ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗಮನ ಸೆಳೆದಿದ್ದ ನಟಿ ಅನುಪಮಾ ಗೌಡ (Anupama Gowda) ಬಿಗ್ ಬಾಸ್ (Bigg Boss Kannada) ಸೀಸನ್ 9ಕ್ಕೆ ಕಾಲಿಟ್ಟಿದ್ದರು. ಗಟ್ಟಿ ಸ್ಪರ್ಧಿಯಾಗಿ ಮೋಡಿ ಮಾಡಿದ್ದರು. ಆದರೆ ಇದೀಗ ಅನುಪಮಾ ಆಟಕ್ಕೆ ಬ್ರೇಕ್ ಬಿದ್ದಿದೆ.
ಬಿಗ್ ಬಾಸ್ ಸೀಸನ್ 5ರಲ್ಲಿ ಕಾಣಿಸಿಕೊಂಡಿದ್ದ ಅನುಪಮಾ ಗೌಡ, ಈ ಬಾರಿ ಪ್ರವಿಣರ ಪೈಕಿ ಅನುಪಮಾ ಕೂಡ ಒಬ್ಬರಾಗಿ, ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಟ್ಟಿದ್ದರು. ಟಾಸ್ಕ್, ಅಡುಗೆ, ಮನರಂಜನೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದರು. ಈಗ 13ನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದನ್ನೂ ಓದಿ: ದೀಪಿಕಾ ಅಸಭ್ಯ ನೃತ್ಯ ಸಿನಿಮಾ ನೋಡದಂತೆ ಮಾಡಿದೆ – `ಪಠಾಣ್’ ಹೆಸರು ಬಳಕೆಗೆ ಮುಸ್ಲಿಂ ಧರ್ಮಗುರು ಆಕ್ಷೇಪ
ಅಣ್ಣ -ತಂಗಿ, ಅಕ್ಕ ಸೀರಿಯಲ್, ಆ ಕರಾಳ ರಾತ್ರಿ ಚಿತ್ರ, ಪುಟ 109 ಸೇರಿದಂತೆ ಸಾಕಷ್ಟು ಪ್ರಾಜೆಕ್ಟ್ ಗಳಲ್ಲಿ ಅನುಪಮಾ ನಟಿಸಿದ್ದಾರೆ. ನಟನೆಯ ಜೊತೆ ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ದೆವೋಲೀನಾ ಭಟ್ಟಾಚಾರ್ಜಿ
ಎಲ್ಲಾ ಸ್ಪರ್ಧಿಗಳ ಮುಂದೆ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಅನುಪಮಾ ಎಲಿಮಿನೇಷನ್, ಮನೆಮಂದಿಯ ಜೊತೆ ಅಭಿಮಾನಿಗಳಿಗೂ ಶಾಕ್ ಕೊಟ್ಟಿದೆ.