‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ತೆರೆಬಿದ್ದಿದೆ. ಅಂತೂ ಇಂತೂ ಗಾನ ಕೋಗಿಲೆ ಹನುಮಂತ ಬಿಗ್ ಬಾಸ್ 11ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ಹನುಮಂತ (Hanumantha) ವಿನ್ನರ್ (Winner) ಆಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಬಿಗ್ ಬಾಸ್ ಆಟ ಶುರುವಾಗಿ 4 ವಾರ ಕಳೆದ ಮೇಲೆ ಸ್ಪರ್ಧಿಯಾಗಿ ದೊಡ್ಮನೆಗೆ ಹನುಮಂತ ಕಾಲಿಟ್ಟರು. ಮನೆಯ ಜಗಳ ನೋಡಿ ಹನುಮಂತು ಬೆಚ್ಚಿಬಿದ್ದಿದ್ದರು. ಆದರೂ ಛಲ ಬಿಡದೇ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಫಿನಾಲೆಗೆ ಮೊದಲು ಆಯ್ಕೆಯಾದರು.
ಈಗ ಪರಾಕ್ರಮ ಮೆರೆದ ತ್ರಿವಿಕ್ರಮ್‌ಗೆ ಮಣ್ಣು ಮುಕ್ಕಿಸಿ ವಿನ್ನರ್ ಆಗಿ ಹನುಮಂತು ಹೊರಹೊಮ್ಮಿದ್ದಾರೆ. ಜೊತೆಗೆ 50 ಲಕ್ಷ ರೂಪಾಯಿ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ:ದಾನ-ಧರ್ಮ ಬೇಕು.. ದಡ್ಡತನ ಬೇಡ: ಲಕ್ಷ ಲಕ್ಷ ಹಣವನ್ನ ದಾನ ಮಾಡ್ತೀನಿ ಎಂದ ಮಂಜು ಕಿವಿ ಹಿಂಡಿದ ಸುದೀಪ್
ಇನ್ನೂ ಮನದರಸಿಯ ಬಗ್ಗೆ ಆಗಾಗ ಹನುಮಂತ ಹೇಳುತ್ತಿದ್ದರು. ‘ಬಿಗ್ ಬಾಸ್’ ಪಟ್ಟ ಗೆದ್ದರೆ ಅತ್ತಿ ಮನೆಗೆ ಹೋಗಿ ಹುಡುಗಿಯನ್ನು ಕೇಳುತ್ತೇನೆ ಎಂದು ಹನುಮಂತ ಹೇಳಿದ್ದರು. ಹಾಗಾದ್ರೆ ಕರ್ನಾಟಕದ ಜನತೆಗೆ ತಮ್ಮ ಹುಡುಗಿಯ ಪರಿಚಯ ಮಾಡಿಸಿ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ? ಎಂದು ಕಾದುನೋಡಬೇಕಿದೆ.