ದೇಹದಾರ್ಢ್ಯ ಎಂಬುದು ಪುರುಷರಿಗೆ ಮೀಸಲಾಗಿದ್ದಲ್ಲ ಎಂಬುದಕ್ಕೆ ಪುರಾವೆಯಂತಿರುವ ಚಿತ್ರಾಲ್ (Chitral), ಅದಕ್ಕೂ ಮೊದಲು ನಟಿಯಾಗಿಯೂ ಕಿರುತೆರೆ, ಹಿರಿತೆರೆಯಲ್ಲಿ ಗುರ್ತಿಸಿಕೊಂಡವರು. ದಪ್ಪ ಇದ್ದೀಯಾ ಎನ್ನುವ ಕಾರಣಕ್ಕೆ ಅವಕಾಶಗಳನ್ನು ತಪ್ಪಿಸಿಕೊಳ್ಳತೊಡಗಿದಾಗ ಜಿಮ್ಗೆ ಎಡತಾಕಿದ ಚಿತ್ರಾಗೆ ವರ್ಕೌಟ್ ಎನ್ನುವುದು ಅಡಿಕ್ಟ್ ಆಗಿಬಿಟ್ಟಿತು. ಬಾಡಿಬಿಲ್ಡಿಂಗ್ ಅನ್ನು ಹವ್ಯಾಸಿಕೊಂಡು ಸ್ಪರ್ಧೆಗಳಲ್ಲಿಯೂ ಪಾಲ್ಗೊಳ್ಳತೊಡಗಿದರು.
ನಟನೆಯಿಂದ ದೇಹದಾರ್ಢ್ಯ ಕ್ಷೇತ್ರಕ್ಕೆ ಬಂದು ಮಿಂಚುತ್ತಿರುವ ಚಿತ್ರಾ ಅವರಿಗೆ ಜನರು 38% ವೋಟ್ ನೀಡಿದ್ದಾರೆ. ಹೀಗಾಗಿ ಬಿಗ್ಬಾಸ್ (Bigg Boss Kannada) ಮನೆಯೊಳಗೆ ಹೋಗುವ ಅವಕಾಶದಿಂದ ಅವರು ವಂಚಿತರಾಗಿದ್ದಾರೆ. ಹಾಗಾಗಿ ಅವರು ಮನೆ ಒಳಗೆ ಹೋಗಲು ವಿಫಲರಾದರು.
ಬಿಗ್ ಬಾಸ್ ಮನೆಯೊಳಗೆ ಸ್ನೇಕ್ ಶ್ಯಾಮ್
ಸಾವಿರಾರು ಹಾವುಗಳನ್ನು ರಕ್ಷಣೆ ಮಾಡಿದ ಮೈಸೂರಿನ ಸ್ನೇಕ್ ಶ್ಯಾಮ್ (Snake Shyam) ಬಿಗ್ ಬಾಸ್ (Bigg Boss Kannada) ಪ್ರವೇಶ ಮಾಡಿದ್ದಾರೆ. ಶೇಕಡಾ 84ರಷ್ಟು ಮತವನ್ನು ಪಡೆಯುವುದರ ಮೂಲಕ 8ನೇ ಸ್ಪರ್ಧಿಯಾಗಿ ಶ್ಯಾಮ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಮನೆಯೊಳಗೆ ಶ್ಯಾಮ್ ಪ್ರವೇಶ ಮಾಡುವ ಮುನ್ನ ಹಾವಿನ ಬುಟ್ಟಿಯನ್ನು ಬಿಗ್ ಬಾಸ್ ಅವರಿಗೆ ನೀಡಿದ್ದಾರೆ
ಬುಟ್ಟಿಯನ್ನು ಶ್ಯಾಮ್ ನೋಡದೇ ಮನೆ ಒಳಗೆ ಇರುವ ಒಬ್ಬರು ಹುಡುಗಿಯರಿಗೆ ಆ ಬುಟ್ಟಿಯನ್ನು ಕೊಡುವುದಕ್ಕೆ ಹೇಳಿದ್ದಾರೆ. ಸ್ನೇಕ್ ಶ್ಯಾಮ್ ಮನೆಯೊಳಗೆ ಪ್ರವೇಶ ಮಾಡಿ, ಆ ಬುಟ್ಟಿಯನ್ನು ನಾಗಿಣಿ ಖ್ಯಾತಿಯ ನಮ್ರತಾಗೆ ನೀಡಿದರು. ಬುಟ್ಟಿ ತೆರೆದಾಗ ಅದೊಂದು ಪ್ಲಾಸ್ಟಿಕ್ ಹಾವು ಒಳಗಿತ್ತು.
Web Stories