‘ಬಿಗ್ ಬಾಸ್’ (Bigg Boss Kannada 9) ಖ್ಯಾತಿಯ ನೇಹಾ ಗೌಡ (Neha Gowda) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ನೇಹಾ ಇದೀಗ ರೆಟ್ರೋ ಸ್ಟೈಲಿನಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿದ್ದಾರೆ. ಪತಿ ಚಂದನ್ ಜೊತೆ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿರುವ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರೆಟ್ರೋ ಶೈಲಿಯಲ್ಲಿ ಪ್ರೆಗ್ನೆಂಟ್ ನೇಹಾ ಸೀರೆಯುಟ್ಟು ಮಿಂಚಿದ್ದಾರೆ. ನಟಿ ಕಪ್ಪು ಬಣ್ಣದ ಸೀರೆಯುಟ್ಟು ಅದರ ಜೊತೆ ಕಪ್ಪು ಬಣ್ಣದ ಸ್ಟೈಲೀಶ್ ಆಗಿರೋ ಗ್ಲ್ಯಾಸ್ ಧರಿಸಿ ಮಿಂಚಿದ್ದಾರೆ. ವಿವಿಧ ಭಂಗಿಯಲ್ಲಿ ಪತಿ ಚಂದನ್ ಜೊತೆ ನೇಹಾ ನಿಂತು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ:‘ದೃಷ್ಟಿ ಬೊಟ್ಟು’ ಧಾರಾವಾಹಿಯಲ್ಲಿ ಮಹಾ ತಿರುವು
ನಟ ಚಂದನ್ ಇಲ್ಲಿ ಕಪ್ಪು ಶರ್ಟ್ ಧರಿಸಿದ್ದಾರೆ. ಗ್ರೇ ಕಲರ್ ಪ್ಯಾಂಟ್ ಧರಿಸಿದ್ದಾರೆ. ಆ ದಿನಗಳ ದೇವಾನಂದ್ ಕ್ಯಾಪ್ ಅನ್ನೂ ಚಂದನ್ ಇಲ್ಲಿ ಧರಿಸಿಕೊಂಡಿರೋದು ಹೈಲೆಟ್ ಆಗಿದೆ. ಈ ಜೋಡಿಯ ಫೋಟೋಶೂಟ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಟ್ರೈಲರ್ ಮೂಲಕ ಬೆರಗು ಮೂಡಿಸೋ ನಿಶಾ ನಟನೆಯ ಅಂಶು
View this post on Instagram
ಅಂದಹಾಗೆ, ಬಾಲ್ಯದಿಂದ ನೇಹಾ ಮತ್ತು ಚಂದನ್ (Chandan Gowda) ಸ್ನೇಹಿತರು. ನಂತರದ ವರ್ಷಗಳಲ್ಲಿ ಸ್ನೇಹ ಪ್ರೀತಿಗೆ ತಿರುಗಿತ್ತು. ಹಲವು ವರ್ಷಗಳ ಪ್ರೀತಿಗೆ 2018ರಲ್ಲಿ ಮದುವೆಯ ಮುದ್ರೆ ಒತ್ತಿದ್ದರು. ಅದಷ್ಟೇ ಅಲ್ಲ, 2021ರಲ್ಲಿ ‘ರಾಜ ರಾಣಿ’ ಶೋನಲ್ಲಿ ಬೆಸ್ಟ್ ಜೋಡಿಯಾಗಿ ಗುರುತಿಸಿಕೊಂಡಿದ್ದ ನೇಹಾ ಮತ್ತು ಚಂದನ್ ಈ ಸೀಸನ್‌ನ ವಿನ್ನರ್ ಕೂಡ ಆಗಿದ್ದರು.