‘ಶನಿ’, ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ರಂಜಿತ್ ಕುಮಾರ್ (Ranjith Kumar) ಅವರು ಬಹುಕಾಲದ ಗೆಳತಿ ಮಾನಸಾ ಗೌಡ (Manasa Gowda) ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿಗಳು ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್ ಕ್ವೀನ್ ಇಸ್ ಬ್ಯಾಕ್- ರಮ್ಯಾಗೆ ಯೋಗರಾಜ್ ಭಟ್ ಡೈರೆಕ್ಷನ್
ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಮಾನಸಾ ಜೊತೆ ರಂಜಿತ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಿದೆ. ಎಂಗೇಜ್‌ಮೆಂಟ್‌ನಲ್ಲಿ ವೈಟ್ ಬಣ್ಣದ ಕಾಸ್ಟ್ಯೂಮ್‌ನಲ್ಲಿ ರಂಜಿತ್ ಕಾಣಿಸಿಕೊಂಡಿದ್ರೆ, ಮಾನಸಾ ಕ್ರೀಮ್ ಕಲರ್ ಉಡುಗೆಯಲ್ಲಿ ಮಿಂಚಿದ್ದಾರೆ.
ರಂಜಿತ್ ಎಂಗೇಜ್‌ಮೆಂಟ್‌ನಲ್ಲಿ ಶಿಶಿರ್, ಭವ್ಯಾ(Bhavya Gowda), ಐಶ್ವರ್ಯಾ, ಮೋಕ್ಷಿತಾ ಪೈ(Mokshitha Pai), ಅನುಷಾ ರೈ ಭಾಗಿಯಾಗಿ ಶುಭಕೋರಿದ್ದಾರೆ. ಸದ್ಯದಲ್ಲೇ ಹೊಸ ಬಾಳಿಗೆ ಕಾಲಿಡಲಿರುವ ರಂಜಿತ್‌ಗೆ ಫ್ಯಾನ್ಸ್ ಕೂಡ ಶುಭಕೋರುತ್ತಿದ್ದಾರೆ.