‘ಬಿಗ್ ಬಾಸ್ ಕನ್ನಡ 8’ರ ವಿನ್ನರ್ (Bigg Boss Kannada 8) ಮಂಜು ಪಾವಗಡ (Manju Pavagada) ಅವರು ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ನಂದಿನಿ (Nandini) ಎಂಬುವವರ ಜೊತೆ ಮಂಜು ಪಾವಗಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್‌ಗೆ ಬೆನ್ನು ನೋವು
ನಟ ಮಂಜು ಪಾವಗಡ ಅವರು ಹಸೆಮಣೆ (Wedding) ಏರೋಕೆ ರೆಡಿಯಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ನಂದಿನಿ ಜೊತೆ ಸದ್ದಿಲ್ಲದೇ ನಟ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ನವೆಂಬರ್ 13 ಮತ್ತು 14ರಂದು ಪಾವಗಡದಲ್ಲಿ ಮದುವೆ ನಡೆಯಲಿದೆ.
ಇನ್ನೂ ಮಂಜು ಪಾವಗಡ ಅವರು ಬಿಗ್ ಬಾಸ್ ಕನ್ನಡ 8ರ ವಿನ್ನರ್ ಆಗಿದ್ದರು. ಬಳಿಕ ‘ಅಂತರಪಟ’ ಎಂಬ ಸೀರಿಯಲ್‌ನಲ್ಲಿ ವಿಲನ್ ಆಗಿ ನಟಿಸಿದ್ದರು. ರುದ್ರಾಕ್ಷಿಪುರ, ಚಂದನ್ ಶೆಟ್ಟಿ ಜೊತೆ ಎಲ್ರ ಕಾಲೆಳಿಯುತ್ತೆ ಕಾಲ, 45, ಕೋಮಲ್ ಜೊತೆ ಎಲಾ ಕುನ್ನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಮಂಜು ನಟಿಸಿದ್ದಾರೆ.