ಬಿಗ್ ಬಾಸ್ ಆಯ್ತು, ಈಗೇನ್ ಮಾಡ್ತಿದ್ದಾರೆ ರಾಕೇಶ್ ಅಡಿಗ?

Public TV
1 Min Read
rakesh adiga

‘ಜೋಶ್’ (Josh) ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟ ರಾಕೇಶ್ ಅಡಿಗ (Bigg Boss Kannada) ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಮೋಡಿ ಮಾಡಿದ್ದರು. ಬಿಗ್ ಬಾಸ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ದೊಡ್ಮನೆಯ ಆಟದ ಬಳಿಕ ಇದೀಗ ಏನ್ಮಾಡ್ತಿದ್ದಾರೆ? ತಮ್ಮ ಮುಂದಿನ ಸಿನಿಮಾ ಯಾವುದು? ಎಂಬುದನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ರಾಕೇಶ್ ಅಡಿಗ ಹಂಚಿಕೊಂಡಿದ್ದಾರೆ.

rakesh adiga

ಆಲ್ಬಂ ಸಾಂಗ್, ಜೋಶ್, ಯಾರೇ ಕೂಗಾಡಲಿ, ಮಂದಹಾಸ, ಮನಸಾಲಜಿ, ಅಲೆಮಾರಿ, ನಂದಗೋಕುಲ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಕೇಶ್ ಅಡಿಗ ನಟಿಸಿದ್ದರು. ಆದರೆ ರಾಕೇಶ್ ಅಡಿಗ ಕೆರಿಯರ್‌ಗೆ ತಿರುವು ಕೊಟ್ಟಿದ್ದು ಬಿಗ್ ಬಾಸ್ ಶೋ. ಬಿಗ್ ಬಾಸ್ ಒಟಿಟಿ- ಟಿವಿ ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದರು. ಸೀಸನ್ 9ರ ಬಿಗ್ ಬಾಸ್‌ನಲ್ಲಿ ರಾಕೇಶ್ ಅಡಿಗ ರನ್ನರ್ ಅಪ್ ಪಟ್ಟ ಅಲಂಕರಿಸಿದ್ದರು. ಇದನ್ನೂ ಓದಿ:ಹಾಲಿವುಡ್ ‘ಸಿಟಾಡೆಲ್’ ಪ್ರೀಮಿಯರ್‌ನಲ್ಲಿ ಸಮಂತಾ

ರಾಕೇಶ್ ಅಡಿಗ ಅವರು ಇದೀಗ ‘ಲೈಪ್ ಆಫ್ ಕಾಕ್ರೋಚ್’ (Life Of  Cockroach) ಎಂಬ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾ ಮೂಲಕ 4 ವರ್ಷಗಳ ನಂತರ ಮತ್ತೆ ಸಿನಿಮಾಗೆ ಕಂಬ್ಯಾಕ್ ಆಗ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮೇ ತಿಂಗಳಲ್ಲಿ ಶುರುವಾಗಲಿದೆ. ಹೀರೋ ಆಗಿ ಮಾತ್ರವಲ್ಲ, ನಿರ್ದೇಶನದ ಜವಾಬ್ದಾರಿ ಕೂಡ ರಾಕೇಶ್ ಕೈಗೆತ್ತಿಕೊಂಡಿದ್ದಾರೆ. ಸದ್ಯ ‘ಲೈಪ್ ಆಫ್ ಕಾಕ್ರೋಚ್’ ಸಿನಿಮಾದ ಟೀಸರ್ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.

ಇನ್ನೂ ಸಿನಿಮಾ ಜೊತೆಗೆ ಅಧ್ಯಾತ್ಮ, ವ್ಯಕ್ತಿತ್ವ ವಿಕಾಸನದ ಕುರಿತು ಯೂಟ್ಯೂಬ್ ಚಾನೆಲ್ ಮಾಡಲಿದ್ದಾರೆ. ಅದಕ್ಕಾಗಿ ಸೂಕ್ತ ತಯಾರಿ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಸದ್ಯದಲ್ಲಿ ಈ ಬಗ್ಗೆ ನಟ ರಾಕೇಶ್ ಅಪ್‌ಡೇಟ್ ಹಂಚಿಕೊಳ್ಳಲಿದ್ದಾರೆ.

Share This Article