ಬಿಗ್ ಬಾಸ್(Bigg Boss) ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆಯ ಆಟ ಮತ್ತಷ್ಟು ಕ್ಲಿಷ್ಟಕರವಾಗುತ್ತಿದೆ. ಇನ್ನೂ ಮನೆಯ ಕ್ಯಾಪ್ಟನ್ ಆಗಲು ಸಹಾಯ ಮಾಡಿದ್ದ ರೂಪೇಶ್(Roopesh Shetty) ಮತ್ತು ರಾಕೇಶ್‌ಗೆ (Rakesh Adiga) ಸುದೀಪ್ ಕೂಡ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ದೊಡ್ಮನೆಯಲ್ಲಿ ತಮ್ಮ ನೇರ ಮಾತಿನ ಮೂಲಕ ಗುರುತಿಸಿಕೊಂಡಿರುವ ಆರ್ಯವರ್ಧನ್ ಗುರೂಜಿ ತಾವು ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಬೇಕು ಎಂದು ಮಹಾದಾಸೆಯಿತ್ತು. ಅದರಂತೆ ಮೂರನೇ ವಾರದ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದಾರೆ. ಕ್ಯಾಪ್ಟನ್ ಆಗುವ ಮುಂಚೆ ಗುರೂಜಿ ಆಡಿದ ರೀತಿಗೆ ಮನೆಯವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಕ್ಯಾಪ್ಟನ್ ಆಗಲು ನೀಡಿದ್ದ ಟಾಸ್ಕ್‌ನಲ್ಲಿ ಗುರೂಜಿಗೆ ರೂಪೇಶ್ ಮತ್ತು ರಾಕೇಶ್ ಸಹಾಯ ಮಾಡಿರುವುದು ಎಷ್ಟು ಸರಿ ಎಂಬುದನ್ನ ವಾರದ ಪಂಚಾಯಿತಿಯಲ್ಲಿ ಕಿಚ್ಚನ ಜೊತೆ ಚರ್ಚೆ ಕೂಡ ಆಗಿದೆ. ಇದನ್ನೂ ಓದಿ:ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅಪ್ಪು ಕಪ್ ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್
ವಾರಾಂತ್ಯದ ಏಪಿಸೋಡ್‌ನಲ್ಲಿ ಸುದೀಪ್ ಕೂಡ ಗುರೂಜಿಗೆ ಸಹಾಯ ಮಾಡಿರುವ ಬಗ್ಗೆ ರೂಪೇಶ್ ಮತ್ತು ರಾಕೇಶ್‌ಗೆ ಪ್ರಶ್ನೆ ಮಾಡಿದ್ದಾರೆ. ಅವರು ಯಾವಗಲೂ ಗೊಂದಲದ ಮನಸ್ಥಿತಿ ಇರುವ ಕಾರಣ. ಕೆಲವೊಂದು ಅರ್ಥವಾಗದ ಕಾರಣ ನಾವು ಸಹಾಯ ಮಾಡಿದ್ವಿ ಎಂದು ಇಬ್ಬರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಗುರೂಜಿ ಅವರನ್ನ ಕೇಳಿದಾಗ ನಾನು ನನ್ನ ಸ್ವಂತ ಆಲೋಚನೆಯಿಂದ ಆಟ ಆಡಿದೆ. ರೂಪೇಶ್, ರಾಕೇಶ್ ಹೇಳಿದ್ದನ್ನ ಕೇಳಿ ಆಟ ಆಡಲಿಲ್ಲ ಎಂದು ಹೇಳಿದ್ದಾರೆ. ಚಂದ್ರನನ್ನು ನೋಡಿ ಆಟ ಪೂರ್ಣಗೊಳಿಸಿದೆ ಎಂದು ಗುರೂಜಿ ಹೇಳಿದ್ದಾರೆ.
ಗುರೂಜಿ ಮಾತು ಕೇಳಿ, ಸುದೀಪ್ ಕೂಡ ರೂಪೇಶ್ ಮತ್ತು ರಾಕೇಶ್‌ಗೆ ಕೇಳಿದ್ದಾರೆ. ಇದು ನಿಮಗೆ ಬೇಕಿತ್ತಾ ಎಂದು ಮರು ಪ್ರಶ್ನೇ ಮಾಡಿದ್ದಾರೆ. ಬಳಿಕ ತಮ್ಮ ತಪ್ಪಿಗೆ ಇಬ್ಬರೂ ಕ್ಷಮೆ ಕೇಳಿದ್ದಾರೆ. ಆರ್ಯವರ್ಧನ್ ಗುರೂಜಿ ಅವರ ನಡೆ ಎಲ್ಲರ ಬೇಸರಕ್ಕೆ ಕಾರಣವಾಗಿದೆ.