ಬಿಗ್ ಬಾಸ್ ಮನೆಯ(Bigg Boss Kannada) ಆಟ 11ನೇ ವಾರದತ್ತ ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ಸಾಕಷ್ಟು ರೋಚಕ ತಿರುವುಗಳನ್ನ ಪಡೆಯುತ್ತಿದೆ. ಮನೆಯಲ್ಲಿ ಜಗಳ, ಖುಷಿ, ತಮಾಷೆ, ಹರಟೆ ಎಲ್ಲವೂ ಇದೆ. ಹೀಗಿರುವಾಗ ಕಳಪೆ ಹಣೆಪಟ್ಟಿ ಕೊಡುವ ತಲೆಬಿಸಿ ಮಧ್ಯೆ ಅನುಪಮಾಗೆ ರೂಪೇಶ್ ಶೆಟ್ಟಿ ಕ್ವಾಟ್ಲೆ ಕೊಟ್ಟಿದ್ದಾರೆ.
ದೊಡ್ಮನೆ ಈಗ 10 ವಾರಗಳನ್ನ ಪೂರೈಸಿ 11ನೇ ವಾರದತ್ತ ಮನೆಯ ಆಟ ಸಾಗುತ್ತಿದೆ. ಇದೀಗ ಮನೆಯ ರೂಲ್ಸ್‌ವೊಂದನ್ನು ಅನುಪಮಾ (Anupama Gowda) ಬ್ರೇಕ್ ಮಾಡಿದ್ದಾರೆ ಎಂಬ ಕಾರಣಕ್ಕೆ ಏನೇ ತಿಂದರೂ ಸ್ಪೂನ್‌ನಲ್ಲಿಯೇ ತಿನ್ನಬೇಕು ಎಂದು ಬಿಗ್ ಬಾಸ್ ಆರ್ಡರ್ ಮಾಡಿದ್ದಾರೆ. ಈ ಸ್ಪೂನ್ ಅನ್ನೇ ರೂಪೇಶ್ ಶೆಟ್ಟಿ (Roopesh Shetty) ಅನುಪಮಾಗೆ ಸಿಗದಂತೆ ಆಟ ಆಡಿಸುತ್ತಿದ್ದಾರೆ. ಇದನ್ನೂ ಓದಿ: `ಕಾಂತಾರ’ ಪಾರ್ಟ್ 2ಗೆ ಪಂಜುರ್ಲಿ ಮೊರೆ ಹೋದ ರಿಷಬ್ ಶೆಟ್ಟಿ
ಹಸಿವಾಗುತ್ತಿದೆ, ಸ್ಪೂನ್ ಕೊಡಿ ಎಂದು ಅನುಪಮಾ ಕೇಳಿದರೂ ಕೂಡ ಸ್ಪೂನ್ ಕೊಡದೇ ಆಟ ಆಡಿಸಿದ್ದಾರೆ. ರೂಪೇಶ್ ಬಳಿ ಸ್ಪೂನ್ ಇದೆ ಎಂಬ ಅರಿವಿಲ್ಲದೇ ಅನುಪಮಾ, ಬಿಗ್ ಬಾಸ್ ಸ್ಪೂನ್ ಕೊಡಿ ಎಂದು ಕಣ್ಣೀರಿಟ್ಟಿದ್ದಾರೆ.
ಬಳಿಕ ವಾರದ ಕಳಪೆ ಹಣೆಪಟ್ಟಿ ಕೊಡುವುದರಲ್ಲೂ ಸ್ಪರ್ಧಿಗಳ ಮಧ್ಯೆ ಜಟಾಪಟಿ ನಡೆದಿದೆ. ರೂಪೇಶ್ ರಾಜಣ್ಣ ಕ್ಯಾಪ್ಟೆನ್ಸಿ ಬಗ್ಗೆ ವಿರೋದ ವ್ಯಕ್ತವಾಗಿದ್ದು, ರೂಪೇಶ್ ರಾಜಣ್ಣ ಮತ್ತು ಅಮೂಲ್ಯ ಕಳಪೆ ಲಿಸ್ಟ್‌ನಲ್ಲಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಕಾವ್ಯಶ್ರೀ ಗೌಡ ಎಲಿಮಿನೇಷನ್ ನಂತರ ಈ ವಾರ ಮನೆಯಿಂದ ಹೊರಬರುವ ಸ್ಪರ್ಧಿ ಯಾರು ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.