ಬಿಗ್ ಬಾಸ್ ಮನೆಯ (Bigg Boss House) ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಿನ ಕಳೆದಂತೆ ಮನೆಯ ವಾತಾವರಣ ಕ್ಲಿಷ್ಟಕರವಾಗುತ್ತಿದೆ. ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ದೊಡ್ಮನೆಯಲ್ಲಿ ದೀಪಿಕಾ ದಾಸ್ (Deepika Das) ಮತ್ತು ರೂಪೇಶ್ ರಾಜಣ್ಣ(Roopesh rajanna) ನಡುವೆ ಮಾತಿನ ಜಟಾಪಟಿ ಜೋರಾಗಿದೆ.
Advertisement
ದೊಡ್ಮನೆಯಲ್ಲಿ ಗೊಬ್ಬರಗಾಲ, ಆರ್ಯವರ್ಧನ್ ಗುರೂಜಿ, ನಂತರ ದೀಪಿಕಾ ದಾಸ್ ಕ್ಯಾಪ್ಟೆನ್ಸಿಯಲ್ಲಿ ಬ್ಯಾಕ್ ಟು ಬ್ಯಾಕ್ ಟಾಸ್ಕ್ಗಳನ್ನ ಬಿಗ್ ಬಾಸ್ ನೀಡುತ್ತಿದ್ದಾರೆ. ಇದೀಗ ಟಾಸ್ಕ್ವೊಂದರಲ್ಲಿ ಮತ್ತೆ ದೀಪಿಕಾ ಮತ್ತು ರಾಜಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗುದ್ದಾಡೋದಾದ್ರೆ ಆನೆ ಜೊತೆ ಗುದ್ದಾಡಿ ನನ್ನ ಹತ್ತಿರ ಬರಲೇಬೇಡಿ ಎಂದು ದೀಪಿಕಾ ಖಡಕ್ ಆಗಿ ಹೇಳಿದ್ದಾರೆ. ಇದನ್ನೂ ಓದಿ:ಪುನೀತ ಪರ್ವ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಗೈರು ಹಾಜರಿ : ಕ್ಷಮಿಸಿ ಅಪ್ಪು ಸರ್
Advertisement
Advertisement
ಮುಂದಿರುವ ಟೀಮ್ ಕಡೆ ನೋಡಿ ಅವರ ಆಟ ತಪ್ಪಾಗುತ್ತಿದೆ ಎಂದು ಹೇಳಲು ಬಂದಾಗ ದೀಪಿಕಾ ಅಷ್ಟಾಗಿ ಗಮನಿಸಲಿಲ್ಲ ಎಂಬುದು ರೂಪೇಶ್ ರಾಜಣ್ಣ ಅವರ ವಾದವಾಗಿತ್ತು. ಇದನ್ನೇ ದೀಪಿಕಾಗೆ ಹೇಳಲು ರಾಜಣ್ಣ ಪ್ರಯತ್ನಿಸಿದ್ದಾರೆ. ಕ್ಯಾಪ್ಟನ್ ಆಗಿ ನೀವು ಮನೆಯ ಸಮಸ್ಯೆಗೆ ಸ್ಪಂದಿಸಬೇಕು ಎಂದು ದೀಪಿಕಾ ಮೇಲೆ ರಾಜಣ್ಣ ಕಿಡಿಕಾರಿದ್ದಾರೆ. ಆಗ ದೀಪಿಕಾ, ನೀವು ಕೂಡ ನಿಮ್ಮ ಟೀಮ್ ಜೊತೆ ಸ್ಪಂದಿಸಬೇಕು. ಆನೆ ಜೊತೆ ಹೊಡೆದಾಡಿ ನನ್ನ ಜೊತೆ ಅಲ್ಲ ಎಂದಿದ್ದಾರೆ.
Advertisement
ಅದಕ್ಕೆ ರೂಪೇಶ್ ರಾಜಣ್ಣ, ನೀವು ಈ ಮನೆ ರಾಜ, ಕ್ಯಾಪ್ಟನ್ ಆಗಿರುವ ನೀವು ಆನೆ ಇದ್ದಂತೆ ಎಂದು ಹೇಳಿದ್ದಾರೆ. ಮನೆಯ ಸಮಸ್ಯೆಗೆ ಸ್ಪಂದಿಸಬೇಕು ಎಂದಾಗ ನಿಮ್ಮ ಟೀಮ್ ಕಡೆ ಗಮನ ಕೊಡಿ ಎಂದು ದೀಪಿಕಾ ಖಡಕ್ ಉತ್ತರ ನೀಡಿದ್ದಾರೆ. ಕ್ಯಾಪ್ಟನ್ ಆಗಿದ್ದೀನಿ ಅಂದ ಮಾತ್ರಕ್ಕೆ ನಾನು ಎಲ್ಲರ ಮಾತು ಕೇಳುವ ಅಗತ್ತ ಇದು ರೂಪೇಶ್ ರಾಜಣ್ಣ ಅವರ ಆಕ್ರೋಶಕ್ಕೆ ಕಾರಣವಾಗಿದೆ.