– ಫಿನಾಲೆಯಲ್ಲಿದ್ದ ಸ್ಪರ್ಧಿಗಳ ವ್ಯಕ್ತಿತ್ವನ್ನು 4 ಸಾಲಿನ ಹಾಡಿನಲ್ಲೇ ಪರಿಚಯಿಸಿದ ಹಳ್ಳಿ ಹೈದ
‘ಬಿಗ್ ಬಾಸ್ ಕನ್ನಡ 11’ರ ಆಟ ಅಂತಿಮ ಘಟ್ಟ ತಲುಪಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದದ್ದು ಇದ್ಹಂಗೆ ಮಾತಾಡಿ ಜನರ ಮನ ಗೆದ್ದಿರುವ ಹಳ್ಳಿ ಹೈದ ಹನುಮಂತ ‘ಗ್ರ್ಯಾಂಡ್ ಫಿನಾಲೆ’ಯಲ್ಲಿ ತನ್ನ ಸಹಸ್ಪರ್ಧಿಗಳ ಬಗ್ಗೆ ಮಾತನಾಡುವಾಗ ಪೇಚಿಗೆ ಸಿಲುಕಿದ ಪ್ರಸಂಗ ನಡೆಯಿತು.
Advertisement
ಕಿಚ್ಚ ಸುದೀಪ್ ಮಾತನಾಡಿ, ಬಿಗ್ ಬಾಸ್ಗೆ ಎಂಟ್ರಿಯಾದ ಹನುಮಂತಗೂ ಕೊನೆ ದಿನದ ಹನುಮಂತಗೂ ಏನು ವ್ಯತ್ಯಾಸ ಇದೆ ಅಂತ ಕೇಳಿದರು. ಅದಕ್ಕೆ ಹನುಮಂತ, ಏನು ಇಲ್ರಿ ಸರ್ರ.. ಬರುವಾಗಲೂ ಖಾಲಿ ಇದ್ದೆ.. ಹೋಗುವಾಗಲು ಖಾಲಿ.. ಇರೋಗಂಟ ಜಾಲಿ ಜಾಲಿಯಾಗಿದ್ದೆ’ ಎಂದು ತಮ್ಮದೇ ಮಾತಿನ ಶೈಲಿಯಲ್ಲಿ ಹೇಳಿದರು. ಇದಕ್ಕೆ ಕಿಚ್ಚ ಸೇರಿದಂತೆ ನೆರೆದಿದ್ದವು ನಕ್ಕರು. ಹಳ್ಳಿ ಹುಡುಗನ ಮಾತಿಗೆ ಶಿಳ್ಳೆ-ಚಪ್ಪಾಳೆ ಹರಿದುಬಂತು.
Advertisement
ಹನುಮಂತ ಮುಂದುವರಿದು, ನೀನು ಹೋದರೂ ಒಂದೆರಡು ವಾರ ತಮ್ಮ ಅಂತ ಸ್ನೇಹಿತರೇ ಮಾತನಾಡಿದ್ದರು. ಏನೇ ಆಗಲಿ, ಫಸ್ಟ್ ಹೋಗ್ತೀನಿ. ಆಮೇಲೆ ವಿಚಾರ ಮಾಡ್ತೀನಿ ಅನ್ನೋ ಲೆಕ್ಕಾಚಾರಕ್ಕೆ ಬಂದೆ. ಆಮೇಲೆ ಎಲ್ಲರ ಜೊತೆ ಬೆರೆಯುತ್ತಾ ಅರ್ಥ ಆಯ್ತು, ಇವರ ಬಣ್ಣ ಎಷ್ಟು (ಉಳಿದ ಸ್ಪರ್ಧಿಗಳು) ಅರ್ಥ ಆಯ್ತು ರೀ. ನಂತರ ನಾನು ಚೆನ್ನಾಗಿ ಆಟ ಆಡಿ ಇಲ್ಲಿವರೆಗೆ ಬಂದೆ ಎಂದರು.
Advertisement
ಇದನ್ನೇ ಕ್ಯಾಚ್ ಮಾಡಿದ ಕಿಚ್ಚ, ಯಾರ್ಯಾರ ಬಣ್ಣ ಏನು ಅಂತ ಗೊತ್ತಾಯ್ತು.. ಅವರವರು ಆಡಿದ್ದ ಆಟ ನೋಡಿದೆ ಅಂದ್ರಲ್ಲ.. ಒಬ್ಬೊಬ್ಬರ ಹೆಸರು ಹೇಳ್ಕೊಂಡು ಹೋಗ್ತೀನಿ.. ನೀವು ಅಭಿಪ್ರಾಯ ತಿಳಿಸಿ ಎಂದು ಹನುಮಂತುಗೆ ಕೇಳಿದರು. ಆಗ ಫಿನಾಲೆಯಲ್ಲಿದ್ದ ಸ್ಪರ್ಧಿಗಳು, ‘ಲಾಸ್ಟ್ ಮೂಮೆಂಟ್ ಹೇಳ್ಬಿಡು’ ಎಂದು ಒತ್ತಾಯಿಸಿದರು. ಆಗ ತಲೆ ಕೆರೆದುಕೊಳ್ಳುತ್ತಾ ಹನುಮಂತು, ‘ನಾನು ಆ ಲೆಕ್ಕಕ್ಕೆ ಹೇಳಿಲ್ಲೋ ಮಾರಾಯ’ ಎಂದರು. ಆಗ ಹನುಮಂತು ಪೇಚಿಗೆ ಸಿಲುಕಿದಂತೆ ಕಂಡುಬಂದರು. ಕೊನೆಗೆ ಎಲ್ಲಾ ಸ್ಪರ್ಧಿಗಳ ಬಗ್ಗೆ ಹನುಮಂತ ಅಭಿಪ್ರಾಯ ತಿಳಿಸಿದರು.
Advertisement
ಕಿಚ್ಚ ಸುದೀಪ್ ಮಾತನಾಡಿ, ಆನ್ ಸ್ಪಾಟಲ್ಲಿ ಹೆಂಗಿದ್ರೂ ನೀವು ಹಾಡು ಕಟ್ಟುತ್ತೀರಿ.. ನಿಮ್ಮ ಅಕ್ಕಪಕ್ಕ ಕುಳಿತಿರುವ ಸ್ಪರ್ಧಿಗಳ ಬಗ್ಗೆಯೇ ಹಾಡಿನಲ್ಲಿ ಪರಿಚಯಿಸಿ ಎಂದು ಒತ್ತಾಯಿಸಿದರು.
ತ್ರಿವಿಕ್ರಮನಂಥ ಮಗನಿರಬೇಕು ಆಟ ಆಡಾಕ.. ಮನೆಯಾಗ ಪಾಠ ಹೇಳುವುದಕ್ಕ.. ರಜತ್ನಂಥ ಮಗ ಇರಬಾರದು ಜಗಳ ಆಡೋದಕ್ಕ.. ಮೋಕ್ಷಿತಳಂಥ ಮಗಳಿರಬೇಕು ಹಾಡು ಹೇಳಕ.. ಮಂಜಣ್ಣನಂಥ ಮಗ ಇರಬಾರದು ಹಾಡ ಕೆಡಿಸಾಕ.. ಎಂದು ನಾಲ್ಕೇ ಸಾಲಿನಲ್ಲಿ ಸ್ಪರ್ಧಿಗಳ ಬಗ್ಗೆ ಹೇಳಿ ಗಮನ ಸೆಳೆದರು.