುಗೊರೆ ನೀಡಿದ್ದರು.
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಯುವನ್ ಮಾತನಾಡಿ, ಸುದೀಪ್ ಸರ್ ಮುಂದೆ ಫಸ್ಟ್ ಟೈಂ ಡ್ಯಾನ್ಸ್ ಮಾಡಿದ್ದೆ. ಸುದೀಪ್ ಸರ್ನ ನೋಡೋಕೆ ಕಾಯುತ್ತಿದ್ದೆ. ನನ್ನ ಬಾಲ್ಯ ನೆನಪಿಸಿದ್ದಕ್ಕೆ ಧನ್ಯವಾದ. ಮುಂದೆ ಚೆನ್ನಾಗಿ ಬೆಳೆಯಿರಿ ಎಂದು ಸುದೀಪ್ ಸರ್ ಹೇಳಿದರು ಎಂದು ತಿಳಿಸಿದ್ದಾನೆ.
Advertisement
ಇದನ್ನೂ ಓದಿ: ಕಾದುನೋಡಿ.. ಸುದೀಪ್ ಸರ್ ಇಲ್ಲದೇ ‘ಬಿಗ್ ಬಾಸ್’ ಇಲ್ಲ: ಶೋ ನಿರ್ದೇಶಕ ಪ್ರಕಾಶ್
Advertisement
Advertisement
ಅವರು ನೀಡಿದ ಉಡುಗೊರೆಯ ಬೆಲೆ ಎಷ್ಟು ಅಂತಾ ಗೊತ್ತಿಲ್ಲ. ಆದರೆ ಅವರು ಕೊಟ್ಟಿದ್ದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಡ್ಯಾನ್ಸ್ ಕೊರಿಯೊಗ್ರಾಫರ್ ಸಾಗರ್ ಮಾಸ್ಟರ್ ನನಗೆ ಚೆನ್ನಾಗಿ ಹೇಳಿಕೊಟ್ಟಿದರು. ಡ್ಯಾನ್ಸ್ ನೋಡಿ ಸುದೀಪ್ ಸರ್ ಭಾವುಕರಾದರು. ಇದನ್ನು ನೋಡಿ ನನಗೆ ತುಂಬಾ ಹೆಮ್ಮೆಯಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾನೆ.
ಡಿಕೆಡಿಯಲ್ಲಿ ಶಿವಣ್ಣ ಮುಂದೆ ಡ್ಯಾನ್ಸ್ ಮಾಡಿದಾಗ ಅವರು ಚೆನ್ನಾಗಿ ಡ್ಯಾನ್ಸ್ ಮಾಡ್ತಿಯಾ ಅಂತಾ ಹೇಳಿದ್ದರು. ಈಗ ಶಿವಣ್ಣ ಹುಷಾರಾಗಿ ಬಂದಿರುವುದು ಖುಷಿಯಾಗಿದೆ. ಯಾವಾಗಾದರೂ ಶಿವಣ್ಣನನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾನೆ.
ಬಿಗ್ ಬಾಸ್ 11ರ ವಿನ್ನರ್ ಹನುಮಂತ ನನ್ನ ಫೇವರೇಟ್ ಕಂಟೆಸ್ಟೆಂಟ್. ಹನುಮಂತ ಅವರು ಗೆದ್ದಿದ್ದು ತುಂಬ ಖುಷಿ ಆಯ್ತು. ಹನುಮಂತ ಟಾಸ್ಕ್ ಆಡುತ್ತಿದ್ದದ್ದು ಇಷ್ಟ ಆಗುತ್ತಿತ್ತು. ಸುದೀಪ್ ಸರ್ ಕೊಟ್ಟ ಗಿಫ್ಟ್ ಅನ್ನು ಫ್ರೇಮ್ ಹಾಕಿಸಿ ಲೈಫ್ ಲಾಂಗ್ ಇಟ್ಟುಕೊಳ್ಳುತ್ತೇನೆ ಎಂದು ಯುವನ್ ಹೇಳಿದ್ದಾನೆ.