– 10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ- ಬಿಗ್ ಬಾಸ್ ಸೀಸನ್ 11 ಪ್ರೋಮೋ ಔಟ್
ಟಿವಿ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದೆ. ಅಂತೂ ಇಂತೂ ಪ್ರೇಕ್ಷಕರ ಕುತೂಹಲಕ್ಕೆ ತೆರೆಬಿದ್ದಿದೆ. ಕಿಚ್ಚ ಸುದೀಪ್ (Kiccha Sudeep) ಅವರು ಮಾಸ್ ಡೈಲಾಗ್ ಹೊಡೆದ ನಯಾ ಬಿಗ್ ಬಾಸ್ ಪ್ರೋಮೋವೊಂದು ರಿಲೀಸ್ ಆಗಿದೆ.
Promo is nothing but “Kirraakk”
ಇದು ಹೊಸ ಅಧ್ಯಾಯ
Original Source @ColorsKannada
Credits: #Namdebiggboss page
#BiggBossKannada11#Biggbosskannada #bbk11 pic.twitter.com/PtAsvHdOCO
— ವಿಷು (@bengalurubouy2) September 15, 2024
ಸುದೀಪ್ ಅವರು ಬಿಗ್ ಬಾಸ್ ಪ್ರೋಮೋದಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ. ಇದು ಹೊಸ ಅಧ್ಯಾಯ ಎಂದು ಸುದೀಪ್ ಮಾಸ್ ಡೈಲಾಗ್ ಹೊಡೆದಿದ್ದಾರೆ. ಸೆ.29ರಿಂದ ಬಿಗ್ ಬಾಸ್ ಶೋ (Bigg Boss Season 11) ಶುರುವಾಗಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಮನೆಯಲ್ಲಿ ಗಣೇಶ ಹಬ್ಬ ಸಂಭ್ರಮ – ಪೂಜೆಯಲ್ಲಿ ಸಲ್ಮಾನ್ ಖಾನ್ ಭಾಗಿ
#BBK11
It’s official #Biggbosskannada11 from 29th September, 2024
Promo with #KicchaSudeep got telecasted on @ColorsKannada
Kiccha reenacted KGF 2 style entry.. top notch pic.twitter.com/PpHla03luu
— ವಿಷು (@bengalurubouy2) September 15, 2024
ಈ ಮೂಲಕ ನಿರೂಪಕ ಬದಲಾಗ್ತಾರೆ ಎಂಬ ಸುದ್ದಿಗೆ ಬ್ರೇಕ್ ಬಿದ್ದಿದೆ. ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹಾಗಾದ್ರೆ ಯಾರೆಲ್ಲಾ ತಾರೆಯರು ಸ್ಪರ್ಧಿಗಳಾಗಿ ಬರಲಿದ್ದಾರೆ ಕಾಯಬೇಕಿದೆ.