‘ಬಿಗ್ ಬಾಸ್’, ‘ಲಕ್ಷ್ಮಿ ಬಾರಮ್ಮ’ (Lakshmi Baramma) ಖ್ಯಾತಿಯ ಚಿನ್ನು ಅಲಿಯಾಸ್ ನಟಿ ಕವಿತಾ ಗೌಡ (Kavitha Gowda) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಚೊಚ್ಚಲ ಮಗುವಿನ ಆಗಮನಕ್ಕಾಗಿ ಎದುರು ನೋಡುತ್ತಿರುವ ನಟಿ ಕವಿತಾ ಸೀಮಂತ ಶಾಸ್ತ್ರ ಜರುಗಿದೆ. ಕಿರುತೆರೆಯ ನಟ, ನಟಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮ್ಮನಾಗ್ತಿರೋ ಕವಿತಾಗೆ ಶುಭಕೋರಿದ್ದಾರೆ. ಇದನ್ನೂ ಓದಿ:ಲೈಂಗಿಕ ಕಿರುಕುಳ: ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ಕೇಸ್
ಕವಿತಾ ಮತ್ತು ನಟ ಚಂದನ್ ಕುಮಾರ್ (Chandan Kumar) ಮನೆಗೆ ಸದ್ಯದಲ್ಲೇ ಪುಟ್ಟ ಕಂದಮ್ಮನ ಆಗಮನವಾಗಲಿದೆ. ಇದೇ ಖುಷಿಯಲ್ಲಿ ತುಂಬು ಗರ್ಭಿಣಿ ಕವಿತಾಗೆ ಸರಳವಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ಈ ಸಮಾರಂಭಕ್ಕೆ ನಟಿ ನಮ್ರತಾ ಗೌಡ, ತನಿಷಾ ಕುಪ್ಪಂಡ, ಹಿರಿಯ ನಟಿ ಶ್ರುತಿ, ನಿಮಿಕಾ ರತ್ನಾಕರ್, ನೇಹಾ ಗೌಡ (Neha Gowda), ಅನುಪಮಾ ಗೌಡ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಅಂದಹಾಗೆ, ಲಾಕ್‌ಡೌನ್ ವೇಳೆ 2021ರ ಮೇ 14ರಂದು ಚಂದನ್ ಕುಮಾರ್ ಮತ್ತು ಕವಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಹೀರೋ, ಹೀರೋಯಿನ್ ಆಗಿ ನಟಿಸಿದ್ದರು.