ಬಿಗ್‌ಬಾಸ್ (Bigg Boss) ಕಾರ್ಯಕ್ರಮದಲ್ಲಿ ಮಾಜಿ ಸ್ಪರ್ಧಿಗಳ ಅಟ್ಟಹಾಸಕ್ಕೆ ಹಾಲಿ ಸ್ಪರ್ಧಿಗಳು ಬೇಸ್ತು ಬಿದ್ದಿದ್ದಾರೆ. ಕಳೆದ ಸೀಸನ್ ಸ್ಪರ್ಧಿಗಳಾದ ರಜತ್, ಮಂಜು, ತ್ರಿವಿಕ್ರಮ್, ಮೋಕ್ಷಿತಾ ಹಾಗೂ ಚೈತ್ರಾ ಮನೆಯೊಳಗೆ ಎಂಟ್ರಿ ಕೊಟ್ಟು ಸ್ಪರ್ಧಿಗಳಿಗೆ ಕ್ವಾಟ್ಲೆ ಕೊಡುತ್ತಿದ್ದಾರೆ.
ಈ ವಾರದ ಚಟುವಟಿಕೆಯ ಭಾಗವಾಗಿ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಹಾಲಿ ಸ್ಪರ್ಧಿಗಳು ಅತಿಥಿಗಳನ್ನ ಚೆನ್ನಾಗಿ ನೋಡಿಕೊಳ್ಳುವುದು ಚಟುವಟಿಕೆಯ ಭಾಗ. ಇದರ ಅನ್ವಯ ಬಿಗ್‌ಬಾಸ್ ಮನೆ ರೆಸಾರ್ಟ್ ಆಗಿದ್ದು, ಸ್ಪರ್ಧಿಗಳು ರೆಸಾರ್ಟ್ ಸಿಬ್ಬಂದಿಗಳು. ಹೀಗೆ ಬಿಗ್‌ಹೌಸ್‌ಗೆ ಬಂದಿರುವ ಅತಿಥಿಗಳು ಸ್ಪರ್ಧಿಗಳಿಗೆ ಕ್ವಾಟ್ಲೆ ಕೊಡುತ್ತಿದ್ದಾರೆ. ಆದರೆ ಗಿಲ್ಲಿ ಮಾತ್ರ ಬಂದಿರುವ ಅತಿಥಿಗಳಿಗೆ ಟಕ್ಕರ್ ಕೊಡುತ್ತಿದ್ದಾರೆ.ಇದನ್ನೂ ಓದಿ: ತಿಂದಾಕೋ ಇವ್ರಿಗೆ ಇಷ್ಟು ಇರಬೇಕಾದ್ರೆ, ಇನ್ನು ತಂದಾಕೋ ನಮಗೆಷ್ಟು ಇರ್ಬೇಡ: ಗೆಸ್ಟ್‌ಗಳಿಗೆ ಗಿಲ್ಲಿ ಹೀಗನ್ನೋದಾ?
ಮಾಜಿ ಸ್ಪರ್ಧಿ ಉಗ್ರಂ ಮಂಜು ಬ್ಯಾಚುಲರೇಟ್ ಪಾರ್ಟಿ ಸಲುವಾಗಿ ಬಿಗ್‌ಹೌಸ್‌ಗೆ ಬಂದಿದ್ದಾರೆ ಐವರು ಮಾಜಿ ಸ್ಪರ್ಧಿಗಳು. ಇದು ಈ ವಾರದ ಚಟುವಟಿಕೆ. ಅದರ ಪ್ರಕಾರ ಗಿಲ್ಲಿ ರೆಸಾರ್ಟ್‌ಲ್ಲಿ ಸಪ್ಲೇಯರ್ ಆಗಿದ್ದಾರೆ. ಆದರೆ ಬಿಗ್‌ಬಾಸ್ ಅನೌನ್ಸ್ ಮಾಡುವ ವೇಳೆಯೇ ಮಂಜಣ್ಣನ ಕಾಲೆಳೆದು ಆರಂಭದಲ್ಲೇ ಮಂಜಣ್ಣದ ಪಿತ್ತ ನೆತ್ತಿಗೇರುವಂತೆ ಮಾಡಿದ್ರು.
ಉಗ್ರಂ ಮಂಜು ಮದುವೆ ಫಿಕ್ಸ್ ಆಗಿದೆ ಎಂದೊಡನೆ ಗಿಲ್ಲಿ ಮೂರನೇದಾ ಎಂದು ಕಾಲೆಳೆಯುತ್ತಾರೆ. ಈಗ ವೈಯಕ್ತಿಕವಾಗಿ ಬೇಡ ಎಂದು ಗಿಲ್ಲಿಗೆ ವಾರ್ನಿಂಗ್ ಮಾಡಿದ ಮಂಜು ಕ್ಷಮಿಸಿ ಮುನ್ನಡೆದ್ರೆ ಮತ್ತೆ ರಜತ್ ಜೊತೆಗೂ ಗಿಲ್ಲಿಯ ಜಗಳವಾಗುತ್ತೆ. ಬಿಟ್ಟಿ ತಿನ್ನೋಕೆ ಬಂದಿದ್ದೀರಾ ಎಂದು ಹೇಳುವ ಮೂಲಕ ಮಾಜಿ ಸ್ಪರ್ಧಿಗಳಿಗೆ ಗಿಲ್ಲಿ ಮತ್ತೊಮ್ಮೆ ಕಾಲೆಳೆಯುವ ಅವಕಾಶ ಮಾಡಿಕೊಳ್ತಾರೆ. ಈ ವಿಚಾರಕ್ಕೆ ಕೆರಳಿದ ಎಲ್ಲ ಸ್ಪರ್ಧಿಗಳು ಗಿಲ್ಲಿಗೆ ವಾರ್ನಿಂಗ್ ಮಾಡ್ತಾರೆ.
ಮಾಜಿ ಸ್ಪರ್ಧಿಗಳು ಆಗಮಿಸಿದ ಮೊದಲ ದಿನವೇ ಹಾಲಿ ಸ್ಪರ್ಧಿಗಳು ರೋಸ್ಟ್ ಆಗಿದ್ದಾರೆ. ಎರಡನೇ ದಿನ ಇನ್ನೂ ಅನೇಕ ಆಟ, ಪ್ರತಿಆಟಗಳು, ವಾದ ಪ್ರತಿವಾದಗಳು ನಡೆಯುವ ಸಾಧ್ಯತೆ ಇದೆ. ಒಟ್ನಲ್ಲಿ ಬಿಗ್‌ಹೌಸ್‌ಗೆ ಆಗಮಿಸಿದ ಮೊದಲ ದಿನದಿಂದ ಮಾಜಿ ಸ್ಪರ್ಧಿಗಳಿಗೆ ಗಿಲ್ಲಿ ಟಾರ್ಗೆಟ್ ಆಗಿದ್ದಾರೆ. ಅವಕಾಶ ಸಿಕ್ಕಾಗೆಲ್ಲ ಗಿಲ್ಲಿ ಮಾಜಿ ಸ್ಪರ್ಧಿಗಳಿಗೆ ಟಕ್ಕರ್ ಕೊಡೋದನ್ನ ಮಾತ್ರ ನಿಲ್ಲಿಸುತ್ತಿಲ್ಲ. ಇದನ್ನೂ ಓದಿ: ರಿಷಾ ಪ್ರಕಾರ ಬಿಗ್‌ಬಾಸ್ ಟಾಪ್ 5 ಸ್ಪರ್ಧಿಗಳು ಇವರು!

