‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ಇನ್ನೇನು ಕೆಲವೇ ಗಂಟೆಗಳಲ್ಲಿ ತೆರೆಬೀಳಲಿದೆ. ‘ಬಿಗ್ ಬಾಸ್’ ವಿನ್ನರ್ ಪಟ್ಟ ಯಾರ ಪಾಲಾಗಲಿದೆ ಎಂಬುದನ್ನು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ದೊಡ್ಮನೆ ಫಿನಾಲೆ ಅಖಾಡದಿಂದ ಇಬ್ಬರು ಪ್ರಬಲ ಸ್ಪರ್ಧಿಗಳೇ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಅನಂತ್ ಸರ್‌ಗೆ ಪದ್ಮಭೂಷಣ ಸಿಕ್ಕಿರೋದು ವೈಯಕ್ತಿಕವಾಗಿ ನನಗೆ ಸಿಕ್ಕಷ್ಟು ಖುಷಿಯಿದೆ: ಕಿಚ್ಚ
ಬಿಗ್ ಬಾಸ್ ಫಿನಾಲೆಯಲ್ಲಿ ಉಗ್ರಂ ಮಂಜು, ಮೋಕ್ಷಿತಾ, ತ್ರಿವಿಕ್ರಮ್, ಹನುಮಂತ, ರಜತ್ ಇದ್ದಾರೆ. ಇದರಲ್ಲಿ ಈಗಾಗಲೇ ಭವ್ಯಾ ಗೌಡ ಎಲಿಮಿನೇಟ್ ಆಗಿದ್ದಾರೆ. ಉಳಿದಿರುವ 5 ಸ್ಪರ್ಧಿಗಳಲ್ಲಿ ರಜತ್ (Rajath) ಮತ್ತು ಉಗ್ರಂ ಮಂಜು (Ugramm Manju) ಹೊರಬಂದಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸದ್ಯ ಫಿನಾಲೆ ವೇದಿಕೆಯಲ್ಲಿ ಹನುಮಂತ, ಮೋಕ್ಷಿತಾ ಮತ್ತು ತ್ರಿವಿಕ್ರಮ್ ಇದ್ದಾರೆ ಎನ್ನಲಾಗಿದ್ದು, ಈ ಮೂವರಲ್ಲಿ ಯಾರಿಗೆ ಗೆಲುವಿನ ವಿಜಯಲಕ್ಷ್ಮಿ ಒಲಿಯಲಿದ್ದಾರೆ ಕಾದುನೋಡಬೇಕಿದೆ.