ಬಾಲಿವುಡ್‌ನ ಕ್ಯೂಟ್ ಕಪಲ್ ಆಗಿರುವ ದೀಪಿಕಾ ಪಡುಕೋಣೆ(Deepika Padukone) ಮತ್ತು ರಣ್‌ವೀರ್ ಸಿಂಗ್(Ranveer Singh) ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರ ಡಿವೋರ್ಸ್ ವದಂತಿ ಬಿಟೌನ್‌ನಲ್ಲಿ ದೊಡ್ಡ ಮಟ್ಟದಲ್ಲಿ ಟಾಕ್ ಆಗಿತ್ತು. ಈ ಬೆನ್ನಲ್ಲೇ ಪತ್ನಿ ದೀಪಿಕಾ ಪೋಸ್ಟರ್‌ಗೆ ರಣ್‌ವೀರ್ ಸಿಂಗ್ ಪ್ಲೇನ್ ಕಿಸ್ ಕೊಟ್ಟಿದ್ದಾರೆ.
Advertisement
ಬಿಟೌನ್‌ನ(Bollywood) ಸ್ಟಾರ್ ದಂಪತಿ ದೀಪಿಕಾ ಮತ್ತು ರಣ್‌ವೀರ್ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಇವರಿಬ್ಬರ ಡಿವೋರ್ಸ್ ಸಮಾಚಾರ ಮುಂಬೈ ಗಲ್ಲಿಯಲ್ಲಿ ಮಾತ್ರವಲ್ಲ, ಸಿನಿಮಾ ನಗರಿಯೇ ಶೇಕ್ ಆಗಿತ್ತು. ಈ ವಿಷ್ಯ ನಿಜಾನಾ, ಸುಳ್ಳಾ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಈಗ ಎಲ್ಲಾ ವದಂತಿಗೂ ರಣ್‌ವೀರ್ ಸಿಂಗ್ ಬ್ರೇಕ್ ಹಾಕಿದ್ದಾರೆ.
Advertisement
Advertisement
ಇತ್ತೀಚೆಗಷ್ಟೇ ರಣ್‌ವೀರ್ ದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ ಪತ್ನಿ ಪೋಸ್ಟರ್ ನೋಡಿ ಪ್ಲೇನ್ ಕಿಸ್ ಕೊಟ್ಟಿದ್ದಾರೆ. ನನ್ನವಳು ಎಂದು ಆ್ಯಕ್ಷನ್ ಮಾಡಿ, ರಿಯಾಕ್ಟ್ ಮಾಡಿದ್ದಾರೆ. ನಿಮ್ಮನ್ನ ಇಡೀ ಜಗತ್ತಿನಂತೆ ನೋಡುವವರನ್ನು ಹುಡುಕಿ ಎಂದು ದೀಪಿಕಾ ಕೂಡ ರಣ್‌ವೀರ್ ಫೋಟೋವನ್ನ ರೀ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು ʻರಾಜಾ ರಾಣಿʼ ಖ್ಯಾತಿಯ ಸಮೀರ್ ಆಚಾರ್ಯ ದಂಪತಿ
Advertisement
ಒಟ್ನಲ್ಲಿ ದೀಪಿಕಾ ಮತ್ತು ರಣ್‌ವೀರ್ ಬೇರೆ ಆಗುತ್ತಿಲ್ಲ. ಇದು ಗಾಸಿಪ್ ಅಷ್ಟೇ ಅಂತಾ ಕೇಳಿದ ಫ್ಯಾನ್ಸ್, ಇದೀಗ ಖುಷಿಯಾಗಿದ್ದಾರೆ. ನೆಚ್ಚಿನನ ಜೋಡಿ ಯಾವಾಗಲೂ ಹೀಗೆ ಇರಲಿ ಎಂಬುದೇ ಅಭಿಮಾನಿಗಳ ಆಶಯ.