ಬಿಗ್ ಬಾಸ್ ಕನ್ನಡ (Big Boss Kannada) 11ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದೇ ಸೆ.29ಕ್ಕೆ ಶೋ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಹೀಗಿರುವಾಗ ಪ್ರೇಕ್ಷಕರಿಗೊಂದು ಸಿಹಿಸುದ್ದಿ ಸಿಕ್ಕಿದೆ. ದೊಡ್ಮನೆ ಆಟ ಶುರುವಾಗುವ ಮೊದಲೇ ಬಿಗ್ ಬಾಸ್ ಗೆ ಕಾಲಿಡುವ ಸ್ಪರ್ಧಿಯ ಹೆಸರನ್ನು ರಿವೀಲ್ ಮಾಡಲಿದೆ ವಾಹಿನಿ.
ಹೌದು, ಬಿಗ್ ಬಾಸ್ ಲಾಂಚ್ ಗೂ ಮೊದಲೇ ಕಂಟೆಸ್ಟೆಂಟ್ ಗಳ ಹೆಸರನ್ನು ರಿವೀಲ್ ಮಾಡುವ ಪ್ಲ್ಯಾನ್ ಇದೆ ಎಂದು ಕಲರ್ಸ್ ವಾಹಿನಿಯ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ತಿಳಿಸಿದ್ದಾರೆ. ಸೆ.28ರಂದು ಸಂಜೆ 6ಕ್ಕೆ ‘ರಾಜಾ ರಾಣಿ ರೀಲೋಡ್’ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು, ಇದರಲ್ಲಿ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡೋದಾಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್ 11’ರಲ್ಲಿ ಸುದೀಪ್ ಕಾಸ್ಟ್ಯೂಮ್ ಹೇಗಿರುತ್ತೆ?: ಸುಳಿವು ಕೊಟ್ಟ ಕಿಚ್ಚ
Advertisement
Advertisement
ಬಿಗ್ ಬಾಸ್ ಲಾಂಚ್ ಗಿಂತ ಮೊದಲೇ ಸ್ಪರ್ಧಿಗಳ ಹೆಸರು ರಿವೀಲ್ ಆಗುತ್ತಿರೋದು ಈ ಸೀಸನ್ ಸ್ಪೆಷಾಲಿಟಿ ಎಂದಿದ್ದಾರೆ. ಕಳೆದ ಸೀಸನ್ ಗಿಂತ ಭಿನ್ನವಾಗಿರುವ ಸ್ಪರ್ಧಿಗಳೇ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಇನ್ನೂ ಸೆ.29ರಂದು ಸಂಜೆ 6ಕ್ಕೆ ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತಿದ್ದು, ಪ್ರತಿದಿನ ರಾತ್ರಿ 9:30ಕ್ಕೆ ಶೋ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ. ಕಿಚ್ಚನ (Sudeep) ನಯಾ ಖದರ್ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ. ಇದನ್ನೂ ಓದಿ: Bigg Boss Hindi 18: ಸಲ್ಮಾನ್ ಖಾನ್ ನಿರೂಪಣೆಯ ’ಬಿಗ್ ಬಾಸ್’ ಪ್ರೋಮೋ ಔಟ್
Advertisement
ಅಂದಹಾಗೆ ಬಿಗ್ ಬಾಸ್ ಬರಲಿರುವ ಕೆಲ ಸ್ಪರ್ಧಿಗಳ ಹೆಸರು ಸದ್ದು ಮಾಡುತ್ತಿದೆ. ಮೋಕ್ಷಿತಾ ಪೈ, ಹುಲಿ ಕಾರ್ತಿಕ್, ಸುಕೃತಾ ನಾಗ್, ಕಿರುತೆರೆ ನಟಿ ಅಮೂಲ್ಯ, ಭವ್ಯಾ ಗೌಡ, ವರ್ಷಾ ಕಾವೇರಿ ಸೇರಿದಂತೆ ಅನೇಕರು ಹೆಸರು ಚಾಲ್ತಿಯಲ್ಲಿದೆ. ಯಾರೆಲ್ಲಾ ದೊಡ್ಮನೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.