ಬಿಗ್ ಬಾಸ್ ಕನ್ನಡ: ಪತ್ರ ಪಡೆಯಲು ಪರದಾಡಿದ ಸ್ಪರ್ಧಿಗಳು

Public TV
1 Min Read
Bigg Boss 3 6

ದೀಪಾವಳಿ ಹಬ್ಬದ ಖುಷಿಗಾಗಿ ಬಿಗ್‌ಬಾಸ್‌ (Big Boss Kannada) ಸ್ಪರ್ಧಿಗಳಿಗೆ ಮನೆಯಡುಗೆ ಕೊಟ್ಟು ಕಳಿಸಿದ್ದರು. ಇದೀಗ ಮನೆಯವರಿಂದ ಬಂದ ಪತ್ರಗಳನ್ನೂ ಕೊಡುತ್ತಿದ್ದಾರೆ. ಆದರೆ ಮನೆಯಡುಗೆ ತಿಂದಷ್ಟು ಸುಲಭವಾಗಿ ಪತ್ರಗಳು ಸ್ಪರ್ಧಿಗಳ ಕೈಗೆ ಸಿಗುತ್ತಿಲ್ಲ. ಒಂದೊಂದು ಪತ್ರಕ್ಕೂ  (Letter) ಒಂದಿಷ್ಟು ಟಾಸ್ಕ್‌ಗಳನ್ನು ಕೊಟ್ಟು ಅದರಲ್ಲಿ ಗೆದ್ದವರಿಗೆ ಮಾತ್ರವೇ ಪತ್ರ ಕೊಡುವುದಾಗಿ ಹೇಳಿದ್ದಾರೆ.

Bigg Boss 2 6

ಈಗಾಗಲೇ ವಿನಯ್ ಗೌಡ ಮತ್ತು ನಮ್ರತಾ ಮನೆಯಿಂದ ಬಂದ ಪತ್ರಗಳನ್ನು ಪಡದುಕೊಳ್ಳಲು ಯಶಸ್ವಿಯಾಗಿದ್ದಾರೆ. ಕೆಲವು ಸದಸ್ಯರು ಪತ್ರಗಳನ್ನು ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಇನ್ನುಳಿದ ಸದಸ್ಯರ ಅದೃಷ್ಟಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ.

Bigg Boss 1 7

ಇಂದು ಬಿಗ್‌ಬಾಸ್‌ ಮನೆಯಲ್ಲಿ ಇನ್ನಷ್ಟು ಜನರಿಗೆ ಪತ್ರ ಪಡೆದುಕೊಳ್ಳಲು ಟಾಸ್ಕ್ (Task) ನೀಡಿದ್ದಾರೆ. ಟಾಸ್ಕ್‌ ಏನೋ ತುಂಬ ಸಿಂಪಲ್ ಆಗಿ ಕಾಣಿಸುತ್ತಿದೆ. ಕನ್‌ಫೆಷನ್ ರೂಮಲ್ಲಿ ಕೂತ ಇಬ್ಬರು, ಬಿಗ್‌ಬಾಸ್‌ ಮನೆಯ ಕುರಿತಾಗಿಯೇ ಕೇಳುವ ಸರಳವಾದ ಪ್ರಶ್ನೆಗಳಿಗೆ ಉತ್ತರಿಸಬೇಕು. ಆ ಪ್ರಶ್ನೆಗಳು ಎಷ್ಟು ಸರಳವಾಗಿವೆಯೆಂದರೆ, ಪ್ರತಿದಿನವೂ ಅದನ್ನು ನೋಡುತ್ತ, ಬಳಸುತ್ತಲೇ ಇದ್ದರೂ ಅದು ಸ್ಪರ್ಧಿಗಳ ಗಮನಕ್ಕೆ ಬಂದಿಲ್ಲ. ಹಾಗಾಗಿಯೇ ಉತ್ತರ ಕೊಡುವುದೂ ಕಷ್ಟವಾಗಿದೆ.

 

ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಯಾರು ಗೆಲ್ಲುತ್ತಾರೆ? ಯಾರ ಮನೆಯಿಂದ ಬಂದ ಪತ್ರ ಸ್ಪರ್ಧಿಗಳ ಕೈಸೇರುತ್ತದೆ? ಯಾರು ನಿರಾಸೆಯಲ್ಲಿ ಮುಳುಗಬೇಕಾಗುತ್ತದೆ?  ವೀಕ್ಷಿಸಲು JioCinemaದಲ್ಲಿ ಬಿಗ್‌ಬಾಸ್ ಕನ್ನಡ ವೀಕ್ಷಿಸುತ್ತಿರಿ.

Share This Article