ದೊಡ್ಮನೆ ಆಟಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈ ಬಾರಿ ಸ್ವರ್ಗ ಮತ್ತು ನರಕ ಅಂತ ಎರಡು ಥೀಮ್‌ಗಳೊಂದಿಗೆ ‘ಬಿಗ್ ಬಾಸ್’ ಆಟ ಶುರುವಾಗಲಿದೆ. ಅದ್ಧೂರಿಯಾಗಿ ಸಿದ್ಧವಾಗಿರುವ ‘ಬಿಗ್ ಬಾಸ್’ (Bigg Boss Kannada 11) ಮನೆಯ ತೆರೆಹಿಂದಿನ ಕಸರತ್ತು ಹೇಗಿತ್ತು? ಎಂಬುದರ ಝಲಕ್ ಅನ್ನು ವಾಹಿನಿ ರಿವೀಲ್ ಮಾಡಿದೆ.
ಈ ಬಾರಿ ಸ್ವರ್ಗ ಮತ್ತು ನರಕ ಅಂತ ಥೀಮ್‌ನಲ್ಲಿ ದೊಡ್ಮನೆ ಆಟ ಶುರುವಾಗಲಿದ್ದು, ‘ಬಿಗ್’ ಮನೆಗೆ ಬರಲಿರುವ ಸ್ಪರ್ಧಿಗಳು ಯಾವ ಟೀಮ್‌ಗೆ ಯಾರೆಲ್ಲಾ ಬರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಇದನ್ನೂ ಓದಿ:2 ವರ್ಷಗಳ ನಂತರ ಬೆಳ್ಳಿಪರದೆಗೆ ಮರಳಿದ ಸಾಯಿ ಪಲ್ಲವಿ
ಸ್ವರ್ಗ ಮತ್ತು ನರಕ ಎರಡು ಲೋಕವನ್ನು ತೋರಿಸಲು ‘ಬಿಗ್ ಬಾಸ್’ ತಂಡ ದೊಡ್ಡ ಮಟ್ಟದಲ್ಲಿಯೇ ತಯಾರಿ ಮಾಡಿರುವ ಚೆಂದದ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಲಕ್ಷುರಿ ಆಗಿಯೇ ಬಿಗ್ ಬಾಸ್ ಮನೆ ಸಿದ್ಧವಾಗುತ್ತಿದೆ.
ಪೂರ್ತಿಯಾಗಿ ಬಿಗ್ ಬಾಸ್ ಮನೆ ಹೇಗಿರಲಿದೆ ಎಂಬ ಅನಾವರಣ ಆಗದೇ ಇದ್ದರೂ ಮೇಕಿಂಗ್ ಝಲಕ್‌ನಿಂದ ಫ್ಯಾನ್ಸ್‌ಗೆ ಸುಳಿವಂತೂ ಸಿಕ್ಕಿದೆ. ಎಂದಿನಂತೆ ಈ ಬಾರಿಯೂ ಘಟಾನುಘಟಿ ಸ್ಪರ್ಧಿಗಳ ಆಗಮನವಾಗಲಿದೆ.
ಇನ್ನೂ ಬಿಗ್ ಬಾಸ್ ಲಾಂಚ್‌ಗಿಂತ ಮೊದಲೇ 5 ಜನ ಸ್ಪರ್ಧಿಗಳ ಹೆಸರು ರಿವೀಲ್ ಆಗುತ್ತಿರೋದು ಈ ಸೀಸನ್ ಸ್ಪೆಷಾಲಿಟಿ ಆಗಿದೆ. ಕಳೆದ ಸೀಸನ್‌ಗಿಂತ ಪ್ರಭಲ ಸ್ಪರ್ಧಿಗಳೇ ಬರಲಿದ್ದಾರೆ. ’ರಾಜ ರಾಣಿ’ (Raja Rani) ಗ್ರ್ಯಾಂಡ್ ಫಿನಾಲೆಯಲ್ಲಿ ಇಂದು (ಸೆ.28) ಸರ್ಪ್ರೈಸ್ ಸಿಗಲಿದೆ.
View this post on Instagram
ಸೆ.29ರಂದು ಸಂಜೆ 6ಕ್ಕೆ ಗ್ರ‍್ಯಾಂಡ್ ಆಗಿ ಲಾಂಚ್ ಆಗುತ್ತಿದ್ದು, ಪ್ರತಿದಿನ ರಾತ್ರಿ 9.30ಕ್ಕೆ ಶೋ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ. ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಗೆ ಬರಲಿದ್ದಾರೆ ಕಾಯಬೇಕಿದೆ.