ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್‍ಬಾಸ್’ ಸೀಸನ್ 6 ಭಾನುವಾರ ಆರಂಭವಾಗಿದ್ದು, ಸಾಮಾನ್ಯ ಸ್ಪರ್ಧಿಗಳು ಸೇರಿದಂತೆ 18 ಮಂದಿ ಬಿಸ್‍ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಆಧುನಿಕ ಶೈಲಿಯಲ್ಲಿ ಕೃಷಿ ಮಾಡಲು ಮುಂದಾಗಿರುವ ರೈತ ಯುವಕ ಶಶಿಕುಮಾರ್ ಬಿಸ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ರೈತ ಯುವಕ ಶಶಿಕುಮಾರ್ ಬಿಸ್‍ಬಾಸ್ ಮನೆಗೆ 12ನೇ ಸ್ಪರ್ಧಿಯಾಗಿ ಪ್ರವೇಶಿಸಿದರು. ತಾನು ಕೇವಲ ರೈತ ಮಾತ್ರವಲ್ಲ ಜನಪದ ಕಲೆಗಳನ್ನು ಕರಗತ ಮಾಡಿಕೊಂಡಿದ್ದೇನೆ. ಕೃಷಿಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದು, ಕೃಷಿಯಲ್ಲೂ ಸಾಧನೆ ಮಾಡಬಹುದು ಎಂದು ಸಾಬೀತು ಪಡಿಸುವುದು ನನ್ನ ಉದ್ದೇಶ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್‍ನ ಸ್ಪೆಷಲ್ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು
Advertisement
Advertisement
ಶಶಿಕುಮಾರ್ ಮಾತು
ರೈತ ಅಂದರೆ ಪಂಚೆ ಹಾಕಿಕೊಂಡು ಅಥವಾ ಕಿತ್ತು ಹೋಗಿರುವ ಬಟ್ಟೆ ಹಾಕಿಕೊಂಡು ಮಣ್ಣಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನಿಗೆ ಒಂದು ಜೀವನ ಶೈಲಿ ಇಲ್ಲ ಅಂದುಕೊಂಡಿರುತ್ತಾರೆ. ಇತ್ತೀಚೆಗೆ ರೈತ ಅಂದರೆ ಆತ್ಮಹತ್ಯೆ, ಸಬ್ಸಿಡಿ ಈ ರೀತಿಯ ಹ್ಯಾಶ್ ಟ್ಯಾಗ್ ಹಾಕಿಕೊಂಡಿದ್ದಾರೆ. ಆದರೆ ತಂತ್ರಗಾರಿಕೆಯಲ್ಲಿ ಜ್ಞಾನ ಪಡೆದುಕೊಂಡು ಆಧುನಿಕ ರೀತಿಯಲ್ಲಿ ಕೃಷಿ ಮಾಡಿ ಮುಂದುವರಿಯಬಹುದು ಎಂದು ಶಶಿಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಕನ್ನಡ ಸೀಸನ್ 6: ಸ್ಪರ್ಧಿಗಳು ಯಾರು? ಹಿನ್ನೆಲೆ ಏನು?
Advertisement
https://www.facebook.com/ColorsSuper/videos/2175718015793083/
Advertisement
ನಾನು ಆಧುನಿಕ ಶೈಲಿಯಲ್ಲಿ ಕೃಷಿ ಮಾಡುವುದರ ಜೊತೆ ಕರ್ನಾಟಕದ ಜಾನಪದ ನೃತ್ಯವಾದ ಡೊಳ್ಳು, ಪಟ್ಟಾ, ಪೂಜಾ, ಕಂಸಾಳೆಯನ್ನು ಕಲಿತಿದ್ದೇನೆ. ನಮ್ಮ ಸ್ನೇಹಿತರ ಒಂದು ತಂಡವಿದೆ. ನಾವೆಲ್ಲಾ ನಾಟಕ, ನೃತ್ಯವನ್ನು ಕಲಿತು ಎಲ್ಲ ಕಡೆ ಪ್ರದರ್ಶನ ಮಾಡಿದ್ದೇವೆ. 5 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದೇವೆ. ಬಿಗ್ ಬಾಸ್ ಮನೆಗೆ ಹೋಗಿ ಆಧುನಿಕವಾಗಿಯೂ ಕೃಷಿ ಮಾಡಿ ಜೀವನದಲ್ಲಿ ಸಾಧನೆ ಮಾಡಬಹುದು ಎಂದು ತಿಳಿಸುವ ಮೂಲಕ ಎಲ್ಲ ರೈತರಿಗೂ ಮಾದರಿಯಾಗಿರುತ್ತೇನೆ ಎಂದು ಹೇಳಿದ್ದಾರೆ.
ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv