ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ 11’ರ (Bigg Boss Kannada 11) ವಿನ್ನರ್ (Winner) ಆಗಿರೋ ಹನುಮಂತಗೆ (Hanumantha) ಸಿನಿಮಾ ಆಫರ್‌ಗಳು ಅರಸಿ ಬರುತ್ತಿವೆ. ಬಿಗ್ ಬಾಸ್ ಶೋ ಬಳಿಕ ಹನುಮಂತಗೆ ಬೇಡಿಕೆ ಹೆಚ್ಚಾಗಿದ್ದು, ಸಿನಿಮಾಗೆ ನೋ ಎಂದಿದ್ದಾರೆ. ಇದನ್ನೂ ಓದಿ:‘ಟಾಕ್ಸಿಕ್’ ಸೆಟ್‌ಗೆ ತೆರಳಿ ಯಶ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ
Advertisement
ಬಿಗ್ ಬಾಸ್‌ನಲ್ಲಿ ಗೆದ್ದ ಬಳಿಕ ಹನುಮಂತಗೆ ಸಿನಿಮಾ ಆಫರ್‌ಗಳ ಸುರಿಮಳೆ ಹರಿದು ಬರುತ್ತಿದೆ. ಆದರೆ ಕಿರುತೆರೆ ಹೊರತು ಸಿನಿಮಾ ಸಹವಾಸವೇ ಬೇಡವೆಂಬ ತೀರ್ಮಾನಕ್ಕೆ ಬಂದಿದ್ದಾರೆ ಹನುಮಂತ. ಒಂದಾದ್ಮೇಲೊಂದು ರಿಯಾಲಿಟಿ ಶೋ ಮಾಡ್ತಿರುವ ಹನುಮಂತ ಟಿವಿ ಮೂಲಕ ಜನರ ಪ್ರೀತಿ ಗಳಿಸುವ ನಿಟ್ಟಿನಲ್ಲಿದ್ದಾರೆ.
Advertisement
Advertisement
ದೊಡ್ಮನೆಯಿಂದ ಹೊರ ಬಂದಾದ್ಮೇಲೆ ಮದುವೆ ಹಾಗೂ ಮನೆ ಕಟ್ಟಬೇಕು ಎಂದು ಪ್ಲ್ಯಾನ್ ಮಾಡಿದ್ದಾರೆ. ಕುಟುಂಬಕ್ಕೆ ಹೆಚ್ಚು ಗಮನ ನೀಡುತ್ತಿದ್ದಾರೆ. ಹೀಗಾಗಿ ಸಿನಿಮಾ ಆಫರ್‌ಗಳು ಬಂದರೂ ಸಹ ಹನುಮಂತ ಡೋಂಟ್ ಕೇರ್ ಎಂದಿದ್ದಾರೆ.
Advertisement
ಅಂದಹಾಗೆ, ಬಿಗ್ ಬಾಸ್ ಬಳಿಕ ಅವರು ‘ಬಾಯ್ಸ್ ವರ್ಸಸ್ ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಮತ್ತೆ ಪ್ರೇಕ್ಷಕರ ಮನ ಗೆಲ್ಲಲು ಹನುಮಂತ ಬಂದಿದ್ದಾರೆ.