ಬಿಗ್ ಬಾಸ್ ಮನೆ (Bigg Boss House) ಸದಾ ಹೊಸ ಬಗೆಯ ಟಾಸ್ಕ್ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತಿದೆ. ಇದೀಗ ಈ ವಾರದ ಟಾಸ್ಕ್‌ನಲ್ಲಿ ಮನೆ ಮಂದಿ ಹಾಡುತ್ತಲೇ ಭಾವುಕರಾಗಿದ್ದಾರೆ. ಹಾಗೆಯೇ ಎಂಜಾಯ್ ಕೂಡ ಮಾಡಿದ್ದಾರೆ. ಸದ್ಯ ದೀಪಿಕಾ ದಾಸ್‌ರನ್ನ (Deepika Das) ಎತ್ತಿ ಗುರೂಜಿ ಕುಣಿದಾಡಿದ್ದಾರೆ.
ದೀಪಿಕಾ ಎಲಿಮಿನೇಷನ್ ನಂತರ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಹೊಸ ಅವರ ಆಟ, ನೋಟ, ಮಾತನಾಡುವ ಶೈಲಿ, ಮನೆಯವರೊಂದಿಗೆ ಬೆರೆಯುವ ರೀತಿ ಎಲ್ಲವೂ ಬದಲಾಗಿದೆ. ಈ ವಾರದ ಟಾಸ್ಕ್‌ನಲ್ಲಿ ಮ್ಯೂಸಿಕ್ ಗುರುತಿಸಿ ಯಾವ ಹಾಡು ಎಂದು ಹೇಳುವ ಟಾಸ್ಕ್‌ನಲ್ಲಿ ದೀಪಿಕಾ ಆಕ್ಟೀವ್ ಆಗಿ ಮನೆಯವರೊಂದಿಗೆ ಬೆರೆತಿದ್ದಾರೆ. ಗುರೂಜಿ (Aryavardhan Guruji) ಜೊತೆ ಮಸ್ತ್ ಆಗಿ ದೀಪಿಕಾ ಹೆಜ್ಜೆ ಹಾಕಿದ್ದಾರೆ.
ʻನೀನೆಂದರೆ ನನ್ನೋಳಗೆʼ ಎಂಬ ಹಾಡಿಗೆ ಸೂಪರ್ ಆಗಿ ದೀಪಿಕಾ ದಾಸ್ ಹೆಜ್ಜೆ ಹಾಕಿದ್ದಾರೆ. ಆರ್ಯವರ್ಧನ್ ಗುರೂಜಿ ಜೊತೆ ಡ್ಯಾನ್ಸ್ ಮಾಡುತ್ತಾ ಮಿಂಚಿದ್ದಾರೆ. ಈ ವೇಳೆ ಗುರೂಜಿ ಕೂಡ ದೀಪಿಕಾರನ್ನ ಎತ್ತಿಕೊಂಡು ಕುಣಿದಾಡಿದ್ದಾರೆ. ಇದು ಶೋನಲ್ಲಿ ಮತ್ತಷ್ಟು ಹೈಲೈಟ್ ಆಗಿದೆ. ಇದನ್ನೂ ಓದಿ: ಸಾನ್ಯ ನೆನಪಲ್ಲಿ ಬಿಟ್ಟೋಗ್ಬೇಡ ಎಂದು ಭಾವುಕರಾದ ರೂಪೇಶ್ ಶೆಟ್ಟಿ
ಯಾರ ಜೊತೆನೂ ಬೆರೆಯದ ದೀಪಿಕಾ ದಾಸ್ ಇದೀಗ ಈ ಹೊಸ ಬದಲಾವಣೆ ಮನೆಯವರಿಗೆ ಅಚ್ಚರಿ ಮೂಡಿಸಿದೆ. ಜೊತೆಗೆ ಹಾಡಿಗೆ ಮಸ್ತ್ ಆಗಿ ಡ್ಯಾನ್ಸ್ ಮಾಡುತ್ತಾ ತಾವೂ ಎಂಜಾಯ್ ಮಾಡಿದ್ದಾರೆ. ಗುರೂಜಿಗೆ ಸಾಥ್ ನೀಡುತ್ತಾ ದೀಪಿಕಾ ಕುಣಿದಿರೋದು ಪ್ರೇಕ್ಷಕರಿಗೂ ಮನರಂಜನೆ ಕೊಟ್ಟಿದೆ.