ಟಿವಿ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಶುಭಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಇಂದು ಸಂಜೆ 6 ಗಂಟೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ (Bigg Boss Kannada 11) ಗ್ರ‍್ಯಾಂಡ್ ಓಪನಿಂಗ್ ಆರಂಭವಾಗುತ್ತಿದೆ. ಸದ್ಯ ಸುದೀಪ್ (Kichcha Sudeep) ಸ್ಟೈಲೀಶ್ ಆಗಿ ಎಂಟ್ರಿ ಕೊಟ್ಟಿರುವ ಪ್ರೋಮೋವನ್ನು ವಾಹಿನಿ ರಿವೀಲ್ ಮಾಡಿದೆ.
ಈಗಾಗಲೇ ಬಿಗ್ ಬಾಸ್ ಮನೆಗೆ ಹೋಗುವ ಎಲ್ಲಾ ಕಂಟೆಸ್ಟೆಂಟ್ಸ್‌ಗಳು ಗ್ರ‍್ಯಾಂಡ್ ಫಿನಾಲೆ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಹೊಸ ಸೀಸನ್, ಹೊಸ ಮನೆ, ಹೊಸ ಕಂಟೆಸ್ಟೆಂಟ್ಸ್, ಹೊಸ ಆಟ ಇನ್ನೇನು ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದನ್ನೂ ಓದಿ:BBK 11: ದೊಡ್ಮನೆ ಆಟಕ್ಕೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪಕ್ಕಾ ಲಿಸ್ಟ್
ಇದೆಲ್ಲದರ ನಡುವೆ ಸುದೀಪ್ ಸನ್‌ಗ್ಲಾಸ್ ಧರಿಸಿ ‘ಬಿಗ್ ಬಾಸ್’ ವೇದಿಕೆ ಸ್ಟೈಲೀಶ್ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳ ಡ್ಯಾನ್ಸ್‌ನ ಸಣ್ಣ ಝಲಕ್ ಶೇರ್ ಮಾಡಿದ್ದಾರೆ. ಮುಖ ತೋರಿಸದೇ ಇದ್ದರೂ ಡ್ಯಾನ್ಸ್ ಸಣ್ಣ ತುಣುಕು ಎಲ್ಲರ ಗಮನ ಸೆಳೆಯುತ್ತಿದೆ.
ಇನ್ನೂ ನಿನ್ನೆ ಬಿಗ್ ಬಾಸ್ ಶೋಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಅದರ ಪ್ರಸಾರ ಇಂದು (ಸೆ.29) ಸಂಜೆ 6 ಗಂಟೆಗೆ ವಾಹಿನಿಯಲ್ಲಿ ಮೂಡಿ ಬರಲಿದೆ. ಇನ್ನೂ ಸ್ಪರ್ಧಿಗಳ ಪಕ್ಕಾ ಲಿಸ್ಟ್ ಕೂಡ ಸಿಕ್ಕಿದೆ.
ಮೋಕ್ಷಿತಾ ಪೈ(Mokshitha Pai), ಭವ್ಯಾ ಗೌಡ (Bhavya Gowda), ಚೈತ್ರಾ ಕುಂದಾಪುರ, ಅನುಷಾ ರೈ, ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ಧನರಾಜ್ ಆಚಾರ್, ಐಶ್ವರ್ಯಾ ಸಿಂದೋಗಿ, ಯಮುನಾ ಶ್ರೀನಿಧಿ, ತ್ರಿವಿಕ್ರಮ್, ಶೀಶಿರ್, ಗೋಲ್ಡ್ ಸುರೇಶ್, ಗೌತಮಿ, ಮಾನಸಾ, ರಂಜಿತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಾಗಿದೆ. ಇನ್ನೇನಿದ್ರೂ ಥೀಮ್ ಪ್ರಕಾರ, ಸ್ವರ್ಗಕ್ಕೆ ಹೋಗ್ತಾರಾ? ಅಥವಾ ನರಕಕ್ಕೆ ಹೋಗ್ತಾರಾ ಕಾದುನೋಡಬೇಕಿದೆ.