ಅಂತೂ ಇಂತೂ ಬಿಗ್ ಬಾಸ್ ಸ್ಪರ್ಧಿಗಳ ಕುತೂಹಲಕ್ಕೆ ತೆರೆಬಿದ್ದಿದೆ. ದೊಡ್ಮನೆಯ ಬರಲಿರುವ ಮೊದಲ ಸ್ಪರ್ಧಿಯ ಬಗ್ಗೆ ಅನಾವರಣ ಆಗಿದೆ. ಕಿರುತೆರೆ ಫೇಮಸ್ ನಟಿ ಗೌತಮಿ ಜಾದವ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ (Bigg Boss Kannada 11) ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ.
ಇದು ‘ರಾಜ ರಾಣಿ’ ಗ್ರ್ಯಾಂಡ್ ಫಿನಾಲೆಯಲ್ಲಿ ಗೌತಮಿ (Gouthami Jadav) ಹೆಸರು ರಿವೀಲ್ ಆಗಿದೆ. ಸತ್ಯ (Sathya) ಸೀರಿಯಲ್ ಖ್ಯಾತಿಯ ಗೌತಮಿ ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ನೋಡಬಹುದುದಾಗಿದೆ, ಹಾಗಾದ್ರೆ ಅವರು ಸ್ಪರ್ಗಕ್ಕೆ ಹೋಗ್ತಾರಾ? ಅಥವಾ ನರಕಕ್ಕೆ ಹೋಗ್ತಾರಾ? ಅದು ಪ್ರೇಕ್ಷಕರಿಗೆ ನಿರ್ಧರಿಸುವ ಅವಕಾಶವಿದೆ.
ಅಂದಹಾಗೆ, ನಟಿ ಗೌತಮಿ ನಾಗ ಪಂಚಮಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.