ಬಿಗ್ ಬಾಸ್ ಮನೆಯಲ್ಲಿ(Bigg Boss House) ಪ್ರೇಮ ಕಥೆಗಳಿಗೇನು ಕೊರತೆಯಿಲ್ಲ. ಇಲ್ಲಿ ಲವ್, ಫ್ಲರ್ಟ್ ಎಲ್ಲವೂ ಕಾಮನ್ ಆಗಿದೆ. ಹೀಗಿರುವಾಗ ರಾಕೇಶ್‌ಗೆ ದೀಪಿಕಾ ದಾಸ್ ಕಂಡೀಷನ್ ಹಾಕಿದ್ದಾರೆ. ನನಗೆ ಲೈನ್ ಹೊಡಿಬೇಕು ಅಂದ್ರೆ ನೀವು ಈ ಕೆಲಸ ಮಾಡಲೇಬೇಕು ಅಂತಾ ವಾರ್ನ್ ಮಾಡಿದ್ದಾರೆ.
ದೊಡ್ಮನೆಯಲ್ಲಿ ರಾಕೇಶ್ ಅಡಿಗ(Rakesh Adiga) ಸಾಕಷ್ಟು ವಿಚಾರವಾಗಿ ಹೈಲೈಟ್ ಆಗುತ್ತಿದ್ದಾರೆ. ಅದರಲ್ಲೂ ಹುಡುಗಿರ ವಿಚಾರವಾಗಿ ಪ್ರಿ ಯೂನಿವರ್ಸಿಟಿ ಎಂದೇ ಗುರುತಿಸಿಕೊಂಡಿದ್ದಾರೆ. ಸದಾ ಹುಡುಗಿರ ಜೊತೆಗೆ ಇರುತ್ತಾರೆ ಎಂಬ ವಿಚಾರ ಕೂಡ ಹೈಲೈಟ್ ಆಗಿದೆ. ಹೀಗಿರುವಾಗ ರಾಕೇಶ್‌ಗೆ ದೀಪಿಕಾ(Deepika Das) ಒಂದು ಕಂಡೀಷನ್ ಹಾಕಿದ್ದಾರೆ.
ಮನೆಯಲ್ಲಿ ಇದೀಗ ಬಝರ್ ಟಾಸ್ಕ್ ನಡೆಯುತ್ತಿರುವ ಕಾರಣ ಸ್ಪರ್ಧಿಗಳ ಮಧ್ಯೆ ಸಖತ್ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ರಾಕೇಶ್ ಮತ್ತು ದೀಪಿಕಾ ಮಾತು ನೆಟ್ಟಿಗರನ್ನ ಮೋಡಿ ಮಾಡಿದೆ. ನೀನು ನನಗೆ ಲೈನ್ ಹೊಡಿಬೇಕು ಅಂದ್ರೆ ಒಂದು ಕಂಡೀಷನ್ ಇದೆ. ಟಾಸ್ಕ್‌ನಲ್ಲಿ ಕೊಟ್ಟಿರೋ ಬಝರ್ ಹೊಡಿಯಲೇಬೇಕು ಎಂದು ಷರತ್ತು ಹಾಕಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ವದಂತಿಗೆ ಬ್ರೇಕ್, ಪತ್ನಿ ಪೋಸ್ಟರ್‌ಗೆ ಪ್ಲೇನ್ ಕಿಸ್ ಕೊಟ್ಟ ರಣ್‌ವೀರ್
ಅದಕ್ಕೆ ರಾಕೇಶ್ ಕೂಡ, ಬಝರ್ ಹೊಡೆಯೋದಷ್ಟೇ ಏಕೆ? ಬಝರ್‌ನ ನಿಮ್ಮ ಪಕ್ಕದಲ್ಲೇ ತಂದು ಇಡುತ್ತೀನಿ ಎಂದು ರಾಕೇಶ್ ಹೇಳಿದ್ದಾರೆ. ಈ ಮಾತನ್ನು ಕೇಳಿ ಪರೋಕ್ಷವಾಗಿ ಫ್ಲರ್ಟ್ ಮಾಡುತ್ತೀದ್ದಿರಾ ಎಂದು ನಕ್ಕಿದ್ದಾರೆ. ಇಲ್ಲಾ ನಾನು ಡೈರೆಕ್ಟ್ ಆಗಿಯೇ ಫ್ಲರ್ಟ್ ಮಾಡ್ತಿದ್ದೀನಿ ಎಂದು ರಾಕೇಶ್ ಪ್ರತಿಯುತ್ತರ ಕೊಟ್ಟಿದ್ದಾರೆ. ಇವರಿಬ್ಬರ ಮಾತು ಮನೆ ಮಂದಿಯ ಮುಖದಲ್ಲೂ ನಗು ಮೂಡಿಸಿದೆ.