ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಶೋಗೆ ತೆರೆಬಿದ್ದಿದೆ. ಈ ಕಾರ್ಯಕ್ರಮ ಮುಗಿದು ಈಗಾಗಲೇ 15 ದಿನಗಳಾಗಿದೆ. ಈ ಬೆನ್ನಲ್ಲೇ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ (Aravind Kp) ಜೋಡಿ ಸೀಸನ್ 8ರ ವೈಷ್ಣವಿ, ರಘು ಗೌಡ ಅವರನ್ನ ಮೀಟ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
Advertisement
ದೊಡ್ಮನೆಯ ಆಟ ಸೀಸನ್ 9ರಲ್ಲೂ ದಿವ್ಯಾ ಉರುಡುಗ ಪ್ರವೀಣರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಟಾಪ್ 5 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. 5ನೇ ರನ್ನರ್ ಅಪ್ ಆಗಿ ಹೊರಬಂದಿದ್ದರು. ಇದೀಗ ಬಿಗ್ ಬಾಸ್ ಶೋಗೆ ತೆರೆ ಬಿದ್ದಿದೆ. ದಿವ್ಯಾ ಉರುಡುಗ ಫುಲ್ ರಿಲಾಕ್ಸ್ ಮೂಡ್‌ನಲ್ಲಿದ್ದಾರೆ. ಇದನ್ನೂ ಓದಿ: 15 ದಿನಗಳಿಂದ ಸುಧಾರಾಣಿ ಮನೆ ಶ್ವಾನ ನಾಪತ್ತೆ: ಬಿಬಿಎಂಪಿ ವಿರುದ್ಧ ನಟಿ ಗರಂ
Advertisement
View this post on Instagram
Advertisement
ಈ ಹಿಂದಿನ ಬಿಗ್ ಬಾಸ್ 8ರಲ್ಲಿ (Bigg Boss Kannada 8) ಪರಿಚಯವಾಗಿ ಸ್ಪರ್ಧಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವೈಷ್ಣವಿ ಗೌಡ (Vaishnavi Gowda) ಮತ್ತು ರಘು ಗೌಡ (Raghu Gowda) ಅವರನ್ನ ದಿವ್ಯಾ ಮತ್ತು ಅರವಿಂದ್ ಕೆ.ಪಿ ಜೋಡಿ ಭೇಟಿಯಾಗಿದ್ದಾರೆ. ಒಟ್ಟಿಗೆ ಮೋಜು ಮಸ್ತಿ ಮಾಡಿದ್ದಾರೆ. ಒಟ್ಟಾಗಿ ಒಂದೊಳ್ಳೆಯ ಸಮಯವನ್ನ ಕಳೆದಿದ್ದಾರೆ.
Advertisement
ಬಿಗ್ ಬಾಸ್ ಶೋ ಮುಗಿದ ಮೇಲೂ ಕೂಡ ಆ ಸ್ನೇಹವನ್ನ ಮುಂದುವರೆಸಿಕೊಂಡು ಹೋಗಿರೋದನ್ನ ನೋಡಿ ವೈಷ್ಣವಿ, ರಘು, ದಿವ್ಯಾ, ಅರವಿಂದ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k