ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಆಟಕ್ಕೆ ಬ್ರೇಕ್ ಬಿದ್ದಿದೆ. ತುಳುನಾಡಿನ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದರು. `ಗಿರಿಗಿಟ್’ (Girgit Film) ಚಿತ್ರದ ಮೂಲಕ ಸೂಪರ್ ಸಕ್ಸಸ್ ಕಂಡಿದ್ದರು. ಈ ಚಿತ್ರದ ನಟನೆ ನೋಡಿಯೇ, ಬಿಗ್ ಬಾಸ್‌ಗೆ ಬರಲು ರೂಪೇಶ್ ಶೆಟ್ಟಿಗೆ ಅವಕಾಶ ಸಿಕ್ಕಿತ್ತು. ಒಟಿಟಿ ಮತ್ತು ಟಿವಿ ಬಿಗ್ ಬಾಸ್ ಎರಡರಲ್ಲೂ ಗಟ್ಟಿ ಸ್ಪರ್ಧಿಯಾಗಿ ರೂಪೇಶ್ ಶೆಟ್ಟಿ ಗುರುತಿಸಿಕೊಂಡಿದ್ದರು. ಈಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ ಎನ್ನಲಾಗುತ್ತಿದೆ.
ಟಾಪ್ 5 ಫೈನಲಿಸ್ಟ್‌ಗಳಲ್ಲಿ ರೂಪೇಶ್ ಶೆಟ್ಟಿ ಕೂಡ ಒಬ್ಬರಾಗಿದ್ದರು. ರಾಕೇಶ್ ಅಡಿಗ, ದೀಪಿಕಾ ದಾಸ್, ರಾಜಣ್ಣಗೆ ಭಾರೀ ಪೈಪೋಟಿ ಕೊಟ್ಟು ರೂಪೇಶ್ ಜಯಭೇರಿ ಬಾರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಎಂಬ ಪೋಸ್ಟ್‌ಗಳು ಹರಿದಾಡುತ್ತಿದೆ. ಇದನ್ನೂ ಓದಿ: ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೆ ಸಾನ್ಯನ ತಬ್ಬಿಕೊಳ್ತೀನಿ: ರೂಪೇಶ್ ಶೆಟ್ಟಿ
ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಎಂದು ಹೇಳಲಾಗುತ್ತಿದ್ದು, ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ರೂಪೇಶ್ ಶೆಟ್ಟಿ ಅವರೇ ವಿನ್ನರ್ ಎಂದು ಟ್ರೆಂಡ್ ಆಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ವಾಹಿನಿ ಅಧಿಕೃತವಾಗಿ ಹೇಳುವವರೆಗೂ ಕಾದುನೋಡಬೇಕಿದೆ.